Home> Spiritual
Advertisement

ಈ ರಾಶಿಯವರ ಜೀವನದಲ್ಲಿ ಕಾಣುವುದು ಹಠಾತ್ ತಿರುವು ! ಮೇ ತಿಂಗಳ ಅದೃಷ್ಟ ರಾಶಿಗಳಿವು

Monthly horoscope May : ಮೇ ತಿಂಗಳಲ್ಲಿ  ಯಾವ ರಾಶಿಯವರು ಲಾಭ ಪಡೆಯಲಿದ್ದಾರೆ ಯಾವ ರಾಶಿಯವರಿಗೆ ಕಷ್ಟಗಳು ಎದುರಾಗಲಿದೆ  ಎನ್ನುವುದನ್ನು ತಿಳಿದುಕೊಳ್ಳಬಹುದು.  

ಈ ರಾಶಿಯವರ ಜೀವನದಲ್ಲಿ ಕಾಣುವುದು ಹಠಾತ್ ತಿರುವು ! ಮೇ ತಿಂಗಳ ಅದೃಷ್ಟ ರಾಶಿಗಳಿವು

May Horoscope : ಮೇ ವರ್ಷದ ಐದನೇ ತಿಂಗಳು. ಈ ತಿಂಗಳಲ್ಲಿ ನವ ಗ್ರಹಗಳ ಸಂಚಾರ ಮತ್ತು ಗ್ರಹಗಳ ದೃಷ್ಟಿ ಕೆಲವು ರಾಶಿಯವರ ಜಾತಕದಲ್ಲಿ ಶುಭ ಫಲವನ್ನು ತರಲಿದೆ. ಕೆಲವು ರಾಶಿಯವರ ಜೀವನದಲ್ಲಿ ಹಠಾತ್ ತಿರುವಿಗೆ ಕಾರಣವಾಗಿ ಹಣದ ಹೊಳೆಯೇ ಹರಿಯಲಿದೆ. ಇನ್ನು ಕೆಲವರ ಜೀವನದಲ್ಲಿ ಕಷ್ಟಗಳು ಎದುರಾಗಲಿವೆ. ಮೇ ತಿಂಗಳಲ್ಲಿ, ಸೂರ್ಯನು ರಾಶಿ ಬದಲಿಸುತ್ತಾನೆ.  ಮೇಷದಲ್ಲಿ ಗುರು ಮತ್ತು ರಾಹು ಜೊತೆ ಬುಧ ಸಂಕ್ರಮಣವಾಗಲಿದೆ.  ಶುಕ್ರನು ಮಿಥುನ ರಾಶಿಗೆ ಸಾಗಿ ಮಂಗಳನೊಂದಿಗೆ ಸೇರುವುದರಿಂದ ಕೆಲವರಿಗೆ ಭೃಗು ಮಂಗಳ ಯೋಗ ನಿರ್ಮಾಣವಾಗಲಿದೆ. 

ಮೇ ತಿಂಗಳಲ್ಲಿ ಹೇಗಿರಲಿದೆ ದ್ವಾದಶ ರಾಶಿಯವರ ಫಲಾಫಲ : 
ಮೇಷ ರಾಶಿ : ಮೇ ನಿಮಗೆ ಕೆಲವು ಹೊಸ ವ್ಯಾಪಾರ ಅವಕಾಶಗಳನ್ನು ನೀಡಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳಿವೆ. ಆದಾಯ ಮತ್ತು ಉಳಿತಾಯ ಎರಡೂ ಹೆಚ್ಚಾಗುತ್ತದೆ. ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಸಾಧ್ಯವಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. 

ಇದನ್ನೂ ಓದಿ : Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

ವೃಷಭ ರಾಶಿ : ನೀವು ಮೊದಲಿಗಿಂತ ಹೆಚ್ಚು ಕೆಲಸ ಮಾಡಬೇಕಾಗಬಹುದು. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಈ ತಿಂಗಳು ಪ್ರೇಮ ವ್ಯವಹಾರಗಳಲ್ಲಿ ನೀವಂದು ಕೊಂಡಂತೆ ನಡೆಯುತ್ತದೆ. ಕುಟುಂಬದೊಂದಿಗೆ ಕೆಲವು ಕಹಿ ಘಟನೆಗಳು ಘಟಿಸಬಹುದು. ಸಮಾಧಾನದಿಂದ ಇದ್ದು ದೊಡ್ಡ ಜಗಳವಾಗದಂತೆ ನೋಡಿಕೊಳ್ಳಿ. 

