Home> Spiritual
Advertisement

ಮಹಾದೇವನ ಆಶೀರ್ವಾದ ಪಡೆಯಲು ಶ್ರಾವಣದ ಈ ದಿನದಂದು ಉಪವಾಸ ಮಾಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದ ಮೊದಲ ಸೋಮವಾರದಂದು ಶುಭ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಲ್ಲಿ, ಉಪವಾಸ, ಪೂಜೆ, ಪಠಣ ಇತ್ಯಾದಿಗಳನ್ನು ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ. 

ಮಹಾದೇವನ ಆಶೀರ್ವಾದ ಪಡೆಯಲು ಶ್ರಾವಣದ ಈ ದಿನದಂದು ಉಪವಾಸ ಮಾಡಿ

ಹಿಂದೂ ಕ್ಯಾಲೆಂಡರ್ ಪ್ರಕಾರ, ಶ್ರಾವಣದ ದಿನಗಳನ್ನು ಮಹಾದೇವನಿಗೆ ಬಹಳ ಪ್ರಿಯವಾದದ್ದು ಎಂದು ನಂಬಲಾಗಿದೆ. ಈ ಮಾಸದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ಭೋಲೆನಾಥನಿಗೆ ಸೋಮವಾರ ಬಹಳ ಪ್ರಿಯವಾದುದರಿಂದ ಶ್ರಾವಣದಲ್ಲಿ ಸೋಮವಾರದ ಪ್ರಾಮುಖ್ಯತೆಯು ಇನ್ನಷ್ಟು ಹೆಚ್ಚಾಗುತ್ತದೆ. ಶ್ರಾವಣದಲ್ಲಿ ಬರುವ ಸೋಮವಾರದಂದು ವ್ರತವನ್ನು ಆಚರಿಸುವುದು, ಪೂಜಿಸುವುದು ಇತ್ಯಾದಿಗಳಿಂದ ಶಿವನ ಆಶೀರ್ವಾದವನ್ನು ಪಡೆಯಬಹುದು ಎಂದು ನಂಬಲಾಗಿದೆ.

ಶ್ರಾವಣದಲ್ಲಿ ಭಗವಾನ್‌ ಮಹಾದೇವನಿಗೆ ಇಷ್ಟವಾದ ವಸ್ತುಗಳನ್ನು ಸಮರ್ಪಿಸಿದರೆ, ನಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ಅಷ್ಟೃ ಅಲ್ಲದೆ, ಶಿವನಿಗೆ ಬಹಳ ಪ್ರಿಯವಾದ ಬಿಲ್ವಪತ್ರೆಯಿಂದ ಪೂಜೆ ಮಾಡಿ. ಉತ್ತಮ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಸೋಮವಾರದಂದು ಗಂಗಾಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಎನ್ನಲಾಗುತ್ತದೆ. ಶ್ರಾವಣದ ಮೊದಲ ಸೋಮವಾರ ಉಪವಾಸ ಮಾಡಬೇಕು. ಇದಕ್ಕೂ ಮೊದಲು, ಉಪವಾಸದ ನಿಯಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ.

ಇದನ್ನೂ ಓದಿ: ಕಾವೇರಿ ಆರ್ಭಟ..! ಮೆಟ್ಟೂರು ಜಲಾಶಯ ಭರ್ತಿಗೆ ಅರ್ಧ ಅಡಿ ಬಾಕಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದ ಮೊದಲ ಸೋಮವಾರದಂದು ಶುಭ ಯೋಗವು ರೂಪುಗೊಳ್ಳುತ್ತದೆ. ಈ ಯೋಗದಲ್ಲಿ, ಉಪವಾಸ, ಪೂಜೆ, ಪಠಣ ಇತ್ಯಾದಿಗಳನ್ನು ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ. 

