PHOTOS

ಕ್ಯಾಲ್ಸಿಯಂ ಕೊರತೆ ನೀಗಿಸಲು ಮಹಿಳೆಯರು ತಿನ್ನಲೇಬೇಕಾದ ಆಹಾರಗಳಿವು

ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಮಂಡಿ ನೋವಿನ ಸಮಸ್ಯೆ ತಪ್ಪಿಸಲು ನಿಮ್ಮ ಡಯಟ್...

Advertisement
1/8
ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ
ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ

30 ವರ್ಷ ಸಮೀಪಿಸುತ್ತಿದ್ದಂತೆ ಮೂಳೆಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳು ಬಾಧಿಸಬಹುದು.  ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.   

2/8
ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು
 ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳು

ದುರ್ಬಲ ಉಗುರುಗಳು, ಮುಟ್ಟಿನ ಸಮಯದಲ್ಲಿ ಅತಿಯಾದ ಹೊಟ್ಟೆನೋವು, ಸ್ನಾಯು ಸೆಳೆತ, ಅತಿಯಾದ ಬಳಲಿಕೆಯಂತಹ ಲಕ್ಷಣಗಳು ಮಹಿಳೆಯರಲ್ಲಿ ಕಂಡು ಬರುವ ಕ್ಯಾಲ್ಸಿಯಂ ಕೊರತೆಯ ಪ್ರಮುಖ ಲಕ್ಷಣಗಳಾಗಿವೆ.  

3/8
ಕ್ಯಾಲ್ಸಿಯಂ ಕೊರತೆಗೆ ಮನೆಮದ್ದು
ಕ್ಯಾಲ್ಸಿಯಂ ಕೊರತೆಗೆ ಮನೆಮದ್ದು

ಕೆಲವು ಆಹಾರಗಳ ಸೇವನೆಯಿಂದ ಮಹಿಳೆಯರಲ್ಲಿ ಕಂಡು ಬರುವ ಕ್ಯಾಲ್ಸಿಯಂ ಕೊರತೆಯನ್ನು ಸುಲಭವಾಗಿ ಪರಿಹರಿಸಬಹುದು. 

4/8
ದ್ವಿದಳ ಧಾನ್ಯಗಳು
ದ್ವಿದಳ ಧಾನ್ಯಗಳು

ಬೀನ್ಸ್, ಕಡಲೆಬೀಜಗಳಲ್ಲಿ ಕ್ಯಾಲ್ಸಿಯಂ ಜೊತೆಗೆ ಪ್ರೊಟೀನ್, ಫೈಬರ್ ಕೂಡ ಸಮೃದ್ಧವಾಗಿರುವುದರಿಂದ ಇದು ಮಹಿಳೆಯರ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. 

5/8
ಡೈರಿ ಉತ್ಪನ್ನಗಳು
ಡೈರಿ ಉತ್ಪನ್ನಗಳು

ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಬಳಸುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು. 

6/8
ಸಾಲ್ಮನ್ ಫಿಶ್
ಸಾಲ್ಮನ್ ಫಿಶ್

ವಿಟಮಿನ್ ಡಿಯ ಅತ್ಯುತ್ತಮ ಮೂಲವಾಗಿರುವ ಸಾಲ್ಮನ್ ಮೀನುಗಳಲ್ಲಿ ಕ್ಯಾಲ್ಸಿಯಂ ಕೂಡ ಇರುತ್ತದೆ. ಇದರ ಸೇವನೆಯಿಂದ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸುವುದಷ್ಟೇ ಅಲ್ಲ, ತೂಕವನ್ನು ಸಹ ನಿಯಂತ್ರಿಸಬಹುದು. 

7/8
ಆರೆಂಜ್ ಜ್ಯೂಸ್
ಆರೆಂಜ್ ಜ್ಯೂಸ್

ವಿಟಮಿನ್ ಸಿ, ಡಿ ಹೇರಳವಾಗಿರುವ ಕಿತ್ತಳೆ ಹಣ್ಣಿನ ರಸದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಕೂಡ ಕಂಡು ಬರುತ್ತದೆ. ಇದು ಮಹಿಳೆಯರ ಆರೋಗ್ಯ ವೃದ್ಧಿಗೆ ಪ್ರಯೋಜನಕಾರಿ ಆಗಿದೆ. 

8/8
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More