Home> Spiritual
Advertisement

Vastu Tips: ಸುಖ-ಸಮೃದ್ಧಿಗಾಗಿ ತುಳಸಿಗೆ ನೀರು ಅರ್ಪಿಸುವಾಗ ಈ ಮಂತ್ರ ಜಪಿಸಿ

Vastu Tips For Tulsi: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯ, ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆಯಾದ ತುಳಸಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಹಾಗಾಗಿಯೇ ತುಳಸಿ ಪೂಜೆ ಮಾಡುವಾಗ, ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ.
 

Vastu Tips: ಸುಖ-ಸಮೃದ್ಧಿಗಾಗಿ  ತುಳಸಿಗೆ ನೀರು ಅರ್ಪಿಸುವಾಗ ಈ ಮಂತ್ರ ಜಪಿಸಿ

ತುಳಸಿಗಾಗಿ ವಾಸ್ತು ಸಲಹೆ: ಸನಾತನ ಧರ್ಮದಲ್ಲಿ ತುಳಸಿ ಗಿಡ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನ ನೀಡಲಾಗಿದ್ದು, ಈ ಹಸಿರು ಸಸ್ಯವು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಬಣ್ಣಿಸಲಾಗಿದೆ. ಮಾತ್ರವಲ್ಲ, ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ತುಳಸಿ ಪೂಜೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಕೆಲವು ಪ್ರಮುಖ ನಿಯಮಗಳನ್ನು ತಿಳಿಸಲಾಗಿದೆ. 

ವಾಸ್ತವವಾಗಿ, ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆಯಾದ ತುಳಸಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಹಾಗಾಗಿಯೇ ತುಳಸಿ ಪೂಜೆ ಮಾಡುವಾಗ, ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ನಿಯಮಗಳ ಪ್ರಕಾರ ತುಳಸಿಗೆ ನೀರು ಅರ್ಪಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದರಿಂದ ತಾಯಿ ಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ತುಳಸಿಗೆ ಸಂಬಂಧಿಸಿದ ಹಲವು ನಿಯಮಗಳನ್ನು ಹೇಳಲಾಗಿದೆ. ತುಳಸಿಯನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಶುಭ ಫಲ ನೀಡುತ್ತದೆ. ಹಾಗೆಯೇ, ತುಳಸಿ ಸಸ್ಯಕ್ಕೆ ನೀರು ಅರ್ಪಿಸುವಾಗಲೂ ಕೆಲವು ನಿಯಮ ಪಾಲಿಸುವುದು ಅತ್ಯಗತ್ಯ.  ತುಳಸಿಯ ನಿಯಮಿತ ಪೂಜೆಯೊಂದಿಗೆ ಲಕ್ಷ್ಮಿ ದೇವಿಯ ಜೊತೆಗೆ ಭಗವಾನ್ ವಿಷ್ಣುವಿನ ಆಶೀರ್ವಾದವನ್ನೂ ಪಡೆಯಬಹುದು ಎಂದು ನಂಬಲಾಗಿದೆ. 

ಇದನ್ನೂ ಓದಿ- Rama Tulsi ಹಾಗೂ ಶ್ಯಾಮ ತುಳಸಿಯ ನಡುವಿನ ಅಂತರ ನಿಮಗೆ ತಿಳಿದಿದೆಯಾ? ಯಾವ ತುಳಸಿ ಮನೆಯಲ್ಲಿ ನೆಟ್ಟರೆ ಶುಭ

ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ಉತ್ತಮ:
ತುಳಸಿ ಗಿಡವನ್ನು ಯಾವಾಗಲೂ ಪೂರ್ವ ದಿಕ್ಕಿನಲ್ಲಿ ನೆಡಬೇಕು ಎಂದು ವಾಸ್ತು ತಜ್ಞರು ನಂಬುತ್ತಾರೆ. ಇದಲ್ಲದೆ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿಯೂ ನೆಡಬಹುದು. ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಯು ನೆಲೆಸುತ್ತದೆ ಮತ್ತು ಸಸ್ಯವು ಹಸಿರಾಗಿ ಉಳಿಯುವ ಮೂಲಕ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದರೆ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡುವುದನ್ನು ತಪ್ಪಿಸಿ.

ತುಳಸಿಗೆ ನೀರು ಅರ್ಪಿಸುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸಿ...
>> ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿಯನ್ನು ಮುಟ್ಟುವುದು ಪಾಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಸ್ನಾನದ ನಂತರವೇ ತುಳಸಿಗೆ ನೀರನ್ನು ಅರ್ಪಿಸಿ. 

>> ತುಳಸಿಗೆ ನೀರನ್ನು ಅರ್ಪಿಸುವ ಮೊದಲು ಏನನ್ನೂ ತಿನ್ನಬಾರದು. 

>> ಭಾನುವಾರದಂದು ತುಳಸಿಗೆ ನೀರನ್ನು ಅರ್ಪಿಸಬಾರದು.

>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಕಾದಶಿಯಂದು ಕೂಡ ತುಳಸಿಗೆ ನೀರನ್ನು ಅರ್ಪಿಸಬೇಡಿ. ಈ ದಿನದಂದು ತುಳಸಿ ಮಾತೆಯು ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾರೆ ಎಂದು ನಂಬಲಾಗಿದೆ. 

>> ತುಳಸಿಯಲ್ಲಿ ಹೆಚ್ಚು ನೀರು ಹಾಕಬೇಡಿ. 

>> ಅಲ್ಲದೆ, ಸೂರ್ಯೋದಯದ ಸಮಯದಲ್ಲಿ ತುಳಸಿಯಲ್ಲಿ ನೀರು ಕೊಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ- Mercury and Sun Conjunction: ಬುಧಾದಿತ್ಯ ಯೋಗದಿಂದ ಈ ಮೂರು ರಾಶಿಯವರಿಗೆ ಸಿಗಲಿದೆ ಮಹಾಲಾಭ

ತುಳಸಿಗೆ ನೀರನ್ನು ಅರ್ಪಿಸುವಾಗ, ಈ ಒಂದು ಮಂತ್ರವನ್ನು ಹೇಳಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವಾಗ ಈ ವಿಶೇಷ ಮಂತ್ರವನ್ನು ಹೇಳಿದರೆ, 1000 ಪಟ್ಟು ಹೆಚ್ಚು ವರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ಮಂತ್ರವನ್ನು ಪಠಿಸುವುದರಿಂದ ರೋಗಗಳು, ದುಃಖಗಳಿಂದ ಪರಿಹಾರ ಪಡೆಯಬಹುದು ಎಂದು ನಂಬಲಾಗಿದೆ. ಇದಕ್ಕಾಗಿ 

ಮಂತ್ರ- ಮಹಾಪ್ರಸಾದ ಜನನಿ, ಸರ್ವ
ಸೌಭಾಗ್ಯವರ್ಧಿನಿ ಆದಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ.  

ಎಂಬ ಮಂತ್ರವನ್ನು ಪಠಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More