Home> Spiritual
Advertisement

Swapan Shastra: ಕನಸಿನಲ್ಲಿ ಇದನ್ನು ಕಂಡರೆ, ಧನಲಾಭವಾಗುತ್ತೆ.. ಕುಬೇರನ ನಿಧಿ ನಿಮ್ಮ ಕೈಯಲ್ಲಿದೆ ಎಂದುಕೊಳ್ಳಿ.!

Dream Astrology: ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ. ಅದರಲ್ಲೂ ಬೆಳಗಿನ ಜಾವ ಕಂಡ ಕನಸುಗಳು ಭವಿಷ್ಯದಲ್ಲಿ ನಡೆಯುವುದು ಖಚಿತವೆಂದು ನಂಬಿಕೆಯಿದೆ. 
 

Swapan Shastra: ಕನಸಿನಲ್ಲಿ ಇದನ್ನು ಕಂಡರೆ, ಧನಲಾಭವಾಗುತ್ತೆ.. ಕುಬೇರನ ನಿಧಿ ನಿಮ್ಮ ಕೈಯಲ್ಲಿದೆ ಎಂದುಕೊಳ್ಳಿ.!

Swapan Shastra: ಕನಸು ಬೀಳುವುದು ಸಾಮಾನ್ಯ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ರಾತ್ರಿ ಮಲಗಿದಾಗ ಕನಸು ಕಾಣುತ್ತಾನೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ಇದು ನಿಮಗೆ ಸೂಚನೆ ನೀಡುತ್ತವೆ. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಕಂಡ ಕನಸುಗಳು ಭವಿಷ್ಯದಲ್ಲಿ ನಿಶ್ಚಿತವಾಗಿ ನಡೆಯುತ್ತವೆ ಎಂಬ ನಂಬಿಕೆಯಿದೆ. ಇಂದು ನಾವು ಭವಿಷ್ಯದಲ್ಲಿ ಮಂಗಳಕರ ಘಟನೆಗಳನ್ನು ಸೂಚಿಸುವ ಕೆಲವು ಕನಸುಗಳ ಬಗ್ಗೆ ತಿಳಿಯೋಣ.

ದೇವರನ್ನು ನೋಡುವುದು: ಕನಸಿನಲ್ಲಿ ನಿಮ್ಮಿಷ್ಟದ ದೇವರು ಮತ್ತು ದೇವತೆಗಳನ್ನು ನೋಡಿದರೆ, ಅದು ತುಂಬಾ ಮಂಗಳಕರ. ಅಂತಹ ಕನಸುಗಳು ಸಕಾರಾತ್ಮಕ ಪರಿಣಾಮವನ್ನು ಸೂಚಿಸುತ್ತವೆ. ಶೀಘ್ರದಲ್ಲೇ ನಿಮ್ಮ ಒಳ್ಳೆಯ ಸಮಯ ಪ್ರಾರಂಭವಾಗಲಿದೆ ಎಂದರ್ಥ.

ಇದನ್ನೂ ಓದಿ: Guru Chandala Yoga: ಈ ರಾಶಿಯವರಿಗೆ ಕೆಟ್ಟ ಕಾಲ ಶುರು.. ತಪ್ಪಿದ್ದಲ್ಲ ಕಷ್ಟ, ಆರ್ಥಿಕ ನಷ್ಟ, ಮಾನ ಹಾನಿ!!

ಚಿನ್ನ ಅಥವಾ ಒಡವೆಗಳು: ನಿಮ್ಮ ಕನಸಿನಲ್ಲಿ ಚಿನ್ನವನ್ನು ಕಂಡರೆ ಅದು ಸಂಪತ್ತನ್ನು ಪಡೆಯುವ ಮುನ್ಸೂಚನೆಯಂತೆ. ನಿಮ್ಮ ಮನೆಗೆ ಲಕ್ಷ್ಮಿಯ ಆಗಮನದ ಸೂಚಕ ಇದಾಗಿದೆ. 

ದೇವಾಲಯ ಅಥವಾ ಧಾರ್ಮಿಕ ಸ್ಥಳ: ಕನಸಿನಲ್ಲಿ ನೀವು ದೇವಾಲಯವನ್ನು ಕಂಡರೆ ಅದು ತುಂಬಾ ಮಂಗಳಕರ. ನಿಮ್ಮ ಕುಟುಂಬದಲ್ಲಿ ಯಾವುದೇ ಧಾರ್ಮಿಕ ಕಾರ್ಯ ಅಥವಾ ಮಂಗಳಕರ ಕಾರ್ಯಗಳನ್ನು ಮಾಡಲಿದೆ ಎಂದರ್ಥ. ಸ್ವಂತ ಮನೆಯಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಮುಂಗುಸಿ ಮತ್ತು ಹಾವು: ಹಾವನ್ನು ನೀವು ಕನಸಲ್ಲಿ ನೋಡಿದರೆ ಹಠಾತ್ ಧನಲಾಭದ ಸೂಚನೆಯಾಗಿದೆ. ಅದೇ ಕನಸಿನಲ್ಲಿ ನೀವು ಮುಂಗುಸಿಯನ್ನು ನೋಡಿದರೆ, ನೀವು ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ ಎಂದರ್ಥ.

ಇದನ್ನೂ ಓದಿ: ಶಶ ರಾಜಯೋಗದ ಬಲ.. ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಸಂಪತ್ತು ದುಪ್ಪಟ್ಟಾಗಲಿದೆ !

ಗುಲಾಬಿ ಮತ್ತು ಕಮಲದ ಹೂವು: ನಿಮ್ಮ ಕನಸಿನಲ್ಲಿ ಗುಲಾಬಿ ಹೂವನ್ನು ಕಂಡರೆ, ಅದು ಕಳೆದುಹೋದ ಹಣವನ್ನು ನೀವು ಮರಳಿ ಪಡೆಯುವಿರಿ ಎಂಬ ಸಂಕೇತವಾಗಿದೆ. ಕಮಲದ ಹೂವನ್ನು ನೋಡುವುದು ಶೀಘ್ರದಲ್ಲೇ ಆರ್ಥಿಕ ಲಾಭವಾಗುವುದರ ಸೂಚನೆಯಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More