PHOTOS

Shukra Gochar: ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ- ಮೂರು ರಾಶಿಯವರಿಗೆ ರಾಜ ಯೋಗ

Shukra Gochar 2023: ಸಂಪತ್ತು-ಐಷಾರಾಮಿ ಜೀವನಕಾರಕನಾದ ಶುಕ್ರನು ಈ ತಿಂಗಳಾಂತ್ಯದಲ್ಲಿ ರಾಶಿ ಪರಿವರ್ತನೆ ಹೊಂದಿ ವೃಶ್ಚಿಕ ರಾಶಿಯನ್ನು ಪ್ರ...

Advertisement
1/8
ಶುಕ್ರ ಗ್ರಹ
ಶುಕ್ರ ಗ್ರಹ

ಜ್ಯೋತಿಷ್ಯ ಶಾಸ್ತ್ರದಲ್ಲಿ, ಅತ್ಯಂತ ಮಂಗಳಕರ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹವನ್ನು ಸಂಪತ್ತು, ವೈಭವ ಮತ್ತು ಐಶ್ವರ್ಯವನ್ನು ಕರುಣಿಸುವ ಗ್ರಹ ಎಂದು ನಂಬಲಾಗಿದೆ. 

2/8
ಜಾತಕದಲ್ಲಿ ಶುಕ್ರನ ಶುಭ ಸ್ಥಾನ
ಜಾತಕದಲ್ಲಿ ಶುಕ್ರನ ಶುಭ ಸ್ಥಾನ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ರಾಜನಂತೆ ಜೀವನ ಸಾಗಿಸುತ್ತಾನೆ. ಅವರ ಜೀವನದಲ್ಲಿ ಎಂದಿಗೂ ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ.

3/8
ಶುಕ್ರ ರಾಶಿ ಪರಿವರ್ತನೆ
ಶುಕ್ರ ರಾಶಿ ಪರಿವರ್ತನೆ

ಇದೀಗ ಈ ತಿಂಗಳ ಅಂತ್ಯದಲ್ಲಿ ಎಂದರೆ ನವೆಂಬರ್ 30, 2023ರಂದು ಶುಕ್ರನು ರಾಶಿ ಪರಿವರ್ತನೆ ಹೊಂದಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. 

4/8
ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ
ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ

ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರವು ದ್ವಾದಶ ರಾಶಿಯವರ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. 

5/8
ಮೂರು ರಾಶಿಯವರಿಗೆ ಬಂಪರ್
ಮೂರು ರಾಶಿಯವರಿಗೆ ಬಂಪರ್

ಆದಾಗ್ಯೂ, ಈ ತಿಂಗಳಾಂತ್ಯದಲ್ಲಿ ಶುಕ್ರ ರಾಶಿ ಪರಿವರ್ತನೆಯು ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದು, ಅಪಾರ ಧನ-ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಈ ಅದೃಷ್ಟದ ರಾಶಿಗಳು ಯಾವುವೆಂದರೆ... 

6/8
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿಯ ಅಧಿಪತಿ ಗ್ರಹವೂ ಆಗಿರುವ ಶುಕ್ರನಾ ರಾಶಿ ಪರಿವರ್ತನೆಯು ತುಲಾ ರಾಶಿಯವರಿಗೆ ದಿಢೀರ್ ಧನಲಾಭವನ್ನು ನೀಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸುಖ-ದಾಂಪತ್ಯ ಜೀವನವನ್ನು ಅನುಭವಿಸುವಿರಿ. 

7/8
ಮಕರ ರಾಶಿ
ಮಕರ ರಾಶಿ

ಶುಕ್ರನ ಸಂಚಾರದಲ್ಲಿನ ಬದಲಾವನೆಯು ಮಕರ ರಾಶಿಯವರಿಗೆ ಬಂಪರ್ ಧನಲಾಭವನ್ನು ನೀಡಲಿದೆ. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲಿದ್ದು ಹೊಸ ಆಸ್ತಿ-ವಾಹನ ಖರೀದಿ ಯೋಗವೂ ಇದೆ. 

8/8
ಮೀನ ರಾಶಿ
ಮೀನ ರಾಶಿ

ಶುಕ್ರ ರಾಶಿ ಬದಲಾವಣೆಯಿಂದಾಗಿ ಮೀನ ರಾಶಿಯವರ ಅದೃಷ್ಟವೇ ಬದಲಾಗಲಿದೆ. ವಿದೇಶ ಪ್ರವಾಸ ಸಾಧ್ಯತೆ ಇದ್ದು, ಇದರಿಂದ ಆದಾಯದಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದು. ಮಾತ್ರವಲ್ಲ, ಸಮಾಜದಲ್ಲಿ ಕೀರ್ತಿ, ಗೌರವವೂ ಹೆಚ್ಚಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More