PHOTOS

Health Insurance ಜೊತೆಗೆ ಗ್ರಾಹಕರಿಗೆ ವಿಶೇಷ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ Vodafone Idea

                     

...
Advertisement
1/4
ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗೆ ಆರೋಗ್ಯ ವಿಮೆ ಲಾಭ ನೀಡುತ್ತಿದೆ
 ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗೆ ಆರೋಗ್ಯ ವಿಮೆ ಲಾಭ ನೀಡುತ್ತಿದೆ

ಬೆಂಗಳೂರು : ಕರೋನವೈರಸ್ ಏಕಾಏಕಿ ಪ್ರಪಂಚದಾದ್ಯಂತ ಉಲ್ಬಣಗೊಂಡಿದೆ. ಇದನ್ನು ತಪ್ಪಿಸಲು ಜನರು ಅನೇಕ ಮಾರ್ಗಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಜನರ ಆರೋಗ್ಯ ವಿಮಾ ಪಾಲಿಸಿಯತ್ತ ಗಮನಹರಿಸಲಾಗಿದೆ. ವಿಶೇಷವೆಂದರೆ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vodafone Idea - Vi) ಮೊಬೈಲ್ ರೀಚಾರ್ಜ್‌ನಲ್ಲಿ ಆರೋಗ್ಯ ವಿಮೆಯ (Health Insurance) ಲಾಭವನ್ನು ನೀಡುತ್ತಿದೆ. 

2/4
ಆರೋಗ್ಯ ವಿಮೆಯ ಪ್ರಯೋಜನವನ್ನು ನೀಡಲು ಆದಿತ್ಯ ಬಿರ್ಲಾ ಆರೋಗ್ಯ ವಿಮೆ ಜೊತೆಗೆ Vi ಪಾಲುದಾರಿಕೆ
ಆರೋಗ್ಯ ವಿಮೆಯ ಪ್ರಯೋಜನವನ್ನು ನೀಡಲು ಆದಿತ್ಯ ಬಿರ್ಲಾ ಆರೋಗ್ಯ ವಿಮೆ ಜೊತೆಗೆ Vi ಪಾಲುದಾರಿಕೆ

ಕಂಪನಿಯ ಈ ರೀಚಾರ್ಜ್ ಯೋಜನೆಯಲ್ಲಿ, ಕೇವಲ 51 ರೂಪಾಯಿ ಮತ್ತು 301 ರೂಪಾಯಿಗಳ ರೀಚಾರ್ಜ್ ಮಾಡಿಸುವ ಮೂಲಕ ಗ್ರಾಹಕರು ಕರೋನವೈರಸ್ ಸಾಂಕ್ರಾಮಿಕ ಸೇರಿದಂತೆ ಹಲವು ಕಾಯಿಲೆಗಳಿಗೆ ಆರೋಗ್ಯ ವಿಮೆಯನ್ನು ಪಡೆಯಬಹುದಾಗಿದೆ. ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗೆ ಆರೋಗ್ಯ ವಿಮೆಯ (Health Insurance) ಪ್ರಯೋಜನವನ್ನು ನೀಡಲು ಆದಿತ್ಯ ಬಿರ್ಲಾ ಆರೋಗ್ಯ ವಿಮೆ (Aditya Birla Health Insurance - ABHI)ಯೊಂದಿಗೆ ಪಾಲುದಾರಿಕೆ ಹೊಂದಿದೆ.  ಕರೋನಾ ವೈರಸ್‌ನಂತಹ ಸಾಂಕ್ರಾಮಿಕ ರೋಗವನ್ನು ಒಳಗೊಂಡಂತೆ ಈ ಯೋಜನೆಯಡಿ ವಿಮಾದಾದರು ಆಸ್ಪತ್ರೆಗೆ ದಾಖಲಾದರೆ ಕಂಪನಿಯು ದಿನಕ್ಕೆ 1,000 ರೂ. ಅದೇ ಸಮಯದಲ್ಲಿ, ಐಸಿಯುನಲ್ಲಿ ಚಿಕಿತ್ಸೆಗಾಗಿ ದಿನಕ್ಕೆ 2,000 ರೂಪಾಯಿಗಳನ್ನು ನೀಡುತ್ತದೆ.

