PHOTOS

Anupama Gowda: ಕಿರುತೆರೆ ನಟಿ ಅನುಪಮಾ ನಟನೆಯಿಂದ ದೂರ ಉಳಿದಿದ್ದೇಕೆ ಗೊತ್ತೇ?

Anupama Gowda Shared About Roles: ಕಿರುತೆರೆ ನಟಿ ಹಾಗೂ ನಿರೂಪಕಿ ಅನುಪಮ ಗೌಡ ಇತ್ತೀಚೆಗೆ ಹಲವಾರು ರಿಯಾಲಿಟಿ ಶೋನಲ್ಲಿ ನಿರೂಪಿಕಿಯಾಗಿ ಕ...

Advertisement
1/8
Why Anupama Gowda Is Not Acting
Why Anupama Gowda Is Not  Acting

ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಮೊದಲು ಚಿಕ್ಕ ವಯಸ್ಸಿನ್ಲೇ ನಟನ ಆರಂಭಿಸಿವರು 'ಲಂಕೇಶ್ ಪತ್ರಿಕೆ' ಚಿತ್ರದಲದಲದಿ ಅಭಿನಯಿಸಿದ ಬಳಿಕ, 'ಹಳ್ಳಿ ದುನಿಯಾ' ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಸ್ಫರ್ಧಿಸಿದ್ದರು. 

2/8
Why Anupama Gowda Is Not Acting
Why Anupama Gowda Is Not  Acting

2. ನಟಿ ಅನುಪಮಾ ಗೌಡ 'ಅಕ್ಕ' ಧಾರಾವಾಹಿಯಲ್ಲಿ ಡಬಲ್ ಆಕ್ಟಿಂಗ್ ಮಾಡಿ ಮನೆ ಮಾತಾದ ಬಳಿಕ, ಮತ್ತೆ ಸೀರಿಯಲ್‌ಗಳಲ್ಲಿ ನಟಿಸಲಿಲ್ಲ. ಬದಲಿಗೆ ಮತ್ತೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.   

3/8
Why Anupama Gowda Is Not Acting
Why Anupama Gowda Is Not  Acting

ಅನುಪಮಾ ಗೌಡ ಬಿಗ್ ಬಾಸ್ ಸೀಸನ್- 5 ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಫಿನಾಲೆವರೆಗೂ ಆಟವಾಡಿ ಹೊರಬಂದ ಬಳಿಕ ಕೊಂಚ ಬ್ರೇಕ್ ಪಡೆದರು. ಪುನಃ ಬಿಗ್ ಬಾಸ್ ಸೀಸನ್ -9 ರಲ್ಲಿ ಪ್ರವೀಣರಾಗಿ ಭಾಗವಹಿಸಿ, ಮೊದಲ ಬಾರಿಗಿಂತಲೂ ಎರಡನೇಯ ಸಲ ಅದ್ಭುತವಾಗಿ ಆಟವಾಡಿ, ತಮ್ಮ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡರು. 

4/8
Why Anupama Gowda Is Not Acting
Why Anupama Gowda Is Not  Acting

ನಿರೂಪಕಿಯಗಿ ಅನುಪಮಾ ಗೌಡ ಕೆಲ ಕಾಮಿಡಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು  ನಿರೂಪಣೆ ಮಾಡಿದರು. 'ಮಜಾಭಾರತ', 'ನನ್ನಮ್ಮ ಸೂಪರ್ ಸ್ಟಾರ್', 'ರಾಜಾ ರಾಣಿ' ಎಂಬ ಶೋಗಳನ್ನು ನಡೆಸಿಕೊಟ್ಟರು. ಅನುಪಮಾ ಆಂಕರಿಂಗ್ ಅನ್ನು ಸಾಕಷ್ಟು ಮಂದಿ ಇಷ್ಟ ಪಟ್ಟರು. 

5/8
Why Anupama Gowda Is Not Acting
Why Anupama Gowda Is Not  Acting

 ಅನುಪಮಾ ಕಲರ್ಸ್ ಕನ್ನಡ ವಾಹಿನಿಯಿಂದ ಸ್ಟಾರ್ ಸುವರ್ಣ ವಾಹಿನಿಗೆ ಶಿಫ್ಟ್ ಆಗಿದ್ದು, 'ಸುವರ್ಣ ಪ್ರೇಮೋತ್ಸವ' ಸೇರಿದಂತೆ ಕೆಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು, ಸದ್ಯ ಸ್ಟಾರ್ ಸುವರ್ಣವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಜಾಕ್ ಪಾಟ್' ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. 

6/8
Why Anupama Gowda Is Not Acting
Why Anupama Gowda Is Not  Acting

 ಅನುಪಮಾ ಗೌಡ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅವರದ್ದೇ ಯೂಟ್ಯೂಬ್ ಚಾನೆಲ್ ಇದ್ದು, ಇದರಲ್ಲಿ ತಮ್ಮ ದಿನಚರಿ, ಅಡುಗೆ ರೆಸಿಪಿಗಳು, ಪ್ರವಾಸ, ಶೂಟಿಂಗ್ ಎಲ್ಲದರ ಬಗ್ಗೆ ಅಪ್ಲೋಡ್ ಮಾಡುತ್ತಿರುತ್ತಾರೆ. ಗೋವಾ, ಥೈಲ್ಯಾಂಡ್ ಅಂತೆಲ್ಲಾ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದಾರೆ. 

7/8
Why Anupama Gowda Is Not Acting
Why Anupama Gowda Is Not  Acting

 ಅನುಪಮಾ ಗೌಡ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ಮಿಂಚಿದ್ದರು. ಸಿನಿಮಾ, ಕಿರುತೆರೆ, ನಟನೆ, ನಿರೂಪಣೆ ಎಲ್ಲದರಲ್ಲೂ ಕಾಣಿಸಿಕೊಂಡಿರುವ ಅನುಪಮಾ ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದಾರೆ.

8/8
Why Anupama Gowda Is Not Acting
Why Anupama Gowda Is Not  Acting

ನಟಿ ಅನುಪಮಾ ಗೌಡಗೆ ನಟನೆಯಿಂದು ದೂರ ಉಳಿಯಲು ಕಾರಣ ಆಕೆ ಬಯಸುತ್ತಿರುವ ಪಾತ್ರಗಳು ಸಿಗುತ್ತಿಲ್ಲವಂತೆ. ಹಾಗೆಂದ ಮಾತ್ರಕ್ಕೆ ಅನುಪಮಾ ಅವರು ನಟನೆಯನ್ನು ದೂರವಿಟ್ಟಲ್ಲ ಎಂದು ತಿಳಿಸಿದ್ದಾರೆ.  ಈಕೆಗೆ ಒಂದೇ ರೀತಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲು ಇಷ್ಟವಿದೆ, ಚಾಲೆಂಜಿಂಗ್ ಆಗಿಯೂ ಉತ್ತಮವಾದಂತಹ ಪಾತ್ರಗಳು ಸಿಕ್ಕರೆ ಈಗಲೂ ಸಿನಿಮಾ ಮತ್ತು ಧಾರಾವಾಹಿಗಳಿಗೆ ಬಣ್ಣ ಹಚ್ಚುವೆ ಎಂದು ಹೇಳಿದ್ದಾರೆ.  





Read More