PHOTOS

Vastu Tips: ಮನೆಯಲ್ಲಿ ಈ ಸಸ್ಯವನ್ನು ಇಟ್ಟರೆ ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ

ಪಿಯೋನಿ ಹೂ ಅಥವಾ ಸಸ್ಯವು ಅದೃಷ್ಟ, ಸಮೃದ್ಧಿ ಮತ್ತು ಆಶೀರ್ವಾದಗಳ ಸಂಕೇತವೆಂದು ಹೇಳಲಾಗಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ನಿಮ್ಮ ಅನೇಕ...

Advertisement
1/5
ಅದೃಷ್ಟದ ಸಸ್ಯಗಳು
ಅದೃಷ್ಟದ ಸಸ್ಯಗಳು

ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಇಡುವ ಗಿಡಗಳು ಧನಾತ್ಮಕತೆಯನ್ನು ಹೆಚ್ಚಿಸುತ್ತವೆ. ಇಂತಹ ಸಸ್ಯಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯಗಳು ವ್ಯಕ್ತಿಯ ಪ್ರಗತಿ, ಸಂತೋಷ ಮತ್ತು ಸಮೃದ್ಧಿಗೆ ಸಹಾಯ ಮಾಡುತ್ತವೆ. ಇವುಗಳನ್ನು ಮನೆಯಲ್ಲಿ ಇರಿಸುವುದರಿಂದ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸಂಪತ್ತಿನ ದಾರಿ ತೆರೆದುಕೊಳ್ಳುತ್ತದೆ.

2/5
ಪಿಯೋನಿ ಸಸ್ಯಗಳು
ಪಿಯೋನಿ ಸಸ್ಯಗಳು

ಇಂತಹ ಒಂದು ಅದೃಷ್ಟದ ಹೂವಿನ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಪಿಯೋನಿ ಸಸ್ಯವನ್ನು ಅದೃಷ್ಟ, ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ಹೂವುಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಸೌಂದರ್ಯ ಮತ್ತು ಪ್ರಣಯದ ಸಂಕೇತವಾಗಿದೆ. ಮನೆಯಲ್ಲಿರುವ ವಾಸ್ತು ದೋಷವು ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುತ್ತದೆ. ನಿಮ್ಮ ಮನೆಯಲ್ಲಿಯೂ ಈ ತೊಂದರೆ ಇದ್ದರೆ ಪಿಯೋನಿ ಹೂ ಅಥವಾ ಅದರ ಚಿತ್ರವನ್ನು ಮನೆಯಲ್ಲಿ ಇರಿಸಬಹುದು. ಇದನ್ನು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿ ನೆಡಬೇಕು.

3/5
ಎಲ್ಲಾ ರೀತಿಯ ಸಮಸ್ಯೆಗಳು ದೂರ
ಎಲ್ಲಾ ರೀತಿಯ ಸಮಸ್ಯೆಗಳು ದೂರ

ಮಕ್ಕಳ ಮದುವೆಯಲ್ಲಿ ಯಾವುದೇ ರೀತಿಯ ವಿಳಂಬವಾದರೆ ಅಥವಾ ಸಮಸ್ಯೆಗಳಿದ್ದಲ್ಲಿ ಪಿಯೋನಿ ಹೂವಿನ ಪೇಂಟಿಂಗ್ ಅನ್ನು ಡ್ರಾಯಿಂಗ್ ರೂಮ್‌ನಲ್ಲಿ ಹಾಕಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ದಾಂಪತ್ಯದಲ್ಲಿ ಬರುವ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವಂತೆ.

4/5
ಮದುವೆಯಲ್ಲಿ ಉಡುಗೊರೆಯಾಗಿ ನೀಡಬಹುದು
ಮದುವೆಯಲ್ಲಿ ಉಡುಗೊರೆಯಾಗಿ ನೀಡಬಹುದು

ಪಿಯೋನಿ ಹೂವನ್ನು ಮದುವೆಯಲ್ಲಿ ಉಡುಗೊರೆಯಾಗಿ ನೀಡಬಹುದು. ವಾಸ್ತುದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ರೀತಿ ಈ ಹೂವನ್ನು ಯಾವುದೇ ಒಬ್ಬ ವ್ಯಕ್ತಿಗೆ ಉಡುಗೊರೆಯಾಗಿ ನೀಡಿದ್ರೆ ಇಬ್ಬರಿಗೂ ಒಳಿತಾಗುತ್ತದೆ ಎಂದು ನಂಬಲಾಗಿದೆ.  

5/5
ಮನೆಯಲ್ಲಿ ಸಕಾರಾತ್ಮಕತೆ ತರುತ್ತದೆ
ಮನೆಯಲ್ಲಿ ಸಕಾರಾತ್ಮಕತೆ ತರುತ್ತದೆ

ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷಕ್ಕಾಗಿ ಪಿಯೋನಿ ಸಸ್ಯವನ್ನು ಮನೆಯ ನೈಋತ್ಯ ಮೂಲೆಯಲ್ಲಿ ನೆಡಬಹುದು. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗಿದೆ. ಮನೆಯ ಪ್ರವೇಶದ್ವಾರದ ಬಲಭಾಗದಲ್ಲಿ ಪಿಯೋನಿ ನೆಡುವುದು ಉತ್ತಮ. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.





Read More