PHOTOS

Yamaha festive offers: ಹಬ್ಬದ ಸೀಸನ್ ಗೆ ಭರ್ಜರಿ ಆಫರ್ ನೀಡುತ್ತಿರುವ ಯಮಹಾ

Advertisement
1/4

ಯಮನ್ ಹೈಬ್ರಿಡ್ ರೂಪಾಂತರದ ಖರೀದಿಯ ಮೇಲೆ ರೂ 6,000 ವರೆಗಿನ ಮೌಲ್ಯದ ವಿನಿಮಯ ಬೋನಸ್ ಪ್ರಯೋಜನಗಳನ್ನು ಸಹ ನೀಡುತ್ತಿದೆ.

ಯಮಹಾ ರೇ ZR 125 Fi ಹೈಬ್ರಿಡ್ ವೆರಿಯಂಟ್ ಖರೀದಿಯೊಂದಿಗೆ ಗ್ರಾಹಕರು ಸ್ಕ್ರಾಚ್ ಕಾರ್ಡ್ ಅನ್ನು ಸಹ ಪಡೆಯುತ್ತಾರೆ.ಯಮಹಾ ಹೈಬ್ರಿಡ್ ಅಲ್ಲದ ರೂಪಾಂತರದ ಖರೀದಿಯ ಮೇಲೆ ರೂ 3,876 ಮೌಲ್ಯದ ವಿಮಾ ಪ್ರಯೋಜನಗಳನ್ನು ನೀಡುತ್ತಿದೆ. ಸ್ಕ್ರ್ಯಾಚ್ ಮತ್ತು ವಿನ್ ಸ್ಪರ್ಧೆಯಲ್ಲಿ (ತಮಿಳುನಾಡಿನಲ್ಲಿ ಮಾನ್ಯವಾಗಿಲ್ಲ) ಗ್ರಾಹಕರು 1 ಲಕ್ಷದವರೆಗೆ ಗೆಲ್ಲುತ್ತಾರೆ.

ಯಮಹಾ ರೇ ZR 125 Fi ಹೈಬ್ರಿಡ್ 125-ಸಿಸಿ ಎಂಜಿನ್ ಹೊಂದಿದ್ದು 8.2 ಪಿಎಸ್ ಪವರ್ ಔಟ್ಪುಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದ್ವಿಚಕ್ರ ವಾಹನವನ್ನು ರೂ. 76,830 ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ (ಎಕ್ಸ್ ಶೋ ರೂಂ, ದೆಹಲಿ)

2/4

ಯಮಹಾ ಎರಡು ವಿಧಗಳಲ್ಲಿ ಯಮಹಾ ರೇ ZR 125 Fi ಅನ್ನು ಬಿಡುಗಡೆ ಮಾಡಿದೆ - ಹೈಬ್ರಿಡ್ ಮತ್ತು ಹೈಬ್ರಿಡ್ ಅಲ್ಲದ. ವಾಹನ ತಯಾರಕರು ಹೈಬ್ರಿಡ್ ರೂಪಾಂತರದ ಖರೀದಿಯ ಮೇಲೆ 5,000 ರೂಗಳವರೆಗೆ ಕ್ಯಾಶ್‌ಬ್ಯಾಕ್ ನೀಡುತ್ತಿದ್ದಾರೆ ಅಥವಾ 999 ರೂಗಳ ಡೌನ್ ಪೇಮೆಂಟ್‌ನಲ್ಲಿ ಅವರು ಬೈಕ್ ಖರೀದಿಸಲು ಆಯ್ಕೆ ಮಾಡಬಹುದು.

3/4

ಯಮಹಾ ಫಾಸಿನೋ 125 ಫೈ ಖರೀದಿಯಲ್ಲಿ ಯಮಹಾ ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತಿದೆ. ಉದಾಹರಣೆಗೆ, ಗ್ರಾಹಕರು ರೂ 3,876 ಮೌಲ್ಯದ ವಿಮಾ ಪ್ರಯೋಜನಗಳನ್ನು ಪಡೆಯುತ್ತಾರೆ. ಕೇವಲ 999 ರೂಗಳನ್ನು ಡೌನ್ ಪೇಮೆಂಟ್ ಆಗಿ ಪಾವತಿಸಿ ಗ್ರಾಹಕರು ದ್ವಿಚಕ್ರ ವಾಹನವನ್ನು ಖರೀದಿಸಬಹುದು.

4/4

ಹೊಸ ದ್ವಿಚಕ್ರ ವಾಹನಗಳ ಖರೀದಿಯಲ್ಲಿ ಯಮಹಾ ಗ್ರಾಹಕರಿಗೆ ಸ್ಕ್ರಾಚ್ ಕಾರ್ಡ್ ಅನ್ನು ಒದಗಿಸುತ್ತಿದೆ. ಸ್ಕ್ರ್ಯಾಚ್ ಮತ್ತು ವಿನ್ ಸ್ಪರ್ಧೆಯಲ್ಲಿ ಗ್ರಾಹಕರು ಕನಿಷ್ಠ ರೂ 2,999 ಮತ್ತು ಗರಿಷ್ಠ ರೂ 1 ಲಕ್ಷ ಗೆಲ್ಲಬಹುದು. ತಮಿಳುನಾಡಿನಲ್ಲಿ, ಗ್ರಾಹಕರು ರೂ 2,999 ರ ಖಚಿತವಾದ ಉಡುಗೊರೆಯನ್ನು ಪಡೆಯುತ್ತಾರೆ.





Read More