Home> Spiritual
Advertisement

Mahalaya Amavasya: ನಾಲ್ಕು ಗ್ರಹಗಳ ಶುಭ ಯೋಗ, ಮೂರು ದಿನಗಳ ಬಳಿಕ ಈ ರಾಶಿಯವರಿಗೆ ಭಾಗ್ಯೋದಯ

ಮಹಾಲಯ ಅಮಾವಾಸ್ಯೆ: ಈ ವರ್ಷ ಅಕ್ಟೋಬರ್ 25ರ ಭಾನುವಾರದಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುವುದು. ಈ ದಿನದಂದು ನಾಲ್ಕು ಗ್ರಹಗಳಿಂದ ಶುಭ ಯೋಗ ರೂಪುಗೊಳ್ಳಲಿದ್ದು ಇದು ಐದು ರಾಶಿಯವರ ಜೀವನವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ.  

Mahalaya Amavasya: ನಾಲ್ಕು ಗ್ರಹಗಳ ಶುಭ ಯೋಗ, ಮೂರು ದಿನಗಳ ಬಳಿಕ ಈ ರಾಶಿಯವರಿಗೆ ಭಾಗ್ಯೋದಯ

ಮಹಾಲಯ ಅಮಾವಾಸ್ಯೆ: 2022ರ ಅಕ್ಟೋಬರ್ 25ರ ಭಾನುವಾರದಂದು ಮಹಾಲಯ ಅಮಾವಾಸ್ಯೆ ಅನ್ನು ಆಚರಿಸಲಾಗುತ್ತಿದೆ.  ಈ ದಿನ ನಾಲ್ಕು ಗ್ರಹಗಳಿಂದ ಶುಭ ಯೋಗವು ನಿರ್ಮಾಣಗೊಳ್ಳಲಿದೆ. ಈ ದಿನ ಚಂದ್ರನು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಚಲಿಸುತ್ತಾನೆ. ಇದು ಕನ್ಯಾರಾಶಿಯಲ್ಲಿ ನಾಲ್ಕು ಗ್ರಹಗಳ ಶುಭ ಸಂಯೋಜನೆಗೊಳ್ಳಲಿವೆ. ಈ ಸಂಯೋಜನೆಯಲ್ಲಿ ಬುಧಾದಿತ್ಯ ಮತ್ತು ಲಕ್ಷ್ಮೀ ನಾರಾಯಣ ಯೋಗಗಳೂ ಸೇರಿವೆ. ಈ ಸಂಯೋಜನೆಯ ಪರಿಣಾಮವು ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಮೇಲೂ ಇರುತ್ತದೆ, ಆದರೆ ವಿಶೇಷವಾಗಿ 5 ರಾಶಿಯವರಿಗೆ ಈ ಯೋಗವು ತುಂಬಾ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಅವರ ಜೀವನದಲ್ಲಿ ಭಾಗ್ಯೋದಯವಾಗಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

ಮಹಾಲಯ ಅಮಾವಾಸ್ಯೆಯಂದು ರೂಪುಗೊಳ್ಳಲಿದೆ ಶುಭ ಯೋಗ, ಬೆಳಗಲಿದೆ 5 ರಾಶಿಯವರ ಜೀವನ :

ಮೇಷ ರಾಶಿ: 
ಮೇಷ ರಾಶಿಯವರಿಗೆ ಮಹಾಲಯ ಅಮಾವಾಸ್ಯೆಯಂದು ಹೆಚ್ಚಿನ ಲಾಭವಾಗಲಿದೆ. ವಿರೋಧಿಗಳು ಮತ್ತು ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ವೃತ್ತಿ ಜೀವನದ ದೃಷ್ಟಿಯಿಂದಲೂ ಈ ಯೋಗವು ಮೇಷ ರಾಶಿಯವರಿಗೆ ತುಂಬಾ ಫಲಕಾರಿಯಾಗಲಿದೆ. ವೃತ್ತಿಯಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರಲಿದೆ. ಉತ್ತಮ ಆರೋಗ್ಯ ನಿಮ್ಮದಾಗಲಿದೆ. 