ಮಿಥುನ ರಾಶಿ : ಮಿಥುನ ರಾಶಿಯವರು ವೃತ್ತಿಯಲ್ಲಿ ಮೇಲುಗೈ ಸಾಧಿಸುವರು. ನಿಮ್ಮ ಆರೋಗ್ಯಕ್ಕೆ ವಿಶೇಷ ಗಮನ ಕೊಡಿ ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು.  ಪ್ರೇಮ ಪ್ರಕರಣಗಳಲ್ಲಿಯೂ ಯಶಸ್ಸು ಸಿಗುವುದು. 

ಇದನ್ನೂ ಓದಿ : ಈ ರಾಶಿಯಲ್ಲಿ ಶಶ ಮಹಾಪುರುಷ ಯೋಗ! ಶನಿ ದೇವನ ಕೃಪೆಯಿಂದ ಇನ್ನೆರಡೂವರೆ ವರ್ಷ ರಾಜರಂತೆ ಬದುಕುತ್ತಾರೆ ಈ ರಾಶಿಯವರು

ಕರ್ಕ ರಾಶಿ:  ವ್ಯಾಪಾರ ಮತ್ತು ವೃತ್ತಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸ ಬೇಕಾಗಬಹುದು. ಆದರೆ ದೊಡ್ಡ ನಷ್ಟದ ಸಾಧ್ಯತೆಯಿಲ್ಲ. ಮನೆಯಲ್ಲಿ ವೃದ್ಧರ ಆರೋಗ್ಯ ಹದಗೆಡಲಿದೆ. ಕರ್ಕ ರಾಶಿಯವರು ಈ ತಿಂಗಳು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆರ್ಥಿಕ ನಷ್ಟವನ್ನು ಸಹ ಎದುರಿಸಬಹುದು. ಕೌಟುಂಬಿಕ ಕಲಹಗಳ ಸಾಧ್ಯತೆಗಳಿವೆ.

ಸಿಂಹ ರಾಶಿ : ಸಿಂಹ ರಾಶಿಯವರಿಗೆ ವೃತ್ತಿಜೀವನವು ಉತ್ತಮವಾಗಿರುತ್ತದೆ.  ಈ ಸಮಯದಲ್ಲಿ ಅವರು ಉದ್ಯೋಗದಲ್ಲಿ ಲಾಭವನ್ನು ಪಡೆಯುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ. ಪ್ರಣಯ ಸಂಬಂಧಗಳು ಉತ್ತಮವಾಗಿರುತ್ತವೆ. ಸಿಂಹ ರಾಶಿಯವರಿಗೆ ಈ ತಿಂಗಳು ಉತ್ತಮ ಫಲಗಳೇ ಸಿಗುತ್ತವೆ. ಏಕೆಂದರೆ ಗ್ರಹಗಳ ಸ್ಥಾನವು ನಿಮಗೆ ಅನುಕೂಲಕರವಾಗಿರುತ್ತದೆ.

ಇದನ್ನೂ ಓದಿ : ವರ್ಷದ ಬಳಿಕ ವೃಷಭ ರಾಶಿಗೆ ಸೂರ್ಯನ ಪ್ರವೇಶ: ಬೆಳಗಲಿದ್ದಾನೆ ಈ ರಾಶಿಯವರ ಅದೃಷ್ಟ

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಆರೋಗ್ಯವು ಸ್ಥಿರವಾಗಿರುತ್ತದೆ. ನೀವು ಕೆಲಸದಲ್ಲಿ ಬಡ್ತಿಯನ್ನು ಪಡೆಯುತ್ತೀರಿ. ನಿಮ್ಮ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ತಲೆದೋರಬಹುದು. ಆದರೆ ಶೀಘ್ರದಲ್ಲೇ ನೀವು ತೊಂದರೆಯಿಂದ ಹೊರಬರುತ್ತೀರಿ. ಆಸ್ತಿ ವಿಚಾರದಲ್ಲಿ ಕೌಟುಂಬಿಕ ಕಲಹವಾಗುವ ಸಾಧ್ಯತೆಯೂ ಇದೆ. ಎಲ್ಲಾ ಕೌಟುಂಬಿಕ ವಿವಾದಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವಿರಿ.  

