PHOTOS

Vastu Tips for Plants: ಮನೆ ಮುಂದೆ ಯಾವ ಸಸಿಗಳನ್ನು ನೆಡುವುದು ಶುಭ?

Vastu Tips for Plants: ಮನೆಯ ಮುಂದೆ ಮರ-ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿಯ ಜೊತೆಗೆ ಸಕಾರಾತ್ಮಕತೆಯೂ ದೊರೆಯುತ್ತದೆ. ಆದರೆ, ವಾಸ್ತು ಪ್ರಕಾರ, ಕೆಲವು ಗಿಡ...

Advertisement
1/7
ಸಸ್ಯಗಳಿಗಾಗಿ ವಾಸ್ತು ಸಲಹೆ
ಸಸ್ಯಗಳಿಗಾಗಿ ವಾಸ್ತು ಸಲಹೆ

ವಾಸ್ತು ಪ್ರಕಾರ, ಮನೆ ಮುಂದೆ ಕೆಲವು ಗಿಡಗಳನ್ನು ನೆಡುವುದು ಕುಟುಂಬದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತವೆ. ಅಂತೆಯೇ, ಕೆಲವು ಗಿಡ-ಮರಗಳು ಮನೆಯಲ್ಲಿ ಗ್ರಹ ದೋಷಗಳನ್ನು ನಿವಾರಿಸಿ, ಸಂಕಷ್ಟಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ. ಹಾಗಿದ್ದರೆ, ಮನೆ ಮುಂದೆ ಯಾವ ಗಿಡಗಳಿದ್ದರೆ ಒಳ್ಳೆಯದು ಎಂದು ತಿಳಿಯೋಣ... 

2/7
ನೆಲ್ಲಿಕಾಯಿ ಗಿಡ
ನೆಲ್ಲಿಕಾಯಿ ಗಿಡ

ಧಾರ್ಮಿಕ ನಂಬಿಕೆಗಳ ಪ್ರಕಾರ, ನೆಲ್ಲಿಕಾಯಿ ಗಿಡವು ಭಗವಾನ್ ವಿಷ್ಣುವಿಗೆ ಪ್ರಿಯವಾದ ಸಸ್ಯ. ಈ ಸಸ್ಯದಲ್ಲಿ ಎಲ್ಲಾ ದೇವ-ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಟ್ಟಾಗ ಮಾತ್ರ ಇದು ಮನೆಯವರಿಗೆ ಶುಭ ಫಲಗಳನ್ನು  ನೀಡುತ್ತದೆ ಎಂದು ನಂಬಲಾಗಿದೆ. 

3/7
ಅಶೋಕ ಮರ
ಅಶೋಕ ಮರ

ಅಶೋಕ ಮರವನ್ನು ಅತ್ಯಂತ ಮಂಗಳಕರ ಸಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ಈ ಸಸ್ಯವು ಮನೆಯ ಕಾವಲುಗಾರನಂತೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಮನೆಯ ಮುಂದೆ ಈ ಸಸ್ಯ ಇದ್ದರೆ ದುಷ್ಪರಿಣಾಮಗಳು ನಿವಾರಣೆಯಾಗಿ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ನಂಬಲಾಗಿದೆ.

4/7
ಶಮಿ ಗಿಡ
 ಶಮಿ ಗಿಡ

ವಾಸ್ತು ಶಾಸ್ತ್ರದ ಪ್ರಕಾರ, ಶಮಿ ಗಿಡವನ್ನು ಪೂಜಿಸುವುದರಿಂದ ಶನಿ ದೋಷ ನಿವಾರಣೆಯಾಗಿ, ಶನಿ ಮಹಾತ್ಮನ ಆಶೀರ್ವಾದ ದೊರೆಯುತ್ತದೆ. ಆದರೆ, ಶಮಿ ಸಸ್ಯದ ನೆರಳು ಮನೆಯ ಮೇಲೆ ಬೀಳದಂತೆ ಮನೆಯ ಮುಖ್ಯ ದ್ವಾರದ ಎಡಕ್ಕೆ ಸ್ವಲ್ಪ ದೂರದಲ್ಲಿ ಈ ಗಿಡವನ್ನು ನೆಡಬೇಕು ಎಂಬುದನ್ನು ನೆನಪಿನಲ್ಲಿಡಿ. 

5/7
ಬಾಳೆ ಗಿಡ
ಬಾಳೆ ಗಿಡ

ವಾಸ್ತು ಶಾಸ್ತ್ರದ ಪ್ರಕಾರ, ಬಾಳೆ ಗಿಡದಲ್ಲಿ ಭಗವಾನ್ ವಿಷ್ಣು ನೆಲೆಸಿದ್ದಾನೆ ಎಂದು ನಂಬಲಾಗಿದೆ. ಮನೆಯಲ್ಲಿ ಬಾಳೆ ಗಿಡವನ್ನು ನೆಡುವುದರಿಂದ, ಪ್ರತಿ ಗುರುವಾರ ಈ ಗಿಡವನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಎಲ್ಲವೂ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. 

6/7
ಅಶ್ವಗಂಧ ಸಸ್ಯ
ಅಶ್ವಗಂಧ ಸಸ್ಯ

ಆಯುರ್ವೇದದಲ್ಲಿ ತುಂಬಾ ಪ್ರಸಿದ್ಧವಾಗಿರುವ ಅಶ್ವಗಂಧ ಸಸ್ಯವನ್ನು ಅತ್ಯಂತ ಮಂಗಳಕರ ಸಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕೇತು ದೋಷದಿಂದ ಪರಿಹಾರ ಪಡೆಯಲು ಅಶ್ವಗಂಧದ ಬೇರನ್ನು ತಂದು ಮನೆಯ ಪೂಜಾ ಮಂದಿರದಲ್ಲಿ ಇತ್ತು ಪೂಜಿಸುವುದು ಒಳ್ಳೆಯದು. ಅಷ್ಟೇ ಅಲ್ಲ, ಇದು ಎಲ್ಲಾ ಬಗೆಯ ವಾಸ್ತು ದೋಷಗಳನ್ನು ನಿವಾರಿಸಬಲ್ಲದು ಎಂದು ಹೇಳಲಾಗುತ್ತದೆ. 

7/7
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More