PHOTOS

ಮೆಹಂದಿ, ಆಮ್ಲಾ, ಮೆಂತ್ಯ ಪುಡಿಯನ್ನು ಸಾಸಿವೆ ಎಣ್ಣೆಯಲ್ಲಿ ಈ ರೀತಿ ಬೆರೆಸಿ ಹಚ್ಚಿದರೆ, ಒಂದೂ ಬಿಳಿ ಕೂದಲು ಇರಲ್ಲ...!

White Hair Home Remedies: ನಿಮ್ಮ ಅಡುಗೆಮನೆಯಲ್ಲಿರುವ ಸಾಸಿವೆ ಎಣ್ಣೆಯ ಸಹಾಯದಿಂದ ಬಿಳಿ ಕೂದಲನ್ನು ...

Advertisement
1/8
ಬಿಳಿ ಕೂದಲು
ಬಿಳಿ ಕೂದಲು

ಕೂದಲು ಬೆಳ್ಳಗಾಗಲು ಒತ್ತಡಭರಿತ ಜೀವನಶೈಲಿ, ಬದಲಾದ ವಾತಾವರಣ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

2/8
ಕಪ್ಪು ಕೂದಲನ್ನು ಪಡೆಯಲು ಬೇಕಾಗುವ ಪದಾರ್ಥಗಳು
ಕಪ್ಪು ಕೂದಲನ್ನು ಪಡೆಯಲು ಬೇಕಾಗುವ ಪದಾರ್ಥಗಳು

* ಕಬ್ಬಿಣದ ಬಾಣಲೆ  * ಸಾಸಿವೆ ಎಣ್ಣೆ - 200 ಮಿ.ಲೀ * ಮೆಹಂದಿ ಪೌಡರ್- -3-4 ಚಮಚ  * ಆಮ್ಲಾ ಪುಡಿ- 1 ಚಮಚ  * ಮೆಂತ್ಯ ಪುಡಿ- 1- ಚಮಚ 

3/8
ಕೂದಲಿಗೆ ಈ ಪದಾರ್ಥಗಳ ಪ್ರಯೋಜನ
ಕೂದಲಿಗೆ ಈ ಪದಾರ್ಥಗಳ ಪ್ರಯೋಜನ

>> ಸಾಸಿವೆ ಎಣ್ಣೆ:  ಇದು ಕೂದಲಿನ ಆರೈಕೆಯಲ್ಲಿ ಬಹಳ ಪ್ರಯೋಜನಕಾರಿ.  >> ಮೆಹಂದಿ:  ಮೆಹಂದಿ ಕೂದಲಿನ ಬಣ್ಣವನ್ನು ಕಪ್ಪಾಗಿಸಲು ಸಹಕಾರಿ.  >> ಆಮ್ಲಾ ಪುಡಿ: ಕೂದಲನ್ನು ಬಲವಾಗಿಸಿ, ಬುಡದಿಂದ ಕೂದಲನ್ನು ಕಪ್ಪಾಗಿಸಲು ಪ್ರಯೋಜನಕಾರಿ.  >> ಮೆಂತ್ಯ ಪುಡಿ: ಇದು ಕೂಡ ಆರೋಗ್ಯಕರ ಕಪ್ಪು ಕೂದಲನ್ನು ಪಡೆಯಲು ತುಂಬಾ ಪ್ರಯೋಜನಕಾರಿ ಆಗಿದೆ. 

4/8
ಹೇರ್ ಡೈ ತಯಾರಿಸುವ ವಿಧಾನ
ಹೇರ್ ಡೈ ತಯಾರಿಸುವ ವಿಧಾನ

ಈ ಹೇರ್ ಡೈ ತಯಾರಿಸಲು ಮೊದಲಿಗೆ ಒಂದು ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ, ಎಣ್ಣೆ ಸ್ವಲ್ಪ ಕಾಯುತ್ತಿದ್ದಂತೆ ಇದರಲ್ಲಿ ಮೆಹಂದಿ ಹಾಕಿ 3 ನಿಮಿಷ ಕಾಯಿಸಿ. ಬಳಿಕ ಇದರಲ್ಲಿ ನೆಲ್ಲಿಕಾಯಿ ಹಾಗೂ ಮೆಂತ್ಯ ಪುಡಿ ಬೆರೆಸಿ ಒಂದೆರಡು ನಿಮಿಷ ಕಾಯಿಸಿ. ಬಳಿಕ ಓಲೆ ಆರಿಸಿ. 

5/8
ಬಿಳಿ ಕೂದಲಿಗೆ ಹೇರ್ ಆಯಿಲ್
ಬಿಳಿ ಕೂದಲಿಗೆ ಹೇರ್ ಆಯಿಲ್

ಕಬ್ಬಿಣದ ಬಾಣಲೆಯಲ್ಲಿ ತಯಾರಿಸಿದ ಹೇರ್ ಆಯಿಲ್ ಅನ್ನು 24 ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಒಂದು ಜರಡಿ ಸಹಾಯದಿಂದ ಅದನ್ನು ಶೋಧಿಸಿಕೊಳ್ಳಿ. 

6/8
ಹೇರ್ ಆಯಿಲ್ ಬಳಕೆ ವಿಧಾನ
ಹೇರ್ ಆಯಿಲ್ ಬಳಕೆ ವಿಧಾನ

ಶೋಧಿಸಿಟ್ಟ ಹೇರ್ ಆಯಿಲ್ ಅನ್ನು ಹತ್ತಿ ಉಂಡೆ ಸಹಾಯದಿಂದ ಕೂದಲಿನ ಬುಡದಿಂದಲೂ ಹಚ್ಚಿ, ಮೂರು ಗಂಟೆಗಳ ಬಳಿಕ ಹೇರ್ ವಾಶ್ ಮಾಡಿ. ಮಿಕ್ಕಿರುವ ಹೇರ್ ಆಯಿಲ್ ಅನ್ನು ಗಾಜಿನ ಸೀಸೆಯಲ್ಲಿ ಎಷ್ಟು ದಿನ ಬೇಕಾದರೂ ಸಂಗ್ರಹಿಸಿದಬಹುದು. 

7/8
ಹೋಂ ಮೇಡ್ ಹೇರ್ ಆಯಿಲ್ ಪ್ರಯೋಜನ
ಹೋಂ ಮೇಡ್ ಹೇರ್ ಆಯಿಲ್ ಪ್ರಯೋಜನ

ಈ ಹೋಂ ಮೇಡ್ ಹೇರ್ ಆಯಿಲ್ ಬಳಸುವುದರಿಂದ ಹೆಚ್ಚು ಹಣವೂ ಖರ್ಚಾಗುವುದಿಲ್ಲ, ಜೊತೆಗೆ ಯಾವುದೇ ಅಡ್ಡಪರಿಣಾಮಗಳಿಲ್ಲದೆಯೇ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು. 

8/8
ಸೂಚನೆ
ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More