PHOTOS

ತೆಂಗಿನೆಣ್ಣೆಯಲ್ಲಿ ಇದೊಂದು ಪದಾರ್ಥ ಬೆರೆಸಿ ಹಚ್ಚಿ ಬಿಳಿ ಕೂದಲು ಬುಡದಿಂದಲೂ ಕಪ್ಪಾಗಿ ಮಾರುದ್ದ ಬೆಳೆಯುತ್ತೆ!

White Hair Remedies: ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಅರಿಶಿನವನ್ನು ಬಳಸಿ ಬಿಳಿ ಕೂದಲನ್ನು...

Advertisement
1/8
ಕೂದಲಿನ ಸಮಸ್ಯೆಗಳು
ಕೂದಲಿನ ಸಮಸ್ಯೆಗಳು

ಬದಲಾದ ಋತು, ಒತ್ತಡಭರಿತ ಜೀವನ ಶೈಲಿಯಿಂದಾಗಿ ಕೂದಲುದುರುವಿಕೆ, ಡ್ಯಾಂಡ್ರಫ್, ಬಿಳಿ ಕೂದಲಿನ ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಒಂದೇ ಒಂದು ಪದಾರ್ಥ ಕೂದಲಿನ ಸಂಬಂಧಿತ ನಿಮ್ಮೆಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದ

2/8
ಹೋಮ್ ರೆಮಿಡಿ ತಯಾರಿಸಲು ಬೇಕಾಗುವ ಪದಾರ್ಥಗಳು
ಹೋಮ್ ರೆಮಿಡಿ ತಯಾರಿಸಲು ಬೇಕಾಗುವ ಪದಾರ್ಥಗಳು

ಕೂದಲಿನ ಸಮಸ್ಯೆಗಳಿಗೆ ಮನೆಮದ್ದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು:   * ಅರಿಶಿನ 5-6ಚಮಚ  * ತೆಂಗಿನೆಣ್ಣೆ - 2 ಚಮಚ 

3/8
ಕೂದಲಿಗೆ ಅರಿಶಿನದ ಪ್ರಯೋಜನಗಳು
ಕೂದಲಿಗೆ ಅರಿಶಿನದ ಪ್ರಯೋಜನಗಳು

ಅರಿಶಿನವು ದೇಹದಲ್ಲಿ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಗೆ ಕೂದಲುದುರುವಿಕೆ, ಡ್ಯಾಂಡ್ರಫ್ ಸಮಸ್ಯೆಗಳಿಂದಲೂ ಕೂದಲನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಇದು ಬಿಳಿ ಕೂದಲನ್ನು ಕಪ್ಪಾಗಿಸುವಲ್ಲೂ ಪ್ರಯೋಜನಕಾರಿ ಆಗಿದೆ. 

4/8
ತೆಂಗಿನೆಣ್ಣೆ
ತೆಂಗಿನೆಣ್ಣೆ

ಯಾವುದೇ ರಾಸಾಯನಿಕಗಳಿಲ್ಲದೆ ತಯಾರಿಸಲ್ಪಟ್ಟಿರುವ ತೆಂಗಿನೆಣ್ಣೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕೂದಲಿಗೆ ನಿಯಮಿತವಾಗಿ ತೆಂಗಿನೆಣ್ಣೆ ಬಳಸುವುದರಿಂದ ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಂದಲೂ ದೂರ ಉಳಿಯಬಹುದು. 

5/8
ತೆಂಗಿನೆಣ್ಣೆ ಮತ್ತು ಅರಿಶಿನ
ತೆಂಗಿನೆಣ್ಣೆ ಮತ್ತು ಅರಿಶಿನ

ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೊದಲು ಒಂದು ಬಾಣಲೆಗೆ ನಾಲ್ಕೈದು ಸ್ಪೂನ್ ಅರಿಶಿನ ಹಾಕಿ ಸಣ್ಣ ಉರಿಯಲ್ಲಿ ಉರಿಯಿರಿ. ಅರಿಶಿನ ಕಪ್ಪು ಬಣ್ಣಕ್ಕೆ ತಿರುಗಿದ ಬಳಿಕ ಒಂದೆರಡು ಚಮಚ ಪುಡಿಯನ್ನು ಬೇರೆ ಬಟ್ಟಲಿಗೆ ಹಾಕಿ ಇದಕ್ಕೆ ಅಷ್ಟೇ ಪ್ರಮಾಣದ ತೆಂಗಿನೆಣ್ಣೆ  ಹಾಕಿ ಚೆನ್ನಾಗಿ ಬೆರೆಸಿ. 

6/8
ಬಿಳಿ ಕೂದಲಿಗೆ ಹೋಂ ಮೇಡ್ ಹೇರ್ ಡೈ
ಬಿಳಿ ಕೂದಲಿಗೆ ಹೋಂ ಮೇಡ್ ಹೇರ್ ಡೈ

ಅರಿಶಿನ ಕೊಬ್ಬರಿ ಎಣ್ಣೆಯಿಂದ ತಯಾರಿಸಿದ ಈ ಹೋಂ ಮೇಡ್ ಹೇರ್ ಡೈ ಅನ್ನು ಕೂದಲಿನ ಬುಡದಿಂದಲೂ ತುದಿಯವರೆಗೂ ಹಚ್ಚಿ. ಎರಡು ಗಂಟೆಗಳ ಕಾಲ ಹಾಗೆ ಬಿಡಿ. 

7/8
ಹೇರ್ ವಾಶ್
ಹೇರ್ ವಾಶ್

ಮನೆಯಲ್ಲಿ ತಯಾರಿಸಿದ ಈ ಹೇರ್ ಡೈ ಅನ್ನು ಕೂದಲಿಗೆ ಹಚ್ಚಿದ ಎರಡು ಗಂಟೆಗಳ ಬಳಿಕ ಬೆಚ್ಚಗಿನ ನೀರಿನಿಂದ ವಾಶ್ ಮಾಡಿ. ಈ ವೇಳೆ ಯಾವುದೇ ಶಾಂಪೂ ಅಥವಾ ಸೀಗೆಕಾಯಿಯನ್ನು ಬಳಸಬೇಡಿ. ಈ ಹೇರ್ ಡೈ ಹಚ್ಚಿದ ಎರಡು ದಿನಗಳ ಬಳಿಕ ನೀವು ಶಾಂಪೂ ಬಳಸಬಹುದು. 

8/8
ಸೂಚನೆ
ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More