PHOTOS

Vastu Tips: ಮುಸ್ಸಂಜೆ ವೇಳೆ ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ತಾಂಡವವಾಡುತ್ತೆ ಬಡತನ

Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ವೇಳೆ ಮನೆಯಲ್ಲಿ ಯಾವ ಕೆಲಸಗಳನ್ನು ...

Advertisement
1/5
ಸಾಲ ನೀಡುವುದನ್ನು ತಪ್ಪಿಸಿ
ಸಾಲ ನೀಡುವುದನ್ನು ತಪ್ಪಿಸಿ

ಸಾಲ ನೀಡುವುದನ್ನು ತಪ್ಪಿಸಿ: ವಾಸ್ತು ಶಾಸ್ತ್ರದ ಪ್ರಕಾರ,  ಸೂರ್ಯಾಸ್ತದ ನಂತರ ಯಾರಿಗೂ ಕೂಡ ಹಣವನ್ನು ನೀಡಬಾರದು. ಅದು ನೀವು ಬೇರೆಯವರಿಂದ ಪಡೆದಿರುವ ಹಣವೇ ಆದರೂ ಸಹ ಮುಸ್ಸಂಜೆಯಲ್ಲಿ, ಸೂರ್ಯಾಸ್ತದ ಬಳಿಕ ಯಾರಿಗಾದರೂ ಹಣ ನೀಡುವುದನ್ನು ತಪ್ಪಿಸಿ.

2/5
ಮುಸ್ಸಂಜೆಯಲ್ಲಿ ಯಾರನ್ನೂ ಬರಿಗೈಯಲ್ಲಿ ಕಳುಹಿಸಬೇಡಿ
ಮುಸ್ಸಂಜೆಯಲ್ಲಿ ಯಾರನ್ನೂ ಬರಿಗೈಯಲ್ಲಿ ಕಳುಹಿಸಬೇಡಿ

ಮುಸ್ಸಂಜೆಯಲ್ಲಿ ಯಾರನ್ನೂ ಬರಿಗೈಯಲ್ಲಿ ಕಳುಹಿಸಬೇಡಿ: ವಾಸ್ತು ಶಾಸ್ತ್ರದ ಪ್ರಕಾರ, ಮುಸ್ಸಂಜೆಯಲ್ಲಿ ಮನೆಗೆ ಬರುವ ಅತಿಥಿಗಳನ್ನು, ನಿರ್ಗತಿಕರು ಅಥವಾ ಬಡವರನ್ನು ಎಂದಿಗೂ ಖಾಲಿ ಕೈಯಲ್ಲಿ ಹಿಂದಿರುಗಿ ಕಳುಹಿಸಬಾರದು. ಸಂಜೆ ವೇಳೆಯಲ್ಲಿ ನಿಮ್ಮ ಮನೆಗೆ ಯಾರೇ ಬಂದರೂ ನಿಮ್ಮ ಕೈಲಾದದ್ದನ್ನು ಕೊಟ್ಟು ಕಳುಹಿಸಿ.

3/5
ಜಗಳವನ್ನು ತಪ್ಪಿಸಿ
ಜಗಳವನ್ನು ತಪ್ಪಿಸಿ

ಜಗಳವನ್ನು ತಪ್ಪಿಸಿ: ಸೂರ್ಯಾಸ್ತದ ವೇಳೆ ಅಥವಾ ಸೂರ್ಯಾಸ್ತದ ನಂತರ ಮನೆಯಲ್ಲಿ ಯಾವುದೇ ರೀತಿಯ ಜಗಳವಾಡುವುದನ್ನು ತಪ್ಪಿಸಿ. ಮುಸ್ಸಂಜೆ ಲಕ್ಷ್ಮಿ ಮನೆಗೆ ಬರುವ ಹೊತ್ತು. ಈ ಸಮಯದಲ್ಲಿ ಜಗಳವಾಡುವುದರಿಂದ ತಾಯಿ ಮಹಾಲಕ್ಷ್ಮಿ ಕುಪಿತಗೊಳ್ಳಬಹುದು.

4/5
ತುಳಸಿಗೆ ಸಂಬಂಧಿಸಿದ ಈ ನಿಯಮವನ್ನು ಪಾಲಿಸಿ
ತುಳಸಿಗೆ ಸಂಬಂಧಿಸಿದ ಈ ನಿಯಮವನ್ನು ಪಾಲಿಸಿ

ತುಳಸಿಗೆ ಸಂಬಂಧಿಸಿದ ಈ ನಿಯಮವನ್ನು ಪಾಲಿಸಿ: ತುಳಸಿ ಲಕ್ಷ್ಮಿ ಸ್ವರೂಪಿಣಿ. ಸಂಜೆ ವೇಳೆ ತಪ್ಪದೇ ತುಳಸಿ ಗಿಡದ ಕೆಳಗೆ ದೀಪ ಹಚ್ಚಿ. ಆದರೆ, ಯಾವುದೇ ಕಾರಣಕ್ಕೂ ತುಳಸಿಯನ್ನು ಸ್ಪರ್ಶಿಸಬೇಡಿ. 

5/5
ಮನೆಯ ಮುಖ್ಯ ಬಾಗಿಲನ್ನು ತೆರೆದಿಡಿ
ಮನೆಯ ಮುಖ್ಯ ಬಾಗಿಲನ್ನು ತೆರೆದಿಡಿ

ಮನೆಯ ಮುಖ್ಯ ಬಾಗಿಲನ್ನು ತೆರೆದಿಡಿ: ವಾಸ್ತು ಪ್ರಕಾರ, ಸಂಜೆ ವೇಳೆ ತಾಯಿ ಲಕ್ಷ್ಮಿಯು ಮನೆಯನ್ನು ಪ್ರವೇಶಿಸುತ್ತಾಳೆ. ಈ ಸಂದರ್ಭದಲ್ಲಿ ಮನೆಯ ಬಾಗಿಲು ತೆರೆದಿರಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ, ಸಂಜೆ ವೇಳೆ ಯಾವುದೇ ಕಾರಣಕ್ಕೂ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿಡಬೇಡಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More