PHOTOS

Navratri 2021: ಹಬ್ಬಕ್ಕೆ ಕಾರ್ ಖರೀದಿಸುವ ಮೂಡ್ ಇದೆಯಾ? 6 ಲಕ್ಷ ರೂ.ಗಳಿಂದ ಆರಂಭವಾಗುವ ಕಾರ್ ಗಳ ಜಬರ್ದಸ್ತ್ ಆಪ್ಷನ್ ಇಲ್ಲಿವೆ

ೆಹಲಿ: Navratri 2021 - ಪ್ರತಿವರ್ಷದಂತೆ ಈ ವರ್ಷವೂ ಕೂಡ ನವರಾತ್ರಿಯೊಂದಿಗೆ (Navratri 2021)  ಹಬ್ಬದ ಸೀಸನ್ ಆರಂಭವಾಗಲಿದೆ. ಅನೇಕ ಜನರು...

Advertisement
1/6

1. 5 ಆಸನಗಳನ್ನು ಹೊಂದಿರುವ ಬಲೇನೋ - ದೇಶದಲ್ಲಿ ಹಬ್ಬದ ಸೀಜನ್ ಆರಂಬವಾಗಳು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ನೀವೂ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲ ಅಗ್ಗದ ಹಾಗೂ ಟ್ರೆಂಡಿ ಆಯ್ಕೆಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬಹುದು. ಇದರಲ್ಲಿ Maruti Suzuki India ಕಂಪನಿಯ Baleno ಕಾರ್ ಹೆಚ್ಚು ಜನಪ್ರೀಯವಾಗಿದೆ. ಇದರ ಟಾಪ್ ಮಾಡೆಲ್ ನಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಪ್ಲೇ ಸಿಸ್ಟಮ್ ನಿಮಗೆ ಟೆಕ್ಸ್ಟ್, ಕಾಲ್, ನ್ಯಾವಿಗೇಶನ್ ಹಾಗೂ ಸಂಗೀತ ಆನಂದಿಸುವ ಸೌಲಭ್ಯ ಒದಗಿಸುತ್ತದೆ. 5 ಆಸನಗಳನ್ನು ಹೊಂದಿರುವ ಬಲೇನೋ ನಲ್ಲಿ 1.2 ಲೀ ಪೆಟ್ರೋಲ್ ಇಂಜಿನ್ ಪ್ರಮಾಣಿತವಾಗಿದೆ. ಇದು ಒಂದು ಲೀಟರ್ ಪೆಟ್ರೋಲ್ ನಲ್ಲಿ 19 ಕೀಮಿ ಮೈಲೇಜ್ ಈಡುತ್ತದೆ. ದೆಹಲಿಯಲ್ಲಿ ಈ ಕಾರಿನ ಷೋರೂಮ್ ಬೆಲೆ ರೂ.5.97 ಲಕ್ಷ - 9.32 ಲಕ್ಷ ರೂಗಲಾಗಿದೆ.

2/6

2. ಹುಂಡೈ ಔರಾ - ನಿಮ್ಮ ಬಜೆಟ್ 5 ರಿಂದ 10 ಲಕ್ಷದ ನಡುವೆ ಇದ್ದರೆ, Hyundai Motors India ಕಂಪನಿಯ  Aura ಔರಾ ಕೂಡ ರೂ 5 ರಿಂದ 10 ಲಕ್ಷ ಬ್ರಾಕೆಟ್ ನಲ್ಲಿ ಅತ್ಯಂತ ಜನಪ್ರಿಯ ಕಾರು. 5 ಆಸನಗಳ ಔರಾ 1.2 ಲೀಟರ್ U2 CRDi ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಪೆಟ್ರೋಲ್ ಆವೃತ್ತಿಯಲ್ಲಿ 7 ಮಾದರಿಗಳಿವೆ. ದೆಹಲಿಯಲ್ಲಿ ಇದರ ಶೋರೂಂ ಬೆಲೆ 5.99 ಲಕ್ಷದಿಂದ 9.36 ಲಕ್ಷದವರೆಗೆ ಇರಲಿದೆ. ಈ ವಾಹನವು ಒಂದು ಲೀಟರ್‌ನಲ್ಲಿ 25 kmpl ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ.

3/6

3. ಕ್ರೆಟಾ - ಡಸ್ಟರ್ ಗೆ ಪೈಪೋಟಿ ನೀಡಲಿದೆ ಟಾಟಾ ಕಂಪನಿಯ ಈ ಕಾರು - ಟಾಟಾ ಮೋಟಾರ್ಸ್ ತನ್ನ ಗ್ರಾಹಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ. ಮಧ್ಯಮ ಗಾತ್ರದ SUVವಿಗೆ ಟಾಟಾ ಬ್ಲ್ಯಾಕ್‌ಬರ್ಡ್ (Tata Blackbird) ಎಂದು ನಾಮಕರಣ ಮಾಡಲಾಗಿದೆ. ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು ಜನರ ಬಜೆಟ್‌ಗೆ ಹೊಂದಿಕೊಳ್ಳುವುದಲ್ಲದೆ ಅವರಿಗೆ ರಾಯಲ್ ಅನುಭವವನ್ನು ನೀಡುತ್ತದೆ. ಇತ್ತೀಚೆಗೆ ಈ ಕಾರಿನ ಕೆಲವು ಚಿತ್ರಗಳು ಸಹ ಹೊರಬಂದಿದ್ದು, ಕೆಲವರು ಈ ಕಾರನ್ನು ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ಇದು ಭಾರತೀಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ರೆನಾಲ್ಟ್ ಡಸ್ಟರ್ ಗಳೊಂದಿಗೆ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ. ನಮ್ಮ ಪಾಲುದಾರ ವೆಬ್‌ಸೈಟ್ ಇಂಡಿಯಾ ಡಾಟ್ ಕಾಮ್ ಪ್ರಕಾರ, ಟಾಟಾದ ಈ ಎಸ್‌ಯುವಿಯ ಮೂಲ ಮಾದರಿಯ ಬೆಲೆ ಸುಮಾರು 10 ಲಕ್ಷ ರೂ.ಗಳಾಗಿರಲಿದೆ ಎನ್ನಲಾಗಿದೆ.

