PHOTOS

ಮುಖದಲ್ಲಿ ಕೋಪ, ಮನಸಲ್ಲಿ ವೈಷಮ್ಯ..! ಕೋಚ್‌ ಆದ ನಂತರ ಕೊಹ್ಲಿ ಜೊತೆ ಕಾಣಿಸಿಕೊಂಡ ಗೌತಮ್‌ ಗಂಭೀರ್‌

ir: ಭಾರತ ಕ್ರಿಕೆಟ್ ತಂಡದ ಹೊಸ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲ ಭಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದ...

Advertisement
1/4

ಭಾರತ ಕ್ರಿಕೆಟ್ ತಂಡದ ಹೊಸ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲ ಭಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಕೊಹ್ಲಿ ಹಾಗೂ ಗಂಭೀರ್‌ ನಡುವಿನ ಜಗಳದ  ನಂತರ ದೂರಾಗಿದ್ದ ಕೊಹ್ಲಿ ಹಾಗೂ ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರ ಸಮ್ಮಿಲವನ್ನು ನೋಡಲು ಅನೇಕರು ಕಾತುರದಿಂದ ಕಾಯುತ್ತಿದ್ದರು. ಏಕದಿನ ಸರಣಿ ಆಡಲು ಶ್ರೀಲಂಕಾಗೆ ತಲುಪಿರುವ ವಿರಾಟ್ ಕೊಹ್ಲಿ, ಕೋಚ್ ಗಂಭೀರ್ ಅವರ ಮೇಲ್ವಿಚಾರಣೆಯಲ್ಲಿ ಮೊದಲ ಬಾರಿಗೆ ಅಭ್ಯಾಸ ನಡೆಸಿದರು. ಬಿಸಿಸಿಐ ಟೀಂ ಇಂಡಿಯಾ ಅಭ್ಯಾಸದ ಚಿತ್ರವನ್ನು ಹಂಚಿಕೊಂಡಿದೆ.   

2/4

ಟೀಂ ಇಂಡಿಯಾ ಶ್ರೀಲಂಕಾದ ವಿರುದ್ಧ ನಡೆದ ಟಿ20 ಸರಣಿಯಲ್ಲಿ 3-0 ಅಂತರದ ಅದ್ಭುತ ಜಯದೊಂದಿಗೆ ಆರಂಭಿಸಿದೆ. ಈಗ ಎಲ್ಲರೂ ಏಕದಿನ ಸರಣಿಯ ಆರಂಭಕ್ಕಾಗಿ ಕಾಯುತ್ತಿದ್ದಾರೆ ಏಕೆಂದರೆ ಟಿ20 ವಿಶ್ವಕಪ್ ಗೆದ್ದ ನಂತರ ಈ ಸ್ವರೂಪಕ್ಕೆ ವಿದಾಯ ಹೇಳಿರುವ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾಗೆ ಪ್ರವೇಶಿಸಲಿದ್ದಾರೆ. ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರೊಂದಿಗಿನ ಒಪ್ಪಂದ ಮುಗಿದ ನಂತರ ಗೌತಮ್ ಗಂಭೀರ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ.   

3/4

ಟೀಂ ಇಂಡಿಯಾದ ಹೊಸ ಕೋಚ್ ಗೌತಮ್ ಗಂಭೀರ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಇತ್ತೀಚಿನ ಫೋಟೋ ವೈರಲ್ ಆಗಿದೆ . ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಇಬ್ಬರೂ ನೆಟ್ ಅಭ್ಯಾಸದ ವೇಳೆ ಭೇಟಿಯಾಗಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಿದ್ದರು. ಬಿಸಿಸಿಐ ಅಭ್ಯಾಸ ಸೆಷನ್‌ನ ಚಿತ್ರವನ್ನು ಹಂಚಿಕೊಂಡಿದೆ, ಇದರಲ್ಲಿ ಇಬ್ಬರೂ ಸಂಪೂರ್ಣವಾಗಿ ಸಂತೋಷದಿಂದ ಕಾಣುತ್ತಿದ್ದಾರೆ, ಮೈದಾನದಲ್ಲಿ ನಡೆದ ಹಿಂದಿನ ವಿಷಯಗಳನ್ನು ಮರೆತಿದ್ದಾರೆ ಎನ್ನುವಂತೆ ಕನುತ್ತಿದೆ.  

4/4

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಮತ್ತು ಗಂಭೀರ್ ನಡುವೆ ಎರಡು ಬಾರಿ ದೊಡ್ಡ ಜಗಳ ನಡೆದಿತ್ತು, ಇದರ ನಂತರ ಇಬ್ಬರೂ ಕೂಡ ಎಂದಿಗೂ ಒಂದಾಗುವುದಿಲ್ಲ ಎಂದು ಹೇಳಲಾಗಿತ್ತು. ಅದರಲ್ಲೂ ಗಂಭೀರ್‌ ಕೋಚ್‌ ಆದ ನಂತರ ಕೊಹ್ಲಿ ಹಾಗೂ ನೂತನ ಕೋಚ್‌ ಗಂಭೀರ್‌ ಅವರ ಸಮ್ಮಿಲನ ಆಗುತ್ತದೆಯಾ ಇಲ್ಲವಾ..? ಎಂದು ಅನೇಕರು ಕಾದು ಕೂತಿದ್ದರು. ಕೋಲ್ಕತ್ತಾದ ನಾಯಕತ್ವದಲ್ಲಿ ಗಂಭೀರ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಘರ್ಷಣೆ ನಡೆಸಿದ್ದರು. ಇದಾದ ನಂತರ, ಗಂಭೀರ್, ಲಕ್ನೋ ಸೂಪರ್‌ಜೈಂಟ್ಸ್‌ನ ಮೆಂಟರ್ ಆಗಿದ್ದಾಗ, ಪಂದ್ಯದ ನಂತರ ವಿರಾಟ್ ಜೊತೆ ವಾಗ್ವಾದ ನಡೆಸಿದರು.  





Read More