Home> Spiritual
Advertisement

Guru Margi 2022: ನವೆಂಬರ್‌ನಲ್ಲಿ ಈ ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಮಾರ್ಗಿ ಗುರು

Guru Margi 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ, ಗುರುವು ತನ್ನದೇ ಆದ ರಾಶಿಚಕ್ರ ಚಿಹ್ನೆ ಮೀನ ರಾಶಿಯಲ್ಲಿ ವಕ್ರಿಯಾಗಿದ್ದು, ನವೆಂಬರ್‌ನಲ್ಲಿ ಗುರುವಿನ ನೇರ ನಡೆ ಆರಂಭವಾಗಲಿದೆ. ಮಾರ್ಗಿ ಗುರುವು ಈ ಸಂದರ್ಭದಲ್ಲಿ 4 ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಎಂದು ಹೇಳಲಾಗುತ್ತಿದೆ. ಮಾರ್ಗಿ ಗುರು ಪರಿಣಾಮದಿಂದ ಯಾವ ರಾಶಿಯವರಿಗೆ ಮಂಗಳಕರ ಫಲ ದೊರೆಯಲಿದೆ ತಿಳಿಯಿರಿ.

Guru Margi 2022: ನವೆಂಬರ್‌ನಲ್ಲಿ ಈ ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಮಾರ್ಗಿ ಗುರು

Guru Margi 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಗೆ ಮಹತ್ವದ ಸ್ಥಾನವಿದೆ. ದೇವಗುರು ಬೃಹಸ್ಪತಿಯನ್ನು  ಜ್ಞಾನ, ಸಂಪತ್ತು ಮತ್ತು ಮಕ್ಕಳ ಕಾರಕ ಗ್ರಹವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದರೆ, ಅಂತಹ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಅವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ  ಎಂದು ಹೇಳಲಾಗುತ್ತದೆ. ಕಳೆದ ಜುಲೈ 29, 2022 ರಿಂದ, ಗುರುವು ಮೀನ ರಾಶಿಯಲ್ಲಿ ಹಿಮ್ಮುಖವಾಗಿದೆ, ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಅಶುಭ ಪರಿಣಾಮವನ್ನು ಉಂಟು ಮಾಡುತ್ತಿದೆ. ಆದರೆ ಬರುವ 24ನೇ ನವೆಂಬರ್ 2022ರಂದು ಗುರು ಮಾರ್ಗಿಯಾಗಲಿದ್ದಾನೆ. ತನ್ನದೇ ರಾಶಿಯಲ್ಲಿ ಗುರುವಿನ ನೇರ ಚಲನೆಯು ಕೆಲವು ರಾಶಿಚಕ್ರದವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. 

ನವೆಂಬರ್‌ನಲ್ಲಿ  ಗುರು ಮಾರ್ಗಿ ಪರಿಣಾಮ: ಈ ರಾಶಿಯವರಿಗೆ ಪ್ರಮೋಶನ್, ಆದಾಯ ಹೆಚ್ಚಳ :-

ಪ್ರಸ್ತುತ, ಗುರುವು ತನ್ನದೇ ಆದ ರಾಶಿಚಕ್ರ ಚಿಹ್ನೆ ಮೀನ ರಾಶಿಯಲ್ಲಿ ವಕ್ರಿಯಾಗಿದ್ದು, ನವೆಂಬರ್‌ನಲ್ಲಿ ಗುರುವಿನ ನೇರ ನಡೆ ಆರಂಭವಾಗಲಿದೆ. ಮಾರ್ಗಿ ಗುರುವು ಈ ಸಂದರ್ಭದಲ್ಲಿ 4 ರಾಶಿಯವರ ಭಾಗ್ಯ ಬೆಳಗಲಿದ್ದಾನೆ ಎಂದು ಹೇಳಲಾಗುತ್ತಿದೆ. ಮಾರ್ಗಿ ಗುರು ಯಾವ ರಾಶಿಯವರಿಗೆ ಮಂಗಳಕರ ಫಲ ನೀಡಲಿದ್ದಾನೆ ಎಂದು ತಿಳಿಯೋಣ...

ವೃಷಭ ರಾಶಿ: ವೃಷಭ ರಾಶಿಯವರಿಗೆ ಗುರುವಿನ ನೇರ ಸಂಚಾರವು ತುಂಬಾ ಶುಭ ಫಲವನ್ನು ನೀಡಲಿದೆ. ಅವರು ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರಶಂಸೆಗೆ ಒಳಗಾಗುತ್ತಾರೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದ್ದು ಸಂಬಳ ಹೆಚ್ಚಾಗುವ ಬಲವಾದ ಅವಕಾಶಗಳಿವೆ. ಉದ್ಯಮಿಗಳಿಗೂ ಲಾಭವಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಇದು ಉತ್ತಮ ಸಮಯ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. 

ಇದನ್ನೂ ಓದಿ- November Horoscope 2022: ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ ನವೆಂಬರ್, ನಿಮ್ಮ ರಾಶಿಯೂ ಇದೆಯೇ?

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಮಾರ್ಗಿ ಗುರುವು ಆರ್ಥಿಕ ಲಾಭವನ್ನು ನೀದಲಿದ್ದಾನೆ. ಈ ಸಂದರ್ಭದಲ್ಲಿ ಕರ್ಕಾಟಕ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ಇದರೊಂದಿಗೆ ಹೊಸ ಆದಾಯದ ಮಾರ್ಗಗಳು ಸೃಷ್ಟಿಯಾಗಲಿವೆ. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ವ್ಯಾಪಾರವನ್ನು ವಿಸ್ತರಿಸಲು ಬಯಸುವವರಿಗೆ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ನವೆಂಬರ್ 24 ರ ನಂತರದ ಸಮಯ ಉತ್ತಮವಾಗಿದೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. 

ಕನ್ಯಾ ರಾಶಿ:  ದೇವಗುರು ಗುರುವು ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ನೀಡಲಿದ್ದಾರೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆರ್ಥಿಕ ಲಾಭ ಉಂಟಾಗಲಿದೆ. ಹಳೆಯ ಪ್ರಕರಣಗಳು ಇತ್ಯರ್ಥವಾಗಲಿವೆ. ನೀವು ಹಣದ ಬಿಕ್ಕಟ್ಟಿನಿಂದ ಮುಕ್ತರಾಗುವಿರಿ. ಹೂಡಿಕೆಯಿಂದ ಉತ್ತಮ ಲಾಭ ದೊರೆಯಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ. 

ಇದನ್ನೂ ಓದಿ- Budh Shukra Yuti in Tula 2022: ಲಕ್ಷ್ಮಿ-ನಾರಾಯಣ ಯೋಗ- ಈ 3 ರಾಶಿಯವರಿಗೆ ಹಣದ ಮಳೆ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಾರ್ಗಿ ಗುರು ಧನಲಾಭ ನೀಡುವನು. ಈ ಸಮಯದಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ವೃತ್ತಿ ಜೀವನದಲ್ಲೂ ನೀವು ಯಶಸ್ಸಿನ ಉತ್ತುಂಗವನ್ನು ಏರುವಿರಿ. ಬಡ್ತಿ ಸಿಗುವ ಸಾಧ್ಯತೆ ಇದ್ದು ಸಂಬಳವೂ ಹೆಚ್ಚಾಗಲಿದೆ. ಈ ಸಮಯದಲ್ಲಿ ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಕೂಡ ಕಲೆ ಹಾಕುವಿರಿ. ಜೊತೆಗೆ ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತ ಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More