ಇದನ್ನೂ ಓದಿ - Motor Insurance ಬಗ್ಗೆ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ

3/4
ವಿ ಹಾಸ್ಪಿಕೇರ್ ಯೋಜನೆಯಡಿ, ಕಂಪನಿಯು 51 ಮತ್ತು 301 ರೂ ರೀಚಾರ್ಜ್ನಲ್ಲಿ ಗ್ರಾಹಕರಿಗೆ ಆರೋಗ್ಯ ವಿಮೆಯನ್ನು ಉಚಿತವಾಗಿ ನೀಡುತ್ತಿದೆ
ವಿ ಹಾಸ್ಪಿಕೇರ್ ಯೋಜನೆಯಡಿ, ಕಂಪನಿಯು 51 ಮತ್ತು 301 ರೂ ರೀಚಾರ್ಜ್ನಲ್ಲಿ ಗ್ರಾಹಕರಿಗೆ ಆರೋಗ್ಯ ವಿಮೆಯನ್ನು ಉಚಿತವಾಗಿ ನೀಡುತ್ತಿದೆ

ವಿ ಹಾಸ್ಪಿಕೇರ್ (Vi Hospicare) ಯೋಜನೆಯಡಿ, ಕಂಪನಿಯು 51 ಮತ್ತು 301 ರೂ ರೀಚಾರ್ಜ್ನಲ್ಲಿ ಗ್ರಾಹಕರಿಗೆ ಆರೋಗ್ಯ ವಿಮೆಯನ್ನು (Health Insurance) ಉಚಿತವಾಗಿ ನೀಡುತ್ತಿದೆ. ಈ ಹೊಸ ಪ್ರಸ್ತಾಪದಡಿಯಲ್ಲಿ, ಎರಡೂ ಕಂಪನಿಗಳು ಇನ್ನೂ ಯಾವುದೇ ವಿಮಾ ಯೋಜನೆಯ ಭಾಗವಾಗದವರಿಗೆ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ವಿಮಾ ರಕ್ಷಣೆಯನ್ನು ನೀಡಲು ಯೋಜಿಸುತ್ತಿವೆ. ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಬಳಕೆದಾರರಿಗೆ ವಿ ಹಾಸ್ಪಿಕೇರ್ ಯೋಜನೆಯಡಿ ಆಸ್ಪತ್ರೆಗೆ ದಾಖಲಾದ ವಿಮಾದಾರರಿಗೆ ಈ ಸೌಲಭ್ಯ ಒದಗಿಸಲಿದೆ.

ಇದನ್ನೂ ಓದಿ - Health Insurance : ಪಾಲಿಸಿ ಬಗ್ಗೆ ಪಾಲಿಸಿದಾರನಿಗೆ ಅಪ್ ಡೇಟ್ ಮಾಡುವುದು ವಿಮಾ ಕಂಪನಿಯ ಜವಾಬ್ದಾರಿ

4/4
ವೊಡಾಫೋನ್ ಐಡಿಯಾ 51 ಮತ್ತು 301 ರೂ ಯೋಜನೆಯ ಲಾಭ
ವೊಡಾಫೋನ್ ಐಡಿಯಾ 51 ಮತ್ತು 301 ರೂ ಯೋಜನೆಯ ಲಾಭ

ಮಾಹಿತಿಗಾಗಿ, ಕಂಪನಿಯ 51 ರೂಪಾಯಿ ಯೋಜನೆಯಲ್ಲಿ ಎಸ್‌ಎಂಎಸ್ ಸೌಲಭ್ಯವನ್ನು ಮಾತ್ರ ನೀಡುವುದಾಗಿ ತಿಳಿಸಿದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು. ಇದರೊಂದಿಗೆ ಗ್ರಾಹಕರು 500  ಉಚಿತ ಎಸ್‌ಎಂಎಸ್ ಸೌಲಭ್ಯವನ್ನು ಪಡೆಯುತ್ತಾರೆ. ಎರಡನೇಯದಾಗಿ, ಹಾಸ್ಪಿಕೇರ್ ಸೌಲಭ್ಯವು ಅದರಲ್ಲಿ ಲಭ್ಯವಿದೆ. ಅದೇ ಸಮಯದಲ್ಲಿ ಕಂಪನಿಯು 301 ರೂ.ಗಳಿಗೆ ಅನಿಯಮಿತ ಪ್ಯಾಕ್ ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ, ಪ್ರತಿದಿನ 1.5 ಜಿಬಿ ಡೇಟಾ, ಪ್ರತಿದಿನ 100 ಎಸ್‌ಎಂಎಸ್ ಉಚಿತ ನೀಡಲಾಗುತ್ತಿದೆ. ಈ ಯೋಜನೆಯ ಸಿಂಧುತ್ವವು 28 ದಿನಗಳವರೆಗೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.





Read More