ಶ್ರಾವಣ ಸೋಮವಾರದ ಮಹತ್ವ: 
ಶಾಸ್ತ್ರಗಳ ಪ್ರಕಾರ, ಶ್ರಾವಣ ಸೋಮವಾರದಂದು ಉಪವಾಸ ಮಾಡಿದರೆ ಶಿವನ ಆಶೀರ್ವಾದ ಲಭಿಸುತ್ತದೆ. ಈ ದಿನ ಜಲಾಭಿಷೇಕಕ್ಕೆ ಅತ್ಯಂತ ಪ್ರಶಸ್ತವಾಗಿದೆ. ಶ್ರಾವಣ ಮಾಸದಲ್ಲಿಯೇ ಪಾರ್ವತಿ ದೇವಿಯು ಕಠೋರ ತಪಸ್ಸು ಮಾಡಿ ಶಿವನನ್ನು ಪಡೆದಳು ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ಈ ತಿಂಗಳನ್ನು ವಿಶೇಷ ಪ್ರಾಮುಖ್ಯತೆ ಎಂದು ಪರಿಗಣಿಸಲಾಗಿದೆ. ಈ ಉಪವಾಸವನ್ನು ವಿವಾಹಿತ ಮತ್ತು ಅವಿವಾಹಿತ ಹುಡುಗಿಯರು ಸಹ ಆಚರಿಸಬಹುದು. ಸೋಮವಾರದ ವ್ರತವನ್ನು ಆಚರಿಸುವುದರಿಂದ ವಿವಾಹಿತ ಸ್ತ್ರೀಯರ ಗಂಡನ ಆಯುಷ್ಯ ದೀರ್ಘವಾಗಿರುತ್ತದೆ. ಅದೇ ಸಮಯದಲ್ಲಿ, ಅವಿವಾಹಿತ ಹುಡುಗಿಯರು ತಮ್ಮ ಆಯ್ಕೆಯ ವರನನ್ನು ಪಡೆಯುತ್ತಾರೆ. ಅಲ್ಲದೆ ಗ್ರಹದೋಷ ನಿವಾರಣೆಗೂ ಈ ಉಪವಾಸ ಒಳ್ಳೆಯದು.

ಶ್ರಾವಣ ಸೋಮವಾರ ಪೂಜಾ ವಿಧಾನ: 
ಶ್ರಾವಣ ಮಾಸದಲ್ಲಿ ಸೋಮವಾರದ ಉಪವಾಸಕ್ಕೆ ವಿಶೇಷ ಮನ್ನಣೆ ಇದೆ. ಈ ದಿನ ನೀರಿನಲ್ಲಿ ಹಾಲು ಮತ್ತು ಕಪ್ಪು ಎಳ್ಳನ್ನು ಸೇರಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು.

ಈ ದಿನದಂದು 21 ಬಿಲ್ವಪತ್ರೆಗಳ ಮೇಲೆ ಶ್ರೀಗಂಧದಿಂದ ಓಂ ನಮಃ ಶಿವಾಯ ಎಂದು ಬರೆದು ಶಿವಲಿಂಗದ ಮೇಲೆ ಅರ್ಪಿಸಬೇಕು. ಹೀಗೆ ಮಾಡಿದರೆ ಭೋಲೇನಾಥನು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ.

ಮದುವೆಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಲು, ಶ್ರಾವಣ ಸೋಮವಾರದಂದು ಸಾಮಾನ್ಯ ಶಿವಲಿಂಗಕ್ಕೆ ಕೇಸರಿ ಮಿಶ್ರಿತ ಹಾಲನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮದುವೆಯ ಯೋಗಗಳು ಬೇಗನೇ ಬರುತ್ತದೆ

ಶ್ರಾವಣ ಮಾಸದಲ್ಲಿ ನಂದಿಗೆ ನಿತ್ಯವೂ ಹಸಿರು ಮೇವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಸಂಕಟಗಳು ದೂರವಾಗುತ್ತವೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಈ ಮಾಸದಲ್ಲಿ ಬಡವರಿಗೆ ಅನ್ನದಾನ ನೀಡುವುದರಿಂದ ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗುವುದಿಲ್ಲ. ಇದರೊಂದಿಗೆ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಇದನ್ನೂ ಓದಿ: ರಾಜ್ಯದ 2500ಕ್ಕೂ ಹೆಚ್ಚು ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಅರ್ಧದಷ್ಟು ಪರವಾನಗಿಯೇ ಇಲ್ಲ!

ಈ ದಿನದಂದು ಪೂಜೆ ಮಾಡುವಾಗ, ಓಂ ನಮಃ ಶಿವಾಯ ಮಂತ್ರವನ್ನು ಜಪಿಸಬೇಕು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More