Home> Spiritual
Advertisement

Shani Sade Sati Remedies: ಸಾಡೇಸಾತಿ ಶನಿ ಪ್ರಭಾವವಿದ್ದಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬಾರದು

Shani Sade Sati Remedies: ನ್ಯಾಯದ ದೇವರು, ಕರ್ಮಫಲದಾತ ಶನಿಯು ನಿಧಾನವಾಗಿ ಚಲಿಸುವ ಗ್ರಹ. ಈ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. ಶನಿಯು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಯು ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ವ್ಯಕ್ತಿಯ ಜಾತಕದಲ್ಲಿ ಸಾಡೇಸಾತಿ ಶನಿಯ ಪ್ರಭಾವವಿದ್ದಾಗ ಅಂತಹ ವ್ಯಕ್ತಿಯು ಎಷ್ಟೇ ಜಾಗರೂಕರಾಗಿದ್ದರೂ ಸಾಲದು. ಅದರಲ್ಲೂ ಸಾಡೇಸಾತಿ ಶನಿ ಪ್ರಭಾವ ಇರುವಾಗ ಕೆಲವು ಕೆಲಸಗಳನ್ನು ಮಾಡುವುದರಿಂದ ಅಪಾಯ ತಪ್ಪಿದ್ದಲ್ಲ ಎಂದು ಹೇಳಲಾಗುತ್ತದೆ. ಅಂತಹ ತಪ್ಪುಗಳು ಯಾವುವು, ಸಾಡೇಸಾತಿ ಶನಿ ಪ್ರಭಾವದಿಂದ ಮುಕ್ತಿ ಪಡೆಯುವುದು ಹೇಗೆ ಎಂದು ತಿಳಿಯೋಣ.
 

Shani Sade Sati Remedies: ಸಾಡೇಸಾತಿ ಶನಿ ಪ್ರಭಾವವಿದ್ದಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬಾರದು

Shani Sade Sati Remedies: ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿ ವ್ಯಕ್ತಿಯು ಆತನ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ಅನುಗುಣವಾಗಿ ಫಲವನ್ನು ನೀಡುವ ದೇವರು ಎಂದರೆ ಶನಿ. ಹಾಗಾಗಿಯೇ, ಶನಿ ದೇವನನ್ನು ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲಾಗುತ್ತದೆ. ನವಗ್ರಹಗಳಲ್ಲಿ ಶನಿ ಅತಿ ನಿಧಾನವಾಗಿ ಸಂಚರಿಸುವ ಗ್ರಹ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು ಸುಮಾರು ಎರಡೂವರೆ ವರ್ಷಗಳ ಕಾಲ ತೆಗೆದುಕೊಳ್ಳುತ್ತಾನೆ. ಹಾಗಾಗಿಯೇ, ಶನಿಯು ಯಾವುದೇ ಒಂದು ರಾಶಿಯನ್ನು ಪ್ರವೇಶಿಸಲು ಸುಮಾರು ಮೂರು ದಶಕಗಳೇ ಬೇಕಾಗುತ್ತದೆ. ಶನಿಯ ಸಂಚಾರದಿಂದ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಅದರಲ್ಲೂ ಕೆಲವು ರಾಶಿಯವರು ಸಾಡೇಸಾತಿ ಶನಿಯ ಪ್ರಭಾವವನ್ನು ಅನುಭವಿಸಿದರೆ, ಕೆಲವು ರಾಶಿಚಕ್ರದವರು ಶನಿಯ ಧೈಯಾ ಪ್ರಭಾವವನ್ನು ಎದುರಿಸಬೇಕಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಸಾಡೇಸಾತಿ ಶನಿಯ ಪ್ರಭಾವ ಇರುವಾಗ ಅಂತಹ ವ್ಯಕ್ತಿಯು ಬಹಳ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಸಾಡೇಸಾತಿ ಶನಿ ಪ್ರಭಾವ ಇರುವಾಗ ಮಾಡುವ ಕೆಲವು ತಪ್ಪುಗಳಿಂದ ಆಗುವ ಅನಾಹುತವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಸಾಡೇಸಾತಿ ಶನಿ ಪ್ರಭಾವ ಇರುವಾಗ ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...

