PHOTOS

Shukra Gochar 2023: ಐದು ದಿನಗಳ ಬಳಿಕ ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರ, 4 ರಾಶಿಯವರಿಗೆ ಧನ-ಸಂಪತ್ತು

Shukra Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಷಾರಾಮಿ ಜೀವನದ ಅಂಶ ಎಂದು ಹೇಳಲಾಗುತ್ತದೆ. ಇದೀಗ ಶುಕ್ರನು ಕೆಲವೇ ದಿನಗಳಲ್ಲಿ ತನ್ನ ...

Advertisement
1/8
ಶುಕ್ರ ಗ್ರಹ
ಶುಕ್ರ ಗ್ರಹ

ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಆನಂದ, ಸಂಪತ್ತು ಮತ್ತು ಐಷಾರಾಮಿ ಜೀವನದ ಅಂಶವೆಂದು ಹೇಳಲಾಗುತ್ತದೆ.   

2/8
ಶುಕ್ರ ಸಂಚಾರ
ಶುಕ್ರ ಸಂಚಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವೂ ನಿಗದಿತ ಸಮಯದಲ್ಲಿ ರಾಶಿ ಚಕ್ರವನ್ನು ಬದಲಾಯಿಸುತ್ತದೆ. ಅಂತೆಯೇ, ಶುಕ್ರನು ಇನ್ನೂ ಐದು ದಿನಗಳಲ್ಲಿ ರಾಶಿ ಪರಿವರ್ತನೆ ಹೊಂದಲಿದ್ದಾನೆ. 

3/8
ಶುಕ್ರ ರಾಶಿ ಪರಿವರ್ತನೆ
ಶುಕ್ರ ರಾಶಿ ಪರಿವರ್ತನೆ

ಪ್ರಸ್ತುತ ತುಲಾ ರಾಶಿಯಲ್ಲಿ ಸಂಚರಿಸುತ್ತಿರುವ ಶುಕ್ರನು ಡಿಸೆಂಬರ್ 25ರಂದು ಬೆಳಿಗ್ಗೆ 6.33 ಕ್ಕೆ ವೃಶ್ಚಿಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

4/8
ವೃಶ್ಚಿಕ ರಾಶಿಯಲ್ಲಿ ಶುಕ್ರ
ವೃಶ್ಚಿಕ ರಾಶಿಯಲ್ಲಿ ಶುಕ್ರ

ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶವು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೆ, ಈ ಸಮಯದಲ್ಲಿ ಶುಕ್ರನು ನಾಲ್ಕು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

5/8
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ:  ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರವು ಮೇಷ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಉದ್ಯೋಗ ವ್ಯವಹಾರದಲ್ಲಿ ಏಳ್ಗೆ ಕಂಡು ಬರಲಿದೆ. ಹೊಸ ಕೆಲಸವನ್ನು ಆರಂಭಿಸಲು ಇದು ಅತ್ಯುತ್ತಮ ಸಮಯ. 

6/8
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ:  ಶುಕ್ರ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೂ ಸಹ ಒಳ್ಳೆಯ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಪಾಲುಗಾರಿಕೆ ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದ್ದು ಆರ್ಥಿಕವಾಗಿಯೂ ಸ್ಥಿರತೆಯನ್ನು ಕಾಣುವಿರಿ. 

7/8
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ:  ಶುಕ್ರ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೆ ದಿಢೀರ್ ಹಣಕಾಸಿನ ಲಾಭವನ್ನು ನೀಡಲಿದೆ. ಇದರಿಂದಾಗಿ ಸಂಪತ್ತು ವೃದ್ಧಿಯಾಗಲಿದೆ. ಭೂಮಿ ವ್ಯವಹಾರದಿಂದ ಲಾಭ. ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು.

8/8
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ:  ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಿರುವ ಶುಕ್ರನು ಈ ರಾಶಿಯವರ ಆದಾಯದ ಮೂಲಗಳನ್ನು ಹೆಚ್ಚಿಯಲಿದ್ದಾನೆ,. ವ್ಯಾಪಾರಸ್ಥರು ಪ್ರಗತಿಯನ್ನು ಕಾಣಬಹುದು. ಆರೋಗ್ಯವೂ ಸುಧಾರಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More