ವೃಷಭ ರಾಶಿ:
ಮಹಾಲಯ ಅಮಾವಾಸ್ಯೆಯಂದು ರೂಪುಗೊಳ್ಳಲಿರುವ ಯೋಗವು ವೃಷಭ ರಾಶಿಯವರಿಗೆ ಉತ್ತಮ ಅವಕಾಶಗಳನ್ನು ತರುತ್ತದೆ. ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು. ಯುವಕರ ವಿವಾಹ ಸಂಬಂಧಗಳನ್ನು ಸರಿಪಡಿಸಬಹುದು. ಫ್ಯಾಷನ್, ಕಲೆ, ಆಭರಣ, ಬಟ್ಟೆ ವ್ಯಾಪಾರ ಮಾಡುವವರ ಆದಾಯದಲ್ಲಿ ಹೆಚ್ಚಳವಾಗಲಿದೆ. 

ಇದನ್ನೂ ಓದಿ- ಸಾಯುತ್ತಿರುವವರ ವ್ಯಕ್ತಿಯ ಬಾಯಿಗೆ ಇವುಗಳಲ್ಲಿ ಒಂದನ್ನು ಹಾಕಿದರೂ ಮೋಕ್ಷ ಪ್ರಾಪ್ತಿ!

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಕೂಡ ಈ ಯೋಗ ತುಂಬಾ ಫಲಕಾರಿಯಾಗಲಿದೆ. ಪೋಷಕರ ಸಹಕಾರದಿಂದ ಸಮಸ್ಯೆಗಳು ನಿವಾರಣೆಯಾಗಲಿವೆ. ಪೂರ್ವಿಕರ ಆಸ್ತಿಯಲ್ಲಿ ಹೆಚ್ಚಳವಾಗಲಿದೆ. ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಆಸ್ತಿ ಮತ್ತು ವಾಹನ ಖರೀದಿ ಯೋಗವೂ ಇದೆ. 

ಧನು ರಾಶಿ:
ಧನು ರಾಶಿಯಿಂದ ಹತ್ತನೇ ಮನೆಯಲ್ಲಿ ನಾಲ್ಕು ಶುಭ ಗ್ರಹಗಳ ಸಂಯೋಜನೆ ಮತ್ತು ಲಕ್ಷ್ಮಿ ನಾರಾಯಣ ಯೋಗದ ರಚನೆಯು ಈ ರಾಶಿಯವರಿಗೆ ಫಲ ನೀಡಲಿದೆ. ವೃತ್ತಿಯಲ್ಲಿ ಬೆಳವಣಿಗೆ ಇರುತ್ತದೆ. ಉದ್ಯೋಗಕ್ಕಾಗಿ ಹುಡುಕುತ್ತಿರುವ ಜನರ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. 

ಇದನ್ನೂ ಓದಿ- ಐದು ದಿನಗಳಲ್ಲಿ ಕನ್ಯಾ ರಾಶಿಗೆ ಶುಕ್ರನ ಪ್ರವೇಶ: ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ಮೀನ ರಾಶಿ:
ಮಹಾಲಯ ಅಮಾವಾಸ್ಯೆಯಂದು 4 ಗ್ರಹಗಳಿಂದ ಉಂಟಾಗುವ ಶುಭ ಯೋಗವು ಮೀನ ರಾಶಿಯವರಿಗೆ ಸಹ ಸಾಕಷ್ಟು ಉತ್ತಮ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ವೈವಾಹಿಕ ಜೀವನವು ಮಧುರವಾಗಿರುತ್ತದೆ ಮತ್ತು ಸಂಬಂಧಗಳು ಗಟ್ಟಿಯಾಗುತ್ತವೆ. ಮಾಧ್ಯಮ ಮತ್ತು ರಾಜಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಸಮಯ ಉತ್ತಮವಾಗಿದೆ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More