PHOTOS

ಪ್ರಭಾಸ್‌ ಜೊತೆ ರೊಮ್ಯಾನ್ಸ್‌ ಮಾಡಲು ರೆಡಿಯಾದ ಇನಸ್ಟಾಗ್ರಾಮ್‌ ವೈರಲ್‌ ಯುವತಿ..!300 ಕೋಟಿ ಸಿನಿಮಾಗೆ ಈಕೆಯೇ ನಾಯಕಿ

ಿ ತನ್ನ ರೀಲ್ಸ್‌ನ ಮೂಲಕ ಸದ್ದು ಮಾಡುತ್ತಿದ್ದ ಯುವತಿ ಒಬ್ಬರು ಬಂಪರ್‌ ಆಫರ್‌ ಗಿಟ್ಟಿಸಿಕೊಂಡಿದ್ದಾರೆ. ಸೋಷಿಯಲ್‌ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದ  ಯುವತ...

Advertisement
1/12

ಇನಸ್ಟಾಗ್ರಾಮ್‌ನಲ್ಲಿ ತನ್ನ ರೀಲ್ಸ್‌ನ ಮೂಲಕ ಸದ್ದು ಮಾಡುತ್ತಿದ್ದ ಯುವತಿ ಒಬ್ಬರು ಬಂಪರ್‌ ಆಫರ್‌ ಗಿಟ್ಟಿಸಿಕೊಂಡಿದ್ದಾರೆ. ಸೋಷಿಯಲ್‌ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದ  ಯುವತಿಗೆ ಡಾರ್ಲಿಂಗ್‌ ಪ್ರಭಾಸ್‌ ಜೊತೆಗೆ ರೊಮ್ಯಾನ್ಸ್‌ ಮಾಡುವ ಅವಕಾಶ ಸಿಕ್ಕಿದೆ. 

2/12

ಅದೃಷ್ಟ ಅನ್ನೋದು ಹಾಗೆ ಅಲ್ವಾ ಯಾವಾಗ ಯಾರ ಕೈ ಹಿಡಿಯುತ್ತೆ ಎನ್ನುವುದನ್ನು ಗೆಸ್‌ ಮಾಡೋಕು ಸಾಧ್ಯ ಇಲ್ಲ.  

3/12

ಸಿನಿಮಗಳಲ್ಲಿ ನಟಿಸಲು ಯುವತಿಯರು ವರ್ಷಗಟ್ಟಲೇ ಕಾಯುತ್ತಾರೆ, ಸಿನಿಮಾಗೆ ಬೇಕಾದ ಎಲ್ಲಾ ಲಕ್ಷಣಗಳಿದ್ದರೂ ಚ್ಯಾನ್ಸ್‌ ಗಿಟ್ಟಿಸಿಕೊಳ್ಳುವಲ್ಲಿ ಫೇಲ್‌ ಆಗುತ್ತಾರೆ.  

4/12

ಆದರೆ ಇಲ್ಲೊಂದು ಉವತಿಯ ಅದೃಷ್ಟ ಹೇಗಿದೆ ಅಮದರೆ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುತ್ತಾ ವೈರಲ್‌ ಅಗಿದ್ದ ಯುವತಿಗೆ ಪ್ರಭಾಸ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.  

5/12

300 ಕೋಟಿ ಬಜೆಟ್‌ನ ಸಿನಿಮಾವನ್ನು ಅನೌನ್ಸ್‌ ಮಾಡಲಾಗಿದ್ದು, ಪ್ರಭಾಸ್‌ ಸಿನಿಮಾಗೆ ಈ ರೀಲ್ಸ್‌ ಸುಂದರಿಯನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಈ ಸುದ್ದಿ ಹೊರಬಂದಾಗಿನಿಂದ ಈ ಹುಡುಗಿ ಯಾರು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ.  

6/12

ಸಲಾರ್‌ ಹಿಟ್‌ ಆದ ನಂತರ ಪ್ರಭಾಸ್‌ ಅಭಿನಯದ ಕಲ್ಕಿ ಸಿನಿಮಾ ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಿಲೀಸ್‌ ಆದಾಗಿನಿಂದಲೂ ಕೋಟಿ ಕೋಟಿ ಬಾಚುತ್ತಿದೆ.  

7/12

ಇದೀಗ ಈ ಸಿನಿಮಾದ ಹಿಟ್‌ನ ನಂತರ ಪ್ರಭಾಸ್‌ ಮತ್ತೊಂದು ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ಹನು ರಾಘವಪುಡಿ ಅವರ ಜೊತೆ ಡಾರ್ಲಿಂಗ್‌ ಹೊಸ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ.  

8/12

ಪ್ರಿ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಲಾಂಚ್‌ ಮಾಡಿರುವ ಚಿತ್ರತಂಡ ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್‌ ಆರೊಂಭಿಸಲಿದೆ.  

9/12

ಈ ಚಿತ್ರ ಲಾಂಚ್‌ ಆದಾಗಿನಿಂದಲೂ ನೆಟ್ಟಿಗರ ಕಣ್ಣು ಪ್ರಭಾಸ್‌ಗೆ ನಾಯಕಿಯಾಗಿ ನಟಿಸುತ್ತಿರುವ ಈ ಯುವತಿಯ ಮೇಲೆ ಬಿದ್ದಿದೆ.  

10/12

ಪ್ರಭಾಸ್‌ ಪಕ್ಕ ಕಾಣಿಸಿಕೊಂಡ ನಂತರ ಈ ಯುವತಿ ಯಾರು ಎಂಬುದನ್ನು ಹುಡುಕಲು ಶರು ಮಾಡಿದ್ದಾರೆ. ಅಷ್ಟಕ್ಕೂ ಈ ಯುವತಿಯ ಹೆಸರು ಇಮಾನ್ ಇಸ್ಮಾಯಿಲ್.   

11/12

‘ಇಮಾನ್ವಿ’ ಹೆಸರಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಅಮಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. 12ನೇ ವಯಸ್ಸಿನಿಂದ ನೃತ್ಯ ಕಲಿಯುತ್ತಿರುವ ಇಮಾನ್ ಮನಃಶಾಸ್ತ್ರದಲ್ಲಿ ಪದವಿ ಪೂರೈಸಿದ್ದಾರೆ.   

12/12

ತಮ್ಮ ರೀಲ್ಸ್‌ ಮೂಲಕ ವೈರಲ್‌ ಆಗಿರುವ ಈ ಯುವತಿ ಇದೀಗ ಪ್ರಭಾಸ್‌ ಸಿನಿಮಾದಲ್ಲಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  





Read More