PHOTOS

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಕನ್ನಡಿಯಿಟ್ಟು ಮುಖ ನೋಡಿಕೊಳ್ಳಬೇಡಿ: ಅರ್ಧ ಆಯಸ್ಸಿಗೇ ಬರುತ್ತೆ ಕುತ್ತು; ಮಿತಿಮೀರಿ ಸಾಲವಾಗುತ್ತೆ!

Vastu Tips For Mirror: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀ...

Advertisement
1/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಎಲ್ಲವನ್ನೂ ಅಚ್ಚುಕಟ್ಟಾಗಿ ವಾಸ್ತು ಪ್ರಕಾರ ಇಡಬೇಕು ಎಂದು ಹೇಳುವುದು. ಒಂದು ವೇಳೆ ವಾಸ್ತು ಅನುಸರಿಸದಿದ್ದಲ್ಲಿ ಅದು ನಕಾರಾತ್ಮಕ ಶಕ್ತಿ ಸೃಷ್ಟಿಯಾಗಲು ಕಾರಣವಾಗುತ್ತದೆ.

 

2/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ಇನ್ನು ಮನೆಯಲ್ಲಿ ಕನ್ನಡಿಗಳನ್ನು ಅಳವಡಿಸುವಾಗ, ವಾಸ್ತುಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ವಾಸ್ತು ಪ್ರಕಾರ, ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಇಲ್ಲದಿದ್ದರೆ ಬಡತನ ಬರುತ್ತದೆ.

 

3/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ಕನ್ನಡಿಯನ್ನು ಎಂದಿಗೂ ಪಶ್ಚಿಮ ಅಥವಾ ದಕ್ಷಿಣದ ಗೋಡೆಯ ಮೇಲೆ ಇಡಬಾರದು. ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಮನೆಯಲ್ಲಿ ಯಾವಾಗಲೂ ಅಪಶ್ರುತಿ ಇರುತ್ತದೆ.

 

4/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ಮುರಿದ, ಚೂಪಾದ, ಮಸುಕಾದ ಅಥವಾ ಕೊಳಕು ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಮನೆಯಲ್ಲಿರುವ ಗಾಜು ಸ್ವಲ್ಪ ಒಡೆದಿದ್ದರೂ ಸಹ ತಕ್ಷಣ ಬಿಸಾಡಿ. ಇಂತಹ ಕನ್ನಡಿಯನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ಬಡತನ ಬರುತ್ತದೆ. ಜೊತೆಗೆ ಕುಟುಂಬ ಸದಸ್ಯರ ಪ್ರಗತಿ ನಿಲ್ಲುತ್ತದೆ.

 

5/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ಮನೆಯ ಸ್ಟೋರ್ ರೂಂನಲ್ಲಿ ಕನ್ನಡಿ ಅಳವಡಿಸಬಾರದು. ಈ ಸ್ಥಳದಲ್ಲಿ ಕನ್ನಡಿಯನ್ನು ಇರಿಸುವುದರಿಂದ, ಕುಟುಂಬದ ಸದಸ್ಯರು ಯಾವಾಗಲೂ ಮಾನಸಿಕ ಒತ್ತಡದಲ್ಲಿರುತ್ತಾರೆ. ಅಷ್ಟೇ ಅಲ್ಲದೆ, ಯಾವುದೇ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

 

6/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡಬಾರದು. ಹಾಸಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಬಾರದು. ಹೀಗೆ ಮಾಡಿದರೆ ಅದು ಗೊಂದಲಕ್ಕೆ ಕಾರಣವಾಗುತ್ತದೆ. ಒಂದು ವೇಳೆ ಯಾವುದೇ ಆಯ್ಕೆ ಇಲ್ಲದಿದ್ದರೆ, ಕೋಣೆಯಲ್ಲಿರುವ ಕನ್ನಡಿಗೆ ಒಂದು ಪರದೆಯನ್ನು ಹಾಕಿ.

 

7/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ವಾಸ್ತು ಪ್ರಕಾರ ಮನೆಯ ಅಡುಗೆ ಮನೆಯಲ್ಲಿ ಕನ್ನಡಿ ಹಾಕಬಾರದು. ಅದರಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ಕುಟುಂಬದ ಸದಸ್ಯರ ಆರೋಗ್ಯವನ್ನು ಹಾಳು ಮಾಡುತ್ತದೆ.

 

8/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ವಾಸ್ತು ಪ್ರಕಾರ ಮನೆಗೆ ಧನಾತ್ಮಕ ಶಕ್ತಿ ಬರಬೇಕಾದರೆ ಮುಖ್ಯ ಬಾಗಿಲಿಗೆ ಕನ್ನಡಿ ಹಾಕಬೇಡಿ. ಮುಖ್ಯ ಬಾಗಿಲಿಗೆ ಕನ್ನಡಿಯನ್ನು ಹಾಕುವುದರಿಂದ ಲಕ್ಷ್ಮಿ ದೇವಿಯು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.

 

9/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ಇನ್ನು ಕೆಲ ಮನೆಗಳ ಬಾತ್‌ ರೂಂಗಳಲ್ಲಿ ಕನ್ನಡಿ ಇಟ್ಟಿರುತ್ತಾರೆ. ಒಂದು ವೇಳೆ ಇಡಲೇ ಬೇಕೆಂದಾದರೆ ಪೂರ್ವ ಅಥವಾ ಉತ್ತರದ ಗೋಡೆಗಳ ಮೇಲೆ ಇರಿಸಿ. ಇದರಿಂದ ನೆಗೆಟಿವ್ ಎನರ್ಜಿ ದೂರವಾಗಿ ಆರೋಗ್ಯ ಸುಧಾರಿಸುತ್ತದೆ.

 

10/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ಕನ್ನಡಿ ಇಡಲು ಪೂರ್ವ ಮತ್ತು ಉತ್ತರ ದಿಕ್ಕುಗಳನ್ನು ಮಂಗಳಕರ. ಉತ್ತರ ದಿಕ್ಕು ಸಂಪತ್ತಿನ ದೇವರಾದ ಕುಬೇರನ ಕೇಂದ್ರವಾಗಿದೆ, ಆದ್ದರಿಂದ ಈ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ಈ ಪರಿಹಾರವನ್ನು ಮಾಡುವುದರಿಂದ ವ್ಯಾಪಾರದಲ್ಲಿ ಸಮೃದ್ಧಿಯನ್ನು ತರುತ್ತದೆ.

 

11/11
ಕನ್ನಡಿ ಇಡಬೇಕಾದ ದಿಕ್ಕು
ಕನ್ನಡಿ ಇಡಬೇಕಾದ ದಿಕ್ಕು

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More