PHOTOS

Vastu Plant: ಶ್ರೀವಿಷ್ಣುಗೆ ಇಷ್ಟವಾಗುವ ಈ ಸಸ್ಯ ಹಣಕಾಸಿನ ಮುಗ್ಗಟ್ಟು ನಿವಾರಿಸಿ, ಶನಿದೋಷದಿಂದ ಮುಕ್ತಿ ನೀಡುತ್ತದೆ

d Vihnu Plant: ಹಿಂದೂ ಧರ್ಮ ಶಾಸ್ತ್ರದಲ್ಲಿ ಹಲವು ಗಿಡ-ಮರಗಳು ಹಾಗೂ ಹೂವುಗಳು ದೇವ-ದೇವತೆಗಳಿಗೆ ಪ್ರಿಯ ಎಂದು ಹೇಳಲಾಗಿದೆ. ಇವುಗಳಲ್ಲಿ ಶಂಖಪುಷ್ಪಿ ಅಥ...

Advertisement
1/5

ನೀವು ಬಯಸುವ ನೌಕರಿಗಾಗಿ- ನೀವು ಬಯಸುವ ನೌಕರಿಯನ್ನು ಪಡೆಯಲು ಶಂಖಪುಷ್ಪಿ ಗಿಡದ ಈ ಉಪಾಯ ಪರಿಣಾಮಕಾರಿ ಸಾಬೀತಾಗಲಿದೆ. ಇದಕ್ಕಾಗಿ ನೀವು ಐದು ಪಟಕದ ತುಂಡುಗಳನ್ನು ತೆಗೆದುಕೊಂಡು ಅವುಗಳನ್ನು ಐದು ಶಂಖಪುಷ್ಪಿ ಹೂವಿನ ಜೊತೆಗೆ ಶ್ರೀವಿಷ್ಣುವಿಗೆ ಅರ್ಪಿಸಿ ಮತ್ತು ಮಾರನೆಯ ದಿನ ಹೂವುಗಳನ್ನು ತೆಗೆದುಕೊಂಡು ನಿಮ್ಮ ಪರ್ಸ್ ಅಥವಾ ವ್ಯಾಲೆಟ್ ನಲ್ಲಿಟ್ಟುಕೊಳ್ಳಿ. ನಂತರ ಸಂದರ್ಶನಕ್ಕೆ ತೆರಳುವಾಗ ಅದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಯಶಸ್ಸು ನಿಮ್ಮದಾಗಲಿದೆ.

2/5

ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ- ಒಂದು ವೇಳೆ ನೀವೂ ಕೂಡ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದರೆ, ಸೋಮವಾರ ಹಾಗೂ ಶನಿವಾರದ ದಿನ ಶಂಖಪುಷ್ಪಿಯ ಮೂರು ಹೂವುಗಳನ್ನು ನೀರಿನಲ್ಲಿ ಹರಿಬಿಡಿ. ಸತತ ಮೂರು ವಾರಗಳ ಕಾಲ ಈ ಉಪಾಯವನ್ನು ಅನುಸರಿಸಿ. ಈ ರೀತಿ ಮಾಡುವುದರಿಂದ ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ. 

3/5

ಶನಿದೋಷದಿಂದ ಮುಕ್ತಿ- ವಾಸ್ತು ತಜ್ಞರ ಪ್ರಕಾರ, ಶಂಖಪುಷ್ಪಿ ಹೂವುಗಳನ್ನು ಒಂದು ವೇಳೆ ಶನಿದೇವನಿಗೆ ಅರ್ಪಿಸಿದರೆ, ಶನಿಯ ಸಾಡೇಸಾತಿ ಹಾಗೂ ಶನಿದೋಷದಿನ ಮುಕ್ತಿ ಸಿಗುತ್ತದೆ ಎನ್ನಲಾಗಿದೆ. ಶಂಖಪುಷ್ಪಿ ಹೂವುಗಳನ್ನು ಹತ್ತಿರ ಇಟ್ಟುಕೊಂಡು ಹಲವು ವಿಶೇಷ ಕಾರ್ಯಗಳನ್ನು ನಡೆಸಿದರೆ, ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

4/5

ಈ ದಿಕ್ಕಿನಲ್ಲಿ ಸಸಿಯನ್ನು ನಡಿ - ಮನೆಯಲ್ಲಿ ಶಂಖಪುಷ್ಪಿ ಗಿಡವನ್ನು ನೆಡುವುದರಿಂದ ಅಷ್ಟದಿಕ್ಕುಗಳ ಶಕ್ತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಇದನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ನೆಟ್ಟರೆ ಮನೆಯಲ್ಲಿನ ಶ್ರೆಯೋಭಿವೃದ್ಧಿಗೆ ಇದು ಕಾರಣವಾಗುತ್ತದೆ. ಅಪ್ಪಿತಪ್ಪಿಯೂ ಕೂಡ ಇದನ್ನು ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ನೆಡಬೇಡಿ. ಏಕೆಂದರೆ, ಮನೆಯ ಯಜಮಾನನ ಸಂಕಷ್ಟಗಳಿಗೆ ಕಾರಣವಾಗುತ್ತದೆ.

5/5

ಈ ಮಾಸದಲ್ಲಿ ಗಿಡವನ್ನು ನೆಡಬೇಕು- ಶ್ರೀವಿಷ್ಣು ಹಾಗೂ ಶ್ರೀಕೃಷ್ಣನಿಗೆ ಶಂಖಪುಷ್ಪಿ ಗಿಡ ತುಂಬಾ ಪ್ರಿಯವಾಗಿದೆ. ಇದೇ ಕಾರಣದಿಂದ ಇದನ್ನು ವಿಷ್ಣುಪ್ರಿಯ ಹಾಗೂ ಕೃಷ್ಣಕಾಂತ ಎಂಬ ಹೆಸರಿನಿಂದಲೂ ಕೂಡ ಕರೆಯಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಶಂಖಪುಷ್ಪಿ ಗಿಡಗ ಬಳ್ಳಿ ಬೆಳೆದಂತೆ ಮನೆ ಉನ್ನತಿ ಸಾಧಿಸುತ್ತದೆ. ಮನೆಯಲ್ಲಿನ ವ್ಯಕ್ತಿಯು ಅಭಿವೃದ್ಧಿ ಹೊಂದುತ್ತಾನೆ. ಇದನ್ನು ಸಾಮಾನ್ಯವಾಗಿ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ನೆಡಲಾಗುತ್ತದೆ. 





Read More