PHOTOS

ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಆಗುವುದು ಭಾರೀ ಲಾಭ

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸೂಕ್ತ ಸಮಯಕ್ಕೆ ಪಾವತಿಸದಿದ್ದರೆ ಬಳಕೆದಾರರು ಭಾರೀ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 

...
Advertisement
1/5
ಸರಿಯಾದ ಖರೀದಿಗೆ ಸರಿಯಾದ ಕಾರ್ಡ್ ಬಳಸಿ
ಸರಿಯಾದ ಖರೀದಿಗೆ ಸರಿಯಾದ ಕಾರ್ಡ್ ಬಳಸಿ

ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ನಿಮ್ಮ ಅಗತ್ಯಗಳ ಆಧಾರದ ಮೇಲೆ ಸರಿಯಾದದನ್ನು ಬಳಸುತ್ತಿರುವಿರಿ  ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ವಿಮಾನ ಟಿಕೆಟ್‌ಗಳು, ಹೋಟೆಲ್‌ಗಳು ಹೀಗೆ ಬೇರೆ ಬೇರೆ ವಿಷಯಗಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾದಾಗ  ಕ್ರೆಡಿಟ್ ಕಾರ್ಡ್ ಅನ್ನು ಬಳಸಿ. ಇದರಿಂದ ರಿವಾರ್ಡ್ ಪಾಯಿಂಟ್ ಸಿಗುತ್ತದೆ.

2/5
EMI ನಲ್ಲಿ ಬಿಲ್ ಪಾವತಿಸಿ
EMI ನಲ್ಲಿ ಬಿಲ್ ಪಾವತಿಸಿ

ಖರೀದಿ ಮಾಡಿದ ನಂತರ ಅದರ ಬಿಲ್ ಅನ್ನು ಮಾಸಿಕ ಕಂತುಗಳಾಗಿ ಪರಿವರ್ತಿಸಿಕೊಳ್ಳಿ. ಇದು  ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಇದರೊಂದಿಗೆ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಬಿಲ್‌ಗಳನ್ನು ಪಾವತಿಸಬಹುದು. ದೊಡ್ಡ ಮೊತ್ತವನ್ನು ಪಾವತಿಸುವ ಒತ್ತಡ ಕೂಡಾ ಇರುವುದಿಲ್ಲ.  

3/5
ತುರ್ತು ಪರಿಸ್ಥಿತಿಯಲ್ಲಿ ಪರ್ಸನಲ್ ಲೋನ್ ಆಯ್ಕೆಯನ್ನು ಆರಿಸಿ
ತುರ್ತು ಪರಿಸ್ಥಿತಿಯಲ್ಲಿ ಪರ್ಸನಲ್ ಲೋನ್ ಆಯ್ಕೆಯನ್ನು ಆರಿಸಿ

ಅನೇಕ ಸಾಲದಾತರು ತಮ್ಮ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಮ್ಮ ಬಳಕೆಯಾಗದ ಕ್ರೆಡಿಟ್ ಮಿತಿಯನ್ನು ವೈಯಕ್ತಿಕ ಸಾಲವಾಗಿ ಪರಿವರ್ತಿಸಲು ಅವಕಾಶ ಮಾಡಿಕೊಡುತ್ತಾರೆ. ಈ ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ತಕ್ಷಣದ ಅಗತ್ಯಗಳನ್ನು ಯಾವುದೇ ಸಮಯದಲ್ಲಿ ಪೂರೈಸಲು ಸಹಾಯ ಮಾಡುತ್ತದೆ.  

4/5
ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಶಾಪಿಂಗ್
ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಶಾಪಿಂಗ್

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದಾಗ ಕ್ರೆಡಿಟ್ ಕಾರ್ಡ್‌ಗಳು 2x ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತವೆ. ಖರೀದಿ ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚು ಸರಿಯಾಗಿದೆ ಎಂದು ಬ್ಯಾಂಕ್‌ಬಜಾರ್ ಹೇಳುತ್ತದೆ.

5/5
ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಿ
ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಿ

ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೋಟೆಲ್ ಬುಕಿಂಗ್‌ಗಳು, ಫ್ಲೈಟ್ ಟಿಕೆಟ್‌ಗಳು ಇತ್ಯಾದಿಗಳಲ್ಲಿ ರಿಯಾಯಿತಿಗಳನ್ನು ಪಡೆಯಲು ತಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಅವಕಾಶ ಮಾಡಿಕೊಡುತ್ತವೆ. ಈ ರಿವಾರ್ಡ್ ಪಾಯಿಂಟ್‌ಗಳು ಬಳಕೆದಾರರಿಗೆ ವಿಶೇಷ ಶಾಪಿಂಗ್ ವೋಚರ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ರೀಚಾರ್ಜ್ ವೋಚರ್‌ಗಳನ್ನು ಒದಗಿಸುತ್ತವೆ.  





Read More