4/6

4. ಜಬರ್ದಸ್ತ್ USP - Toyota Kirloskar Motor ಕಂಪನಿಯ  Glanza ಮತ್ತುSuzuki ನಡುವೆ ನಡೆದ ಒಪ್ಪಂದದಿಂದ ಹೊರಹೊಮ್ಮಿದ ಮಾಡೆಲ್ ಆಗಿದೆ. ಇದು Maruti Baleno ಕಾರಿನ ರೀ-ಬ್ಯಾಜ್ ಮಾಡೆಲ್ ಆಗಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದ್ದು, ಇದು ಐದು ವಿಭಿನ್ನ ಮಾದರಿಗಳಲ್ಲಿ ಬರುತ್ತದೆ. ಇದರಲ್ಲಿ ಅಳವಡಿಸಲಾಗಿರುವ 37 ಲೀಟರ್ ಟ್ಯಾಂಕ್ ಇದನ್ನು ಲಾಂಗ್ ಡ್ರೈವ್ ಗೆ ಉತ್ತಮ ಕಾರು ಎಂದು ಸಾಬೀತುಪಡಿಸುತ್ತದೆ. ಇದರ ದೆಹಲಿ ಷೋರೂಮ್ ಪ್ರೈಸ್ 7.34 ಲಕ್ಷ ರೂ.ಗಳಿಂದ ಹಿಡಿದು, 9.30 ಲಕ್ಷ ರೂ.ಗಳವರೆಗೆ ಇದೆ.

5/6

5. ಗ್ರ್ಯಾಂಡ್ i10 ನಿಯೋಸ್ - ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿHyundai Grand i10 Nios ಉತ್ತಮ ಆಯ್ಕೆಯಾಗಿದೆ. 1.2-ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆ ಮತ್ತು 1-ಲೀಟರ್ CNG ಎಂಜಿನ್ ಆಯ್ಕೆ ಲಭ್ಯವಿದೆ. ದೆಹಲಿಯಲ್ಲಿ ಇದರ ಶೋರೂಂ ಬೆಲೆ 5.28 ಲಕ್ಷದಿಂದ 8.50 ಲಕ್ಷದವರೆಗೆ ಇರುತ್ತದೆ. ಇದು 26 kmpl ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

6/6

6. ಕೊರೊನಾದಿಂದ ವ್ಯಾಪಾರದ ಮೇಲೆ ಎಷ್ಟು ಪ್ರಭಾವ - ದೇಶದಲ್ಲಿ ಶರನ್ನವರಾತ್ರಿ ಉತ್ಸವ ಆರಂಭಗೊಳ್ಳುತ್ತಿದೆ. ಈ ಹಬ್ಬದಿಂದ ಶುಭಕಾರ್ಯಗಳು ಆರಂಭಗೊಳ್ಳುತ್ತಿವೆ. ಈ ಸೀಜನ್ ನಲ್ಲಿ ಜನರು ತಮ್ಮ ಮನೆ ಬದಲಾವಣೆಯ ಹೊಗೆಗೆ ಹೊಸ ಮನೆ ಖರೀದಿ ಹಾಗೂ ನೊಸ ಕಾರ್ ಅಥವಾ ಬೈಕ್ ಖರೀದಿಸುವುದು ಶುಭಕರ ಎಂದು ನಂಬುತ್ತಾರೆ. ಒಂದು ವೇಳೆ ನೀವೂ ಕೂಡ ಇದೆ ರೀತಿ ಆಲೋಚಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕೊರೊನಾ ಮಹಾಮಾರಿಯ ಹಿನ್ನೆಲೆ ವಿಶ್ವಾದ್ಯಂತ ವ್ಯಾಪಾರದ ಮೇಲೆ ಗಂಭೀರ ಪ್ರಭಾವ ಬಿದ್ದಿದೆ. ವಿಶ್ವಾದ್ಯಂತ ಸೆಮಿಕಂಡಕ್ಟರ್ ಗಳ ಕೊರತೆಯ ಹಿನ್ನೆಲೆ ಐಶಾರಾಮಿ ವಾಹನಗಳನ್ನು ಹೊರತುಪಡಿಸಿ, ಆಟೋ ಮಾರ್ಕೆಟ್ ನಲ್ಲಿ ಈ ಮೊದಲೇ ಇರುವ ಅಗ್ಗದ ಮಾಡೆಲ್ ಗಳ ಮಾರಾಟದ ಮೇಲೆ ಯಾವುದೇ ಪ್ರಭಾವ ಬಿದ್ದಿಲ್ಲ





Read More