PHOTOS

Vastu Plants: ಮನೆಯಲ್ಲಿ ಲಕ್ಷ್ಮಿ- ನಾರಾಯಣರ ವಾಸಕ್ಕೆ ಎಲ್ಲಾ ದಿಕ್ಕುಗಳಲ್ಲಿ ಈ ಸಸ್ಯಗಳನ್ನು ನೆಡಿ

ರದಲ್ಲಿ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುವ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ಧನ-ಸಂಪತ್ತು ಕೂಡ ಹೆಚ್ಚಾಗುತ್ತ...

Advertisement
1/5

1. ಗ್ರಹದೋಷಗಳಿಂದ ಮುಕ್ತಿ ಸಿಗುತ್ತದೆ - ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದಲ್ಲಿ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶಾಂತತೆ ಮನೆಮಾಡುತ್ತದೆ ಮತ್ತು ಧನ-ಸಂಪತ್ತು ಮತ್ತು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಆದರೆ, ಈ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮಾತ್ರ ಅವುಗಳಿಂದ ಅಪಾರ ಲಾಭ ಸಿಗುತ್ತದೆ. 

2/5

2. ಅರಿಶಿಣ ಗಿಡ- ವಾಸ್ತು ಶಾಸ್ತ್ರದಲ್ಲಿ ತುಳಸಿಯಂತೆಯೇ ಅರಿಶಿಣ ಗಿಡ ನೆಡುವ ಸಲಹೆಯನ್ನು ಕೂಡ ನೀಡಲಾಗುತ್ತದೆ. ಈ ಗಿಡ ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತವೆ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತವೆ. ವಿವಾಹದಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ಈ ಸಸ್ಯ ನಿವಾರಿಸುತ್ತದೆ. ನಿಯಮಿತ ರೂಪದಲ್ಲಿ ಅರಿಶಿಣ ಗಿಡಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಬೃಹಸ್ಪತಿಯ ಸ್ಥಾನಕ್ಕೆ ಬಲ ಸಿಗುತ್ತದೆ

3/5

3. ಶಮಿ ವೃಕ್ಷ- ಶನಿದೇವರಿಗೆ ಶಮಿ ವೃಕ್ಷ ತುಂಬಾ ಇಷ್ಟ. ಶನಿದೇವರನ್ನು ಪ್ರಸನ್ನಗೊಳಿಸಲು ನಿಯಮಿತವಾಗಿ ಈ ಗಿಡಕ್ಕೆ ಪೂಜೆ ಸಲ್ಲಿಸಬೇಕು. ಮನೆಯಿಂದ ಹೊರಹೋಗುವಾಗ ಬಲಭಾಗದಿಂದ ಈ ಗಿಡದ ದರ್ಶನ ಮಾಡುವುದರಿಂದ ನಿಮ್ಮ ಇಡೀ ದಿನ ಉತ್ತಮ ರೀತಿಯಲ್ಲಿ ಕಳೆಯುತ್ತದೆ.

4/5

4. ದಾಸವಾಳದ ಗಿಡ - ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ದಾಸವಾಳ ಗಿಡ ನೆಡುವುದರಿಂದ ವ್ಯಕ್ತಿಯ ಜಾತಕದಲ್ಲಿನ ಮಂಗಳದೋಷದಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜಾತಕದಲ್ಲಿ ಸೂರ್ಯನ ಸ್ಥಿತಿಗೆ ಬಲ ಸಿಗುತ್ತದೆ. ಜೀವನದಲ್ಲಿ ಬರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮನೆಯಲ್ಲಿ ದಾಸವಾಳ ಗಿಡ ನೆಡಲು ಸಲಹೆಯನ್ನು ನೀಡಲಾಗುತ್ತದೆ. 

5/5

5. ದಾಳಿಂಬೆ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ದಾಳಿಂಬೆ ಗಿಡ ನೆಡುವುದು ಶುಭ ಫಲದಾಯಿ ಸಾಬೀತುಪಡಿಸುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಹಲವು ರೀತಿಯ ಗ್ರಹ ದೋಷಗಳಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜೇನು ತುಪ್ಪದಲ್ಲಿ ದಾಳಿಂಬೆಯ ಹೂವುಗಳನ್ನು ಅದ್ದಿ ಶಿವನಿಗೆ ಅರ್ಪಿಸಬೇಕು. ಇದರಿಂದ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ.





Read More