PHOTOS

Venus Transit: ಜನವರಿ 2024ರಲ್ಲಿ ಈ ರಾಶಿಯವರಿಗೆ ಧನಯೋಗ ನೀಡಲಿದ್ದಾನೆ ಶುಕ್ರ

Venus Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂಪತ್ತು, ವೈಭವ, ಐಷಾರಾಮಿ ಜೀವನದ ಅಂಶ ಎಂದು ಹೇಳಲಾಗುತ್ತದೆ. ಶುಕ್ರ ರಾಶಿ ಪರಿವರ್ತನೆಯು ಎಲ್ಲಾ 12 ರಾ...

Advertisement
1/8
ಶುಕ್ರ ಗ್ರಹ
 ಶುಕ್ರ ಗ್ರಹ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರಗ್ರಹವನ್ನು ಸಂಪತ್ತು, ವೈಭವ, ಐಷಾರಾಮಿ, ಪ್ರೀತಿ, ಆಕರ್ಷಣೆಯ ಸಂಕೇತ ಎಂದು ಬಣ್ಣಿಸಲಾಗುತ್ತದೆ. ಇದೊಂದು ಮಂಗಳಕರ ಗ್ರಹವಾಗಿದೆ.   

2/8
ಶುಕ್ರ ರಾಶಿ ಪರಿವರ್ತನೆ
ಶುಕ್ರ ರಾಶಿ ಪರಿವರ್ತನೆ

ಇತ್ತೀಚೆಗಷ್ಟೇ ವೃಶ್ಚಿಕ ರಾಶಿಯನ್ನು ಪ್ರವೇಶಿಸಿರುವ ಶುಕ್ರನು ಜನವರಿ 18, 2024 ರವರೆಗೆ ಅದೇ ರಾಶಿಯಲ್ಲಿ ಉಳಿಯಲಿದ್ದಾನೆ.

3/8
ವೃಶ್ಚಿಕ ರಾಶಿಯಲ್ಲಿ ಶುಕ್ರ
ವೃಶ್ಚಿಕ ರಾಶಿಯಲ್ಲಿ ಶುಕ್ರ

ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಮಂಗಳ ಮತ್ತು ಶುಕ್ರನ ನಡುವೆ ಸ್ನೇಹದ ಭಾವನೆ ಇದೆ. 

4/8
ಶುಕ್ರ ಸಂಚಾರ ಪ್ರಭಾವ
ಶುಕ್ರ ಸಂಚಾರ ಪ್ರಭಾವ

ಶುಕ್ರ ರಾಶಿ ಪರಿವರ್ತನೆಯ ಪ್ರಭಾವದಿಂದಾಗಿ ಇದು ಎಲ್ಲಾ 12 ರಾಶಿಯವರ ಜೀವನದ ಮೇಲೂ ಮಹತ್ವದ ಪರಿಣಾಮವನ್ನು ಬೀರುತ್ತದೆ. 

5/8
ಶುಕ್ರನ ಶುಭ ಪರಿಣಾಮ
ಶುಕ್ರನ ಶುಭ ಪರಿಣಾಮ

ಆದಾಗ್ಯೂ, ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಚಾರವು ಮೂರು ರಾಶಿಯವರ ಜೀವನದಲ್ಲಿ ಅಪಾರ ಧನ-ಸಂಪತ್ತನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ.... 

6/8
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ: ಶುಕ್ರ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು  ಈ ಸಮಯದಲ್ಲಿ ಧೈರ್ಯ, ಶಕ್ತಿ, ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದರಿಂದ ನೀವು ಕೈ ಹಾಕುವ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯಲಿದ್ದೀರಿ. ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ. 

7/8
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ:  ಸ್ವ ರಾಶಿಯಲ್ಲಿ ಶುಕ್ರನ ಪ್ರವೇಶವು ವೃಶ್ಚಿಕ ರಾಶಿಯವರಿಗೆ ಅಪಾರ ಲಾಭವನ್ನು ತರಲಿದೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಕಾರ್ಯಕ್ಷಮತೆ ಹೆಚ್ಚಾಗಲಿದ್ದು ಜೀವನ ಮಟ್ಟವೂ ಸುಧಾರಿಸಲಿದೆ. ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು  ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ. 

8/8
ಮೀನ ರಾಶಿ
ಮೀನ ರಾಶಿ

ಮೀನ ರಾಶಿ:  ಶುಕ್ರ ರಾಶಿ ಬದಲಾವಣೆಯು ಮೀನ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಶುಭ ಫಲಗಳನ್ನು ನೀಡಲಿದೆ. ಈ ವೇಳೆ ನಿಮ್ಮ ಬಾಕಿ ಉಳಿದಿರುವ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಿರಿ. ಸಂಪತ್ತಿನ ಜೊತೆಗೆ ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More