PHOTOS

World Tour: ನೀವೂ ಈ 5 ಸ್ಥಳಗಳಿಗೆ ಕಡಿಮೆ ಬೆಜೆಟ್ ನಲ್ಲಿ ವಿದೇಶ ಪ್ರವಾಸ ಮಾಡಬಹುದು

ನೀವು ಕೂಡ ಕಡಿಮೆ ಬಜೆಟ್ ನಲ್ಲಿ ವಿದೇಶ ಪ್ರವಾಸ ಮಾಡಬಹುದಾದ 5 ಪ್ರಸಿದ್ಧ ಸ್ಥಳಗಳು ಇಲ್ಲಿವೆ ನೋಡಿರಿ.

...
Advertisement
1/5
ವಿಯೆಟ್ನಾಂ
ವಿಯೆಟ್ನಾಂ

ನೀವು ಕಡಿಮೆ ವೆಚ್ಚದಲ್ಲಿ ವಿದೇಶಕ್ಕೆ ಪ್ರಯಾಣಿಸಲು ಬಯಸಿದರೆ ವಿಯೆಟ್ನಾಂ ಅತ್ಯುತ್ತಮ ಆಯ್ಕೆಯಾಗಿದೆ. ಆಗ್ನೇಯ ಏಷ್ಯಾದಲ್ಲಿರುವ ಈ ದೇಶವು ಭಾರತದೊಂದಿಗೆ ಆರ್ಥಿಕ ಮತ್ತು ಸಾಂಸ್ಕೃತಿಕ ರೀತಿಯಲ್ಲಿ ಉತ್ತಮ ಸಂಬಂಧವನ್ನು ಹೊಂದಿದೆ. ವಿಯೆಟ್ನಾಂನಲ್ಲಿ 1 ಭಾರತೀಯ ರೂಪಾಯಿಯು 298.05 ವಿಯೆಟ್ನಾಂ ಡಾಂಗ್‌ಗೆ ಸಮಾನವಾಗಿದೆ.

2/5
ಇಂಡೋನೇಷ್ಯಾ
ಇಂಡೋನೇಷ್ಯಾ

ಇಂಡೋನೇಷ್ಯಾದಲ್ಲಿ ಹಿಂದೂ ಜನಸಂಖ್ಯೆಯು ತುಂಬಾ ಹೆಚ್ಚಾಗಿದೆ. ಇಲ್ಲಿ ಸುಂದರವಾದ ದೇವಾಲಯಗಳೂ ಇವೆ. ಇಂಡೋನೇಷ್ಯಾ ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರದ ನಡುವೆ ನೆಲೆಗೊಂಡಿದೆ. ಇದು ಪ್ರತಿಯೊಬ್ಬರೂ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಇಲ್ಲಿ ತಿರುಗಾಡಲು ಬಹಳ ಕಡಿಮೆ ಹಣ ಖರ್ಚಾಗುತ್ತದೆ. ಇಂಡೋನೇಷ್ಯಾದಲ್ಲಿ 1 ಭಾರತೀಯ ರೂಪಾಯಿ 186.65 IDRಗೆ ಸಮವಾಗಿದೆ.

3/5
ಕಾಂಬೋಡಿಯಾ
ಕಾಂಬೋಡಿಯಾ

ಕಾಂಬೋಡಿಯಾದಲ್ಲಿ 1 ಭಾರತೀಯ ರೂಪಾಯಿಯು 52.83 ರಿಯಾಲ್‌ಗೆ ಸಮವಾಗಿದೆ. ಇಲ್ಲಿರುವ ಪುರಾತನ ಹಿಂದೂ ಮತ್ತು ಬೌದ್ಧ ದೇವಾಲಯಗಳು ಸಾಕಷ್ಟು ಪ್ರಸಿದ್ಧವಾಗಿದ್ದು, ಅವುಗಳನ್ನು ನೋಡಲು ದೂರದೂರುಗಳಿಂದ ಜನರು ಬರುತ್ತಾರೆ.

4/5
ಪರಾಗ್ವೆ
ಪರಾಗ್ವೆ

ನೀವು ಪ್ರಕೃತಿಯನ್ನು ಪ್ರೀತಿಸುತ್ತಿದ್ದರೆ ಈ ಸ್ಥಳವು ನಿಮಗಾಗಿ. ನೀವು ಯಾವುದೇ ಆತಂಕವಿಲ್ಲದೆ ನೀವು ಈ ಸ್ಥಳಕ್ಕೆ ಪ್ರವಾಸ ಮಾಡಬಹುದು. ಪರಾಗ್ವೆಯಲ್ಲಿ ಭಾರತದ 1 ರೂಪಾಯಿಯು 90.68 ಗೌರಾನಿಗೆ ಸಮವಾಗಿದೆ. ಕಡಿಮೆ ಖರ್ಚಿನಲ್ಲಿ ನೀವು ಇಲ್ಲಿ ಮೋಜು-ಮಸ್ತಿ ಮಾಡಬಹುದು.

5/5
ಕೋಸ್ಟ ರಿಕಾ
ಕೋಸ್ಟ ರಿಕಾ

ಕೋಸ್ಟರಿಕಾದಲ್ಲಿ 1 ಭಾರತೀಯ ರೂಪಾಯಿಯು 8.44 ಕೋಸ್ಟರಿಕನ್ ಕೊಲೊನ್‌ಗೆ ಸಮಾನವಾಗಿದೆ. ಅತ್ಯಂತ ಆಕರ್ಷಕ ಸ್ಥಳಗಳಲ್ಲಿ ಒಂದಾಗಿರುವ ಈ ಸ್ಥಳದ ಸೌಂದರ್ಯವು ನಿಮ್ಮ ಮನಸ್ಸನ್ನು ಸೂರೆಗೊಳ್ಳುವಂತಿದೆ. ಜೆಟ್ ಸ್ಕೀಯಿಂಗ್, ಸರ್ಫಿಂಗ್ ಮತ್ತು ಜಲ ಕ್ರೀಡೆಗಳಂತಹ ಸಾಹಸಗಳನ್ನು ಇಲ್ಲಿ ನೀವು ಆನಂದಿಸಬಹುದು.





Read More