ಇದನ್ನೂ ಓದಿ- Surya Gochar: ನಾಲ್ಕು ದಿನಗಳ ಬಳಿಕ ಈ ರಾಶಿಯವರಿಗೆ ಭಾರೀ ಯಶಸ್ಸು, ಸಂಪತ್ತು ನೀಡಲಿದ್ದಾನೆ ಸೂರ್ಯ

ಸಾಡೇಸಾತಿ ಶನಿ ಪ್ರಭಾವದ ಮೂರು ಹಂತಗಳು:
ಸಾಡೇಸಾತಿ ಎಂದರೆ ಏಳೂವರೆ ವರ್ಷ. ಶನಿಯ ಸಾಡೇಸಾತಿ ಪ್ರಭಾವವು ಮೂರು ಹಂತಗಳಲ್ಲಿ ಇರುತ್ತದೆ. ಅಂದರೆ ಪ್ರತಿ ಹಂತವು ಎರಡೂವರೆ ವರ್ಷಗಳವರೆಗೆ ಇರುತ್ತದೆ.
* ಸಾಡೇಸಾತಿ ಶನಿ ಪ್ರಭಾವದ ಮೊದಲ ಹಂತ: ಈ ಹಂತದಲ್ಲಿ ಸ್ಥಳೀಯರು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. 
* ಸಾಡೇಸಾತಿ ಶನಿ ಪ್ರಭಾವದ ಎರಡನೇ ಹಂತ: ಆರ್ಥಿಕ ಮತ್ತು ದೈಹಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 
* ಸಾಡೇಸಾತಿ ಶನಿ ಪ್ರಭಾವದ ಮೂರನೇ ಹಂತ: ಈ ಹಂತದಲ್ಲಿ ಶನಿಯ ಕಾಟ ಕೊಂಚ ಕಡಿಮೆ ಇದ್ದರೂ ಸಹ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಸಾಡೇಸಾತಿ ಶನಿ ಪ್ರಭಾವ ಇದ್ದಾಗ ಈ ಕೆಲಸಗಳನ್ನು ಮಾಡಲೇಬಾರದು:
>> ಜಾತಕದಲ್ಲಿ ಸಾಡೇಸಾತಿ ಶನಿಯ ಪ್ರಭಾವ ಇದ್ದಾಗ ಯಾರೊಂದಿಗೂ ವಾದ-ವಿವಾದಗಳಿಗೆ ಹೋಗಬೇಡಿ.
>> ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿರಿ.
>> ಯಾವುದೇ ಕಾರಣಕ್ಕೂ ಮಂಗಳವಾರ ಮತ್ತು ಶನಿವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. 
>> ಈ ದಿನಗಳಲ್ಲಿ ಮಾಂಸಾಹಾರ, ಮದ್ಯ ಸೇವನೆಯನ್ನು ತಪ್ಪಿಸಿ.

ಇದನ್ನೂ ಓದಿ- Shani Dev Puja: ಶನಿದೇವರ ಪೂಜೆಯಲ್ಲಿ ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ!

ಸಾಡೇಸಾತಿ ಶನಿಯ ಪರಿಣಾಮವನ್ನು ಕಡಿಮೆ ಮಾಡಲು ಈ ಕೆಳಗೆ ನೀಡಲಾದ ಸಲಹೆಗಳನ್ನು ಅನುಸರಿಸಬಹುದು:-
* ಶನಿ ದೇವನನ್ನು ಶಾಂತಗೊಳಿಸಲು ಶನಿವಾರದಂದು ಹನುಮಂತನನ್ನು ಆರಾಧಿಸಿ.
* ಶನಿವಾರದಂದು ಕಬ್ಬಿಣ, ಕಪ್ಪು ಎಳ್ಳು, ಉದ್ದಿನಬೇಳೆ, ಕಪ್ಪು ವಸ್ತ್ರವನ್ನು ದಾನ ಮಾಡಿ. 
* ಸದಾ ಒಳ್ಳೆಯದನ್ನೇ ಯೋಚಿಸಿ. 
* ಯಾರಿಗೂ ಕೆಡುಕು ಬಯಸಬೇಡಿ.
* ಶುಭ್ರವಾದ ಬಟ್ಟೆಗಳನ್ನು ಮಾತ್ರವೇ ಧರಿಸಿ.
* ಶನಿ ದೇವನನ್ನು ಮನಸಾರೆ ಪೂಜಿಸಿ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More