ತುಲಾ ರಾಶಿ : ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಕಾರ್ಯಗಳನ್ನು ಪೂರ್ಣಗೊಳಿಸುವುದು  ವಿಳಂಬವಾಗಬಹುದು. ಹಣದ ವಿಷಯಗಳಲ್ಲಿ ಏರಿಳಿತಗಳೂ ಕಾಣಿಸಿಕೊಳ್ಳಬಹುದು. ದೈಹಿಕ ಆರೋಗ್ಯದಲ್ಲೂ ಏರುಪೇರುಗಳಾಗಬಹುದು.  

ವೃಶ್ಚಿಕ ರಾಶಿ : ವೃತ್ತಿಯಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ನಷ್ಟವೂ ಉಂಟಾಗಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಪ್ರೇಮ ವ್ಯವಹಾರಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ. ಈ ಬಾರಿ ನೀವು ನಿರಾಶೆಗೊಳ್ಳಬಹುದು. ಮದುವೆಯಾದವರು ಮಾಡುವ ಕೆಲಸ ಕಾರ್ಯಗಳಲ್ಲಿ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ  ಪಡೆಯುತ್ತಾರೆ. 

ಇದನ್ನೂ ಓದಿ : Shami Plant: ಶಮಿ ವೃಕ್ಷದಲ್ಲಡಗಿದೆ ಅಪಾರ ಧನ ಸಂಪತ್ತಿನ ರಹಸ್ಯ, ಈ ಉಪಾಯಗಳಿಂದ ಹಣಕಾಸಿನ ಮುಗ್ಗಟ್ಟು ನಿವಾರಿಸಿ!

ಧನು ರಾಶಿ : ಈ ತಿಂಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಪ್ರಾಪ್ತಿಯಾಗುತ್ತದೆ. ನಿಮ್ಮ ಆರೋಗ್ಯ ಸಾಮಾನ್ಯವಾಗಿರುತ್ತದೆ. ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಶನಿ ಮತ್ತು ಗುರು ಅನುಕೂಲಕರವಾಗಿದ್ದು ಕುಟುಂಬದಲ್ಲಿ ಸಾಮರಸ್ಯ ಇರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಮಕರ ರಾಶಿ : ಈ ತಿಂಗಳು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಅನಗತ್ಯ ಖರ್ಚುಗಳು ಬರಬಹುದು. ರಾಹುವಿನ ಪ್ರಭಾವದಿಂದ ಮನೆಯಲ್ಲಿ ಅನಗತ್ಯ ಸಮಸ್ಯೆಗಳು ಎದುರಾಗಬಹುದು. ರಾಹು ಮತ್ತು ಗುರು ಒಟ್ಟಿಗೆ ಇರುವುದರಿಂದ ಕುಟುಂಬದಲ್ಲಿ ಆಸ್ತಿ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

ಕುಂಭ ರಾಶಿ : ಈ ತಿಂಗಳು ವೃತ್ತಿಪರವಾಗಿ ದೊಡ್ಡ ಬದಲಾವಣೆಯನ್ನು ಕಾಣುವಿರಿ. ಆರ್ಥಿಕವಾಗಿ, ಈ ತಿಂಗಳು ತುಂಬಾ ಕಷ್ಟಕರವಾಗಿರುತ್ತದೆ, ಶನಿ ಮತ್ತು ಕೇತುಗಳ ಪ್ರತಿಕೂಲ ಸ್ಥಾನದಿಂದಾಗಿ, ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದೊಂದಿಗೆ ಸುಗಮ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿGrah Gochar In May: ಮೇ ತಿಂಗಳಿನಲ್ಲಿ ಶುಕ್ರ ಸೇರಿದಂತೆ ಈ ಗ್ರಹಗಳ ರಾಶಿ ಪರಿವರ್ತನೆ, 5 ರಾಶಿಗಳ ಜನರಿಗೆ ಅಪಾರ ಧನ-ಘನತೆ-ಗೌರವ ಪ್ರಾಪ್ತಿ!

ಮೀನ ರಾಶಿ : ಕುಟುಂಬದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗ ಬಹುದು. ಆರ್ಥಿಕವಾಗಿ ಇದು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಜೀವನ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಇರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ. 

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee NEWS ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Read More