Home> Spiritual
Advertisement

ಅತ್ತೆಯ ಮನೆಯಲ್ಲಿ ಹೊಂದಿಕೊಂಡು ನಡೆಯುತ್ತಾರೆಯಂತೆ ಈ ಅಕ್ಷರದ ಹೆಸರಿನ ಹುಡುಗಿಯರು


ಹೆಸರಿನ ಮೂಲಕ ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವದ ಬಗ್ಗೆ ಲೆಕ್ಕ ಹಾಕಲಾಗುತ್ತದೆ.  ಹೆಸರಿನ ಆಧಾರದ ಮೇಲೆ ವ್ಯಕ್ತಿಯ ಜೀವನದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. 
 

ಅತ್ತೆಯ ಮನೆಯಲ್ಲಿ ಹೊಂದಿಕೊಂಡು ನಡೆಯುತ್ತಾರೆಯಂತೆ  ಈ ಅಕ್ಷರದ ಹೆಸರಿನ ಹುಡುಗಿಯರು

ಬೆಂಗಳೂರು : ಜನ್ಮ ದಿನಾಂಕದ ಆಧಾರದ ಮೇಲೆಯ ವ್ಯಕ್ತಿಯ  ಹೆಸರನ್ನು ನಿರ್ಧರಿಸಲಾಗುತ್ತದೆ. ವ್ಯಕ್ತಿಯ ಜನ್ಮ ರಾಶಿಗೆ ಅನುಗುಣವಾಗಿಯೇ ನಾಮಕರಣ ಮಾಡಲಾಗುತ್ತದೆ. ಯಾವುದೇ ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಹೆಸರಿನ ಮೂಲಕ ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವದ ಬಗ್ಗೆ ಲೆಕ್ಕ ಹಾಕಲಾಗುತ್ತದೆ.  ಹೆಸರಿನ ಆಧಾರದ ಮೇಲೆ ವ್ಯಕ್ತಿಯ ಜೀವನದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. 

L ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು   : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ L ಅಕ್ಷರದಿಂದ ಹೆಸರು ಪ್ರಾರಂಭವಾಗುವ  ಹುಡುಗಿಯರು ಮನಮೋಹಕವಾಗಿರುತ್ತಾರೆ. ಇವರು ನೋಡಲು ಸುಂದರವಾಗಿರುವುದು ಮಾತ್ರವಲ್ಲ ಉತ್ತಮ ಗುಣ ನಡತೆ, ಸ್ವಭಾವ ಹೊಂದಿರುತ್ತಾರೆ. ಮೊದಲ ನೋಟದಲ್ಲಿಯೇ ಎದುರಿಗಿರುವವರನ್ನು  ತಮ್ಮತ್ತ ಸೆಳೆದು ಬಿಡುತ್ತಾರೆ. 

ಇದನ್ನೂ ಓದಿ : Holi 2023: ಹೋಳಿ ಹಬ್ಬದ ಬಳಿಕ ಈ ಮೂರು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ, ಕಾರಣ ಇಲ್ಲಿದೆ

ಅಷ್ಟೇ ಅಲ್ಲ, L ಅಕ್ಷರದ ಹೆಸರಿನ ಹುಡುಗಿಯರು ಸ್ವಭಾವತಃ ತುಂಬಾ ಉಲ್ಲಾಸದಿಂದ ಕೂಡಿರುತ್ತಾರೆ. ಅವರ ಈ ಸ್ವಭಾವದ ಕಾರಣದಿಂದಲೇ   ಈ ಹೆಸರಿಯ ಹುಡುಗಿಯರು ಇತರರ ಸ್ನೇಹವನ್ನು ಸಂಪಾದಿಸಿ ಬಿಡುತ್ತಾರೆ. ಇವರ ಜೀವನದಲ್ಲಿ ಗೆಳೆಯರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಅವರು ಪ್ರಾಮಾಣಿಕರು ಮತ್ತು ಕಠಿಣ ಪರಿಶ್ರಮಿಗಳು. ತಮ್ಮ ಕಠಿಣ ಪರಿಶ್ರಮದ ಮೂಲಕವೇ ವೃತ್ತಿಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಇವರು ತಾವು ಅಂದುಕೊಂಡ ಕೆಲಸ ಸಾಧಿಸುವ ತನಕ ಸುಮ್ಮನಿರುವುದಿಲ್ಲ.  

ಕುಟುಂಬದ ಸಂತೋಷಕ್ಕೆ ಮೊದಲ ಆದ್ಯತೆ :  
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ ಹೆಸರಿನ ಹುಡುಗಿಯರು ತಮ್ಮ ಬಗ್ಗೆ ಯಾರು ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾರ ಮಾತಿಗೂ ಬೇಸರಿಸಿಕೊಳ್ಳುವುದಿಲ್ಲ. ಇವರು ಮುಕ್ತ ಮನಸ್ಸಿನವರು. ತಮ್ಮ ಸಂಸಾರದ ಸುಖ-ಸಂತೋಷಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಯಾರೊಂದಿಗಾದರೂ ಸಂಬಂಧವನ್ನು ಬೆಳೆಸಿದರೆ,  ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. 

ಇದನ್ನೂ ಓದಿ : ಈ ದಿನಾಂಕದಂದು ಜನಿಸಿದ ಮಕ್ಕಳು ಉನ್ನತ ಹುದ್ದಗೆ ಏರುವುದು ಗ್ಯಾರಂಟಿಯಂತೆ!

ಪ್ರೀತಿಯ ಮೂರ್ತಿ :
ಈ ಹುಡುಗಿಯರು ಗಂಡ, ಅತ್ತೆ ಮಾವಂದಿರೊಂದಿಗೆ ತುಂಬಾ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳುತ್ತಾರೆ. ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳುತ್ತಾರೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More