Home> Spiritual
Advertisement

ಶನಿದೇವನನ್ನು ಪೂಜಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಶನಿ ದೇವನನ್ನು ನ್ಯಾಯದ ದೇವರು ಎಂದು ನಂಬಲಾಗಿದೆ. ಕರ್ಮಗಳಿಗೆ ತಕ್ಕ ಫಲ ನೀಡುವ ಈತನನ್ನು ನ್ಯಾಯದ ದೇವರು ಎಂತಲೂ ಕರೆಯಲಾಗುತ್ತದೆ. ಪ್ರತಿಯೊಬ್ಬರೂ ಸಹ ಶನಿಯ ವಕ್ರದೃಷ್ಟಿ ನಮ್ಮ ಮೇಲೆ ಬೀಳದಿರಲಿ ಎಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಶನಿದೇವನನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಜೀವನದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

ಶನಿದೇವನನ್ನು ಪೂಜಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಶನಿದೇವನ ಪೂಜೆ:  ಪ್ರತಿಯೊಬ್ಬರೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕು. ಜೀವನದಲ್ಲಿ ಯಾವುದಕ್ಕೂ ಕೊರತೆ ಇರದಂತೆ ಬದುಕಬೇಕು ಎಂಬುದು ಎಲ್ಲರ ಕನಸು. ಇದಕ್ಕಾಗಿ ಮನುಷ್ಯ ಹಲವು ರೀತಿಯ ಪ್ರಯತ್ನ ಮಾಡುತ್ತಾನೆ. ವೃತ್ತಿ ಜೀವನ, ಕೌಟುಂಬಿಕ ಜೀವನ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಾನಾ ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಒಂದೊಮ್ಮೆ ಜಾತಕದಲ್ಲಿ ಗ್ರಹಗಳ ದೋಷವಿದ್ದರೆ ಅದಕ್ಕೂ ಪರಿಹಾರ ಮಾಡುತ್ತಾರೆ. ಅದರಲ್ಲೂ, ಜಾತಕದಲ್ಲಿ ಕರ್ಮಗಳಿಗೆ ತಕ್ಕ ಫಲ ನೀಡುವ ಶನಿ ದೇವನು ಕೆಟ್ಟ ಸ್ಥಾನದಲ್ಲಿದ್ದರೆ ಶನಿದೇವನನ್ನು ಮೆಚ್ಚಿಸಲು ಎಲ್ಲರೂ ನಾನಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಶನಿವಾರದಂದು ಶನಿದೇವನನ್ನು ಪೂಜಿಸುವುದರಿಂದ ಅವನು ಬೇಗನೆ ಸಂತುಷ್ಟನಾಗುತ್ತಾನೆ ಎಂದು ನಂಬಲಾಗಿದೆ. ಆದರೆ, ಶನಿದೇವನನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಜೀವನದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಶನಿದೇವನನ್ನು ಪೂಜಿಸುವಾಗ ಯಾವೆಲ್ಲಾ ವಿಷಯಗಳ ಬಗ್ಗೆ ನಿಗಾವಹಿಸಬೇಕು ಎಂದು ತಿಳಿಯಿರಿ.

ಕರ್ಮ ಫಲದಾತ ಶನಿ: 

ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವನು ಪ್ರತಿಯೊಬ್ಬ ಮನುಷ್ಯನಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಕೆಟ್ಟ ಕೆಲಸ ಮಾಡುವವರ ಮೇಲೆ ಶನಿ ವಕ್ರ ದೃಷ್ಟಿ ಇರುತ್ತದೆ. ಅದೇ ಸಮಯದಲ್ಲಿ, ಶನಿ ದೇವನು ಪ್ರಾಮಾಣಿಕ ಮತ್ತು ಒಳ್ಳೆಯ ಕಾರ್ಯಗಳಿಗೆ ಖ್ಯಾತಿ, ಸಂಪತ್ತು, ಸ್ಥಾನ ಮತ್ತು ಗೌರವವನ್ನು ನೀಡುತ್ತಾನೆ. ಈತನನ್ನು ಪೂಜಿಸುವಾಗ ಈ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಿ.

ಇದನ್ನೂ ಓದಿ- ಈ ಹಬ್ಬದ ದಿನವೇ ಸೂರ್ಯಗ್ರಹಣ

ಶನಿದೇವನನ್ನು ಪೂಜಿಸುವಾಗ ಈ ದಿಕ್ಕಿಗೆ ಮುಖಮಾಡಿ:
ಶನಿದೇವನನ್ನು ಪೂಜಿಸುವಾಗ ಪಶ್ಚಿಮ ದಿಕ್ಕಿಗೆ ಮುಖ ಮಾಡಬೇಕು. ಶನಿ ದೇವನನ್ನು ಪಶ್ಚಿಮ ದಿಕ್ಕಿನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿಕ್ಕಿನಲ್ಲಿಯೂ ಪೂಜೆಯನ್ನು ಮಾಡಬೇಕು.  

ಶನಿದೇವನನ್ನು ಪೂಜಿಸುವಾಗ ಈ ರೀತಿ ನಿಲ್ಲಬೇಡಿ:
ಶನಿ ದೇವನನ್ನು ಪೂಜೆ ಮಾಡುವಾಗ ಶನಿದೇವನ ಮುಂದೆ ನಿಲ್ಲಬಾರದು, ಅವನ ಕಣ್ಣುಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿರಬಾರದು. ಈ ರೀತಿ ಮಾಡುವುದರಿಂದ ಶನಿಯ ವಕ್ರದೃಷ್ಟಿ ನಿಮ್ಮ ಮೇಲೆ ಬೀಳಬಹುದು ಎಂದು ಹೇಳಲಾಗುತ್ತದೆ.

ಶನಿ ದೇವನಿಗೆ ಈ ಪದಾರ್ಥಗಳನ್ನು ಅರ್ಪಿಸಿ:
ನೀವು ಶನಿದೇವನನ್ನು ಮೆಚ್ಚಿಸಲು ಬಯಸಿದರೆ, ಶನಿವಾರದಂದು ಎಳ್ಳು, ಬೆಲ್ಲ ಅಥವಾ ಖಿಚಡಿಯನ್ನು ಅರ್ಪಿಸಿ. ಈ ವಸ್ತುಗಳನ್ನು ಅರ್ಪಿಸುವುದರಿಂದ, ಶನಿ ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ ಎಂದು ನಂಬಲಾಗಿದೆ.

ಇದನ್ನೂ ಓದಿ- Astro: ಈ ರಾಶಿಗಳ ಜನರ ಭಾಗ್ಯ ಬದಲಾಗಲು ಇನ್ನೂ ಕೆಲವೇ ಗಂಟೆಗಳು ಬಾಕಿ

ತಾಮ್ರದ ಪಾತ್ರೆ ಬಳಸಬೇಡಿ:
ಸಾಮಾನ್ಯವಾಗಿ  ಜನರು ಪೂಜೆ ಮಾಡುವಾಗ ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ, ಆದರೆ ಶನಿ ದೇವರನ್ನು ಪೂಜಿಸುವಾಗ ತಾಮ್ರದ ಪಾತ್ರೆಗಳನ್ನು ಬಳಸಬಾರದು. ತಾಮ್ರವು ಸೂರ್ಯನಿಗೆ ಸಂಬಂಧಿಸಿದೆ. ಅವನನ್ನು ಶನಿ ದೇವನ ಶತ್ರು ಎಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಶನಿದೇವನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಯಾವಾಗಲೂ ಕಬ್ಬಿಣದ ಪಾತ್ರೆಗಳನ್ನು ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More