PHOTOS

White Hair: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲೇ ತಯಾರಿಸಿ ಈ ಹೇರ್ ಡೈ

White Hair Remedies: ಅಕಾಲಿಕ ಬಿಳಿ ಕೂದಲು ಇಂದು ಬಹುತೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ನೀವು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ಬಿಳಿ ಕೂ...

Advertisement
1/8
ಬಿಳಿ ಕೂದಲು
ಬಿಳಿ ಕೂದಲು

ಈ ಬದಲಾದ ಜೀವನಶೈಲಿಯಲ್ಲಿ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಬಹುತೇಕ ಜನರನ್ನು ಕಾಡುತ್ತಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಪ್ರಾಡಕ್ಟ್ ಗಳು ಲಭ್ಯವಿವೆ. 

2/8
ಹೇರ್ ಡೈ
ಹೇರ್ ಡೈ

ನಮ್ಮಲ್ಲಿ ಕೆಲವರಿಗೆ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈ ಬಳಕೆಯಿಂದಾಗಿ ಚರ್ಮ ಮತ್ತು ಕೂದಲಿನ ಮೇಲೆ ಅಡ್ಡಪರಿಣಾಮಗಳು ಉಂಟಾಗಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. 

3/8
ಮನೆ ಮದ್ದು
ಮನೆ ಮದ್ದು

ಆಯುರ್ವೇದ ಪ್ರಕಾರ, ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ನಾಲ್ಕೇ ನಾಲ್ಕು ಪದಾರ್ಥಗಳನ್ನು ಬಳಸಿ ನಿಮ್ಮ ಅಕಾಲಿಕ ಬಿಳಿ ಕೂದಲಿಗೆ ಗುಡ್ ಬೈ ಹೇಳಬಹುದು. 

4/8
ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳು
ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳು

ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳೆಂದರೆ:-  * ತೆಂಗಿನಕಾಯಿಯ ಜುಂಗು * 5 ಬಾದಾಮಿ  * 1 ಕರ್ಪೂರ  * ಸ್ವಲ್ಪ ಕೊಬ್ಬರಿ ಎಣ್ಣೆ 

5/8
ಹೇರ್ ಡೈ ತಯಾರಿಸುವ ವಿಧಾನ
ಹೇರ್ ಡೈ ತಯಾರಿಸುವ ವಿಧಾನ

ಮೊದಲಿಗೆ ತೆಂಗಿನಕಾಯಿ ಜುಂಗು ಒಂದು ಬಾಣಲೆಯಲ್ಲಿ ಇಟ್ಟು ಅದರೊಂದಿಗೆ 5 ಬಾದಾಮಿಯನ್ನು ಹಾಕಿ ಒಂದೇ ಒಂದು ಕರ್ಪೂರವನ್ನು ಹಚ್ಚಿ ಅದರ ಮೇಲಿಡಿ. ಈ ಮೂರು ಪದಾರ್ಥಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗುವವರೆಗೆ ಹಾಗೆಯೇ ಬಿಡಿ. ನಂತರ ಆ ಪೌಡರ್ ಅನ್ನು ಜರಡಿ ಆಡಿಕೊಂಡು ಅದರಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. 

6/8
ಹೇರ್ ಡೈ ಬಳಸುವ ವಿಧಾನ
ಹೇರ್ ಡೈ ಬಳಸುವ ವಿಧಾನ

ನೀವು ಈ ರೀತಿಯಾಗಿ ಮನೆಯಲ್ಲಿಯೇ ತಯಾರಿಸಿದ ಹೇರ್ ಡೈ ಅನ್ನು ಇತರ ಹೇರ್ ಡೈಗಳನ್ನು ಅಪ್ಪ್ಲೈ ಮಾಡುವ ರೀತಿಯಲ್ಲಿಯೇ ನಿಮ್ಮ ಕೂದಲಿನ ಬುಡದಿಂದಲೂ ಚೆನ್ನಾಗಿ ಹಚ್ಚಿ. ಬಳಿಕ 40 ನಿಮಿಷಗಳ ಬಳಿಕ ಹಾಗೆಯೇ ಬಿಡಿ. 

7/8
ನೈಸರ್ಗಿಕ ಕಪ್ಪು ಕೂದಲು
ನೈಸರ್ಗಿಕ ಕಪ್ಪು ಕೂದಲು

ಈ ಹೇರ್ ಡೈ ಅನ್ನು ಹಚ್ಚಿ 40 ನಿಮಿಷಗಳ ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ. 

8/8
ಕಪ್ಪು ಕೂದಲು
ಕಪ್ಪು ಕೂದಲು

ನಿಯಮಿತವಾಗಿ ಈ ಮನೆಮದ್ದನ್ನು ಬಳಸುವುದರಿಂದ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More