Home> Spiritual
Advertisement

Good Morning Tips: ಬೆಳಿಗ್ಗೆ ಎದ್ದು ತುಳಸಿಗೆ ನೀರು ಅರ್ಪಿಸುವುದರ ಮಹತ್ವ ಗೊತ್ತೇ!

Tulsi pooja benefits : ತುಳಸಿಗೆ ನೀರನ್ನು ಅರ್ಪಿಸುವುದರಿಂದ ದಿನವು ಮಂಗಳಕರವಾಗಿರುತ್ತದೆ. ಜೀವನದಲ್ಲಿ ತೊಂದರೆಗಳಿಂದ ಪರಿಹಾರ ಸಿಗುತ್ತದೆ. ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಿದ ನಂತರವೇ ತುಳಸಿಗೆ ನೀರು ಹಾಕಬೇಕು ಎಂದು ಹೇಳಲಾಗುತ್ತದೆ.

Good Morning Tips: ಬೆಳಿಗ್ಗೆ ಎದ್ದು ತುಳಸಿಗೆ ನೀರು ಅರ್ಪಿಸುವುದರ ಮಹತ್ವ ಗೊತ್ತೇ!

Good Morning Tips: ತುಳಸಿ ಗಿಡ ಹಿಂದೂ ಧರ್ಮದಲ್ಲಿ ವಿಶೇಷ ಮನ್ನಣೆ ಪಡೆದಿದಿದೆ. ಇಲ್ಲಿನ ಪ್ರತಿ ಮನೆಯಲ್ಲೂ ತುಳಸಿ ಗಿಡ ತಪ್ಪದೇ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡಿ ಸೂರ್ಯನಿಗೆ ನೀರನ್ನು ಅರ್ಪಿಸುವುದರ ಜೊತೆಗೆ ತುಳಸಿಗೆ ನೀರು ಹಾಕಬೇಕು ಎಂದು ಹೇಳಲಾಗುತ್ತದೆ. ತುಳಸಿ ಅನೇಕ ಔಷಧೀಯ ಮತ್ತು ಧಾರ್ಮಿಕ ಗುಣಗಳಿಂದ ಕೂಡಿದೆ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ತುಳಸಿಯನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿಯು ವಿಷ್ಣುವಿಗೆ ಬಹಳ ಪ್ರಿಯವಾದುದು ಏಕೆಂದರೆ ಅದರಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ : ಶನಿಯಿಂದ ರೂಪುಗಳ್ಳಲಿವೆ 2 ರಾಜಯೋಗ, ಈ 4 ರಾಶಿಗಳಿಗೆ ಅಪಾರ ಆರ್ಥಿಕ ಲಾಭ.. ಸಂತಸ ತರುವಳು ಅದೃಷ್ಟ ದೇವತೆ! 

ತುಳಸಿಗೆ ನೀರನ್ನು ಅರ್ಪಿಸುವುದರಿಂದ ದಿನವು ಮಂಗಳಕರವಾಗಿರುತ್ತದೆ. ಜೀವನದಲ್ಲಿ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ. ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಿದ ನಂತರವೇ ತುಳಸಿಗೆ ನೀರು ಹಾಕಬೇಕು. ಇದರಿಂದ ಲಾಭವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ತುಳಸಿಗೆ ನೀರು ಹಾಕುವುದರಿಂದ ಆಗುವ ಪ್ರಯೋಜನಗಳು

- ತುಳಸಿಗೆ ನೀರನ್ನು ಅರ್ಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.

- ತುಳಸಿಗೆ ನೀರನ್ನು ಅರ್ಪಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

- ತುಳಸಿಗೆ ನೀರನ್ನು ಅರ್ಪಿಸುವುದರಿಂದ ಜೀವನದ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

- ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸುವುದು ಆರ್ಥಿಕ ಲಾಭವನ್ನು ತರುತ್ತದೆ, ಏಕೆಂದರೆ ಅದರಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ.

- ತುಳಸಿಗೆ ನೀರನ್ನು ಅರ್ಪಿಸುವಾಗ, ಶ್ರೀಗಂಧದ ತಿಲಕವನ್ನು ಹಚ್ಚಿ, ಇದನ್ನು ಮಾಡುವುದರಿಂದ ನೀವು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತೀರಿ.

- ಹಾಗೆಯೇ ಪೂಜೆ ಮಾಡುವಾಗ ತುಪ್ಪದ ದೀಪವನ್ನು ಹಚ್ಚಿ 

ತುಳಸಿ ಪೂಜೆ ಮಂತ್ರ

ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ತುಳಸಿಯಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದ ತುಳಸಿಯು ವಿಷ್ಣುವಿಗೆ ತುಂಬಾ ಪ್ರಿಯ ಮತ್ತು ವಿಶೇಷವಾಗಿದೆ. ಈ ಕಾರಣಕ್ಕಾಗಿಯೇ ತುಳಸಿ ಎಲೆಗಳನ್ನು ವಿಶೇಷವಾಗಿ ವಿಷ್ಣುವನ್ನು ಪೂಜಿಸುವಾಗ ಮತ್ತು ಪ್ರಸಾದದಲ್ಲಿ ಬಳಸಲಾಗುತ್ತದೆ. ಅದೇ ರೀತಿ ತುಳಸಿಗೆ ನೀರನ್ನು ಅರ್ಪಿಸುವಾಗ 11 ಅಥವಾ 21 ಬಾರಿ ಓಂ ಎಂದು ಜಪಿಸಿ. 

ಇದನ್ನೂ ಓದಿ : ಒಂದು ವರ್ಷದ ನಂತರ 3 ರಾಶಿಗೆ ಸುವರ್ಣ ದಿನ, ಸೂರ್ಯ ಮಂಗಳ ಯುತಿಯಿಂದ ಸಂಪತ್ತಿನ ಮಳೆ, ಬಡ್ತಿ ಫಿಕ್ಸ್! 

ಸೂಚನೆ : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಇವುಗಳನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ಸಂಬಂಧಿತ ಕ್ಷೇತ್ರದ ತಜ್ಞರಿಂದ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್‌ ಇದಕ್ಕೆ ಹೊಣೆಯಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More