PHOTOS

ತ್ವಚೆಯ ಸೌಂದರ್ಯ ಹೆಚ್ಚಿಸಲು ಸೌತೆಕಾಯಿಯನ್ನು ಈ ರೀತಿ ಬಳಸಿ

Skin Care: ಯಾವುದೇ ರುತುಮಾನವಿರಲಿ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯ. ಇಲ್ಲದಿದ್ದರೆ, ...

Advertisement
1/5
ಸೌತೆಕಾಯಿ
ಸೌತೆಕಾಯಿ

ಪ್ರತಿ ಋತುಮಾನದಲ್ಲೂ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯವಾಗಿದೆ. ನೀವು ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಸೌತೆಕಾಯಿಯ ಸಹಾಯದಿಂದಲೂ  ನಿಮ್ಮ ಚರ್ಮವನ್ನು ಪುನರ್ಯೌವನಗೊಳಿಸಬಹುದು. ಇದಕ್ಕಾಗಿ ಸೌತೆಕಾಯಿಯಿಂದ ಮಾಡಿದ ಫೇಸ್ ಪ್ಯಾಕ್‌ಗಳು ತುಂಬಾ ಪ್ರಯೋಜನಕಾರಿ ಆಗಿವೆ. ಅವುಗಳೆಂದರೆ... 

2/5
ಓಟ್ಸ್, ಮೊಸರು ಮತ್ತು ಜೇನುತುಪ್ಪದೊಂದಿಗೆ ಸೌತೆಕಾಯಿ
ಓಟ್ಸ್, ಮೊಸರು ಮತ್ತು ಜೇನುತುಪ್ಪದೊಂದಿಗೆ ಸೌತೆಕಾಯಿ

ಓಟ್ಸ್, ಮೊಸರು ಮತ್ತು ಜೇನುತುಪ್ಪದೊಂದಿಗೆ ಸೌತೆಕಾಯಿ: ಅರ್ಧ ಸೌತೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ ಅದಕ್ಕೆ ಒಂದು ಚಮಚ ಓಟ್ಸ್, ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ತ್ವಚೆ ಸಾಫ್ಟ್ ಆಗುತ್ತದೆ. 

3/5
ನಿಂಬೆ ರಸ ಮೊತ್ತೆಯೊಂದಿಗೆ ಸೌತೆಕಾಯಿ
ನಿಂಬೆ ರಸ ಮೊತ್ತೆಯೊಂದಿಗೆ ಸೌತೆಕಾಯಿ

ನಿಂಬೆ ರಸ ಮೊತ್ತೆಯೊಂದಿಗೆ ಸೌತೆಕಾಯಿ:  ಮೇಲೆ ತಿಳಿಸಿದಂತೆ ಸೌತೆಕಾಯಿಯನ್ನು ರುಬ್ಬಿಕೊಂಡು ಅದರಲ್ಲಿ ನಿಂಬೆ ರಸ ಮತ್ತು ಮೊಟ್ಟೆಯ ಬಿಳಿಭಾಗವನ್ನು ಹಾಕಿ ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಒಣ ತ್ವಚೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

4/5
ಜೇನುತುಪ್ಪ, ನಿಂಬೆ ಮತ್ತು ಪುದೀನದೊಂದಿಗೆ ಸೌತೆಕಾಯಿ
ಜೇನುತುಪ್ಪ, ನಿಂಬೆ ಮತ್ತು ಪುದೀನದೊಂದಿಗೆ ಸೌತೆಕಾಯಿ

ಜೇನುತುಪ್ಪ, ನಿಂಬೆ ಮತ್ತು ಪುದೀನದೊಂದಿಗೆ ಸೌತೆಕಾಯಿ:  ನಿಂಬೆ, ಜೇನುತುಪ್ಪ ಮತ್ತು ಪುದೀನ ಎಲೆಗಳನ್ನು ಒಟ್ಟಿಗೆ ಮಿಶ್ರಣ ಮಾಡಿ, ನಂತರ ಅದಕ್ಕೆ 4-5 ಚಮಚ ಸೌತೆಕಾಯಿ ರಸವನ್ನು ಸೇರಿಸಿ, ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್  ಒಳಗಿನಿಂದ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. 

5/5
ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯೊಂದಿಗೆ ಸೌತೆಕಾಯಿ
ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯೊಂದಿಗೆ ಸೌತೆಕಾಯಿ

ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯೊಂದಿಗೆ ಸೌತೆಕಾಯಿ:  3 ಚಮಚ ಸೌತೆಕಾಯಿ ರಸ ಮತ್ತು 12 ಹನಿ ರೋಸ್ ವಾಟರ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿ ಸೇರಿಸಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಅನ್ವಯಿಸಿ. 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದು ಮುಖದಲ್ಲಿ ಮೊಡವೆಗಳನ್ನು ಹೋಗಲಾಡಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More