PHOTOS

ಈ ಐದು ಸಮಸ್ಯೆಗಳಿಂದ ನಿಮ್ಮನ್ನು ದೂರ ಇಡುತ್ತದೆ ಕಲ್ಲಂಗಡಿ ಹಣ್ಣು

p;ನೀಡುವುದಲ್ಲದೆ ಸಾಕಷ್ಟು ಪೋಷಕಾಂಶಗಳಿಂದ ಕೂಡಾ ತುಂಬಿದೆ. ಬೇಸಿಗೆಯಲ್ಲಿ, ಕಲ್ಲಂಗಡಿ ನಿಮ್ಮ ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುವುದು ಮಾತ್ರವಲ್ಲ, ದೇ...

Advertisement
1/5
ತೂಕ ನಷ್ಟದಲ್ಲಿ ಪ್ರಯೋಜನಕಾರಿ
ತೂಕ ನಷ್ಟದಲ್ಲಿ ಪ್ರಯೋಜನಕಾರಿ

100 ಗ್ರಾಂ ಕಲ್ಲಂಗಡಿಯಲ್ಲಿ ಕೇವಲ 6.2 ಗ್ರಾಂ ಸಕ್ಕರೆ ಇದೆ. ಕಲ್ಲಂಗಡಿಯಲ್ಲಿ  ಹೆಚ್ಚಿನ ನೀರಿನ ಅಂಶ ಮತ್ತು ನಾರಿನಂಶವಿರುತ್ತದೆ. ಇದು ನಿಮ್ಮನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕಡಿಮೆ ಕ್ಯಾಲೋರಿಗಳು ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಅದಕ್ಕಾಗಿಯೇ ಹಸಿವಾದಾಗ ಕಲ್ಲಂಗಡಿ ತಿನ್ನಬಹುದು.  

2/5
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಲ್ಲಂಗಡಿಯಲ್ಲಿರುವ ವಿಟಮಿನ್ ಸಿ ಪ್ರಮಾಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಜೀವಕೋಶಗಳನ್ನು ಆರೋಗ್ಯವಾಗಿಡುತ್ತದೆ. ಮತ್ತು ಗಾಯವನ್ನು  ವೇಗವಾಗಿ ವಾಸಿಮಾಡುವಂತೆ ಮಾಡುತ್ತದೆ. ಕಲ್ಲಂಗಡಿಯಲ್ಲಿರುವ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

3/5
ಹೃದಯದ ಆರೋಗ್ಯಕ್ಕೆ :
ಹೃದಯದ ಆರೋಗ್ಯಕ್ಕೆ  :

ಕಲ್ಲಂಗಡಿಯಲ್ಲಿರುವ ಅರೋಗ್ಯ ಗುಣಗಳು ನಿಮ್ಮ ಹೃದಯವನ್ನು ಸಹ ಆರೋಗ್ಯವಾಗಿರಿಸುತ್ತದೆ. ಕಲ್ಲಂಗಡಿಯಲ್ಲಿರುವ ಲೈಕೋಪೀನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ರಕ್ತದೊತ್ತಡವನ್ನು ಸಹ ನಿರ್ವಹಿಸುತ್ತದೆ. ಅಧಿಕ ಕೊಲೆಸ್ಟ್ರಾಲ್‌ನಿಂದ ರಕ್ತನಾಳಗಳು ಹಾನಿಗೊಳಗಾಗಿದ್ದರೆ, ಕಲ್ಲಂಗಡಿ ಈ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  

4/5
ಕಲ್ಲಂಗಡಿ ದೃಷ್ಟಿಗೆ ಒಳ್ಳೆಯದು
ಕಲ್ಲಂಗಡಿ ದೃಷ್ಟಿಗೆ ಒಳ್ಳೆಯದು

ಲೈಕೋಪೀನ್ ನಿಮ್ಮ ಹೃದಯಕ್ಕೆ ಮಾತ್ರವಲ್ಲದೆ ನಿಮ್ಮ ದೃಷ್ಟಿಗೂ ಒಳ್ಳೆಯದು. ಇದು ವಯಸ್ಸಾದಂತೆ ಉಂಟಾಗುವ ಕುರುಡುತನವನ್ನು ಕಡಿಮೆ ಮಾಡುತ್ತದೆ.

5/5
ಒಸಡುಗಳ ಆರೋಗ್ಯಕ್ಕೆ
ಒಸಡುಗಳ ಆರೋಗ್ಯಕ್ಕೆ

ಕಲ್ಲಂಗಡಿ ವಿಟಮಿನ್ ಸಿ ಯಲ್ಲಿ ಸಮೃದ್ದವಾಗಿದೆ.  ಕಲ್ಲಂಗಡಿ ಸೇವನೆಯು ಹಲ್ಲುಗಳಲ್ಲಿ ಪ್ಲೇಕ್ ಸಂಗ್ರಹವನ್ನು ನಿಧಾನಗೊಳಿಸುತ್ತದೆ ಮತ್ತು ಇದು ಒಸಡುಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಹಲ್ಲುಗಳನ್ನು ಬಿಳುಪುಗೊಳಿಸುವುದರ ಜೊತೆಗೆ ನಿಮ್ಮ ಒಡೆದ ತುಟಿಗಳನ್ನು ಆರೋಗ್ಯಕರವಾಗಿಸುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More