PHOTOS

Tulasi Niyam: ಮನೆಯಲ್ಲಿ ತುಳಸಿ ಸಸ್ಯ ಒಣಗುವುದು ಈ ದೊಡ್ಡ ತೊಂದರೆಯ ಸೂಚನೆ

Tulasi Niyam: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನ ಪಡೆದಿರುವ ತುಲಸಿ ಸಸ್ಯವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಪ್ರತೀಕ ಎಂದು ನಂಬಲಾಗಿದೆ. ಅಂತಹ ತುಳಸಿ ಸ...

Advertisement
1/8
ತುಳಸಿ ಸಸ್ಯ
ತುಳಸಿ ಸಸ್ಯ

ಅತ್ಯಂತ ಪವಿತ್ರ ಸಸ್ಯ ಎಂದು ಪೂಜಿಸಲ್ಪಡುವ ತುಳಸಿ ಗಿಡ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ಭಗವಾನ್ ವಿಷ್ಣುವಿನ ಆಶೀರ್ವಾದ ಸದಾ ಇರುತ್ತದೆ ಎಂಬ ನಂಬಿಕೆ ಇದೆ. 

2/8
ತುಳಸಿ ಲಕ್ಷ್ಮಿ ಪ್ರತೀಕ
ತುಳಸಿ ಲಕ್ಷ್ಮಿ ಪ್ರತೀಕ

ತುಳಸಿ ಸಸ್ಯ ಸದಾ ಹಚ್ಚ ಹಸಿರಾಗಿರಬೇಕು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. 

3/8
ತುಳಸಿ ಒಣಗುವುದು
ತುಳಸಿ ಒಣಗುವುದು

ಕೆಲವೊಮ್ಮೆ ಎಷ್ಟೇ ಕಾಳಜಿ ವಹಿಸಿದರೂ ಕೂಡ ಮನೆಯಲ್ಲಿ ತುಳಸಿ ಗಿಡ ಒಣಗುತ್ತದೆ. ಶೀತ ಕಾಲದಲ್ಲಿ ತುಳಸಿ ಗಿಡ ಒಣಗುವುದು ಸಾಮಾನ್ಯವೆಂದು ಪರಿಗಣಿಸಲಾಗಿದೆ. ಆಡರೇ, ಕಾರಣವಿಲ್ಲದೆ, ಮನೆಯಲ್ಲಿ ತುಳಸಿ ಸಸ್ಯ ಒಣಗುವುದನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಅಷ್ಟೇ ಅಲ್ಲದೆ, ಒಣ ತುಳಸಿಯು ಕೆಲವು ಸಂಕೇತಗಳನ್ನು ನೀಡುತ್ತದೆ ಎನ್ನಲಾಗುತ್ತದೆ. 

4/8
ಆರ್ಥಿಕ ನಷ್ಟ
ಆರ್ಥಿಕ ನಷ್ಟ

ಯಾವುದೇ ಕಾರಣವಿಲ್ಲದೆ ತುಳಸಿ ಗಿಡ ಒಣಗುತ್ತಿದ್ದರೆ ಅದು ಅಶುಭ ಸಂಕೇತವಾಗಿದ್ದು ದೊಡ್ಡ ಆರ್ಥಿಕ ನಷ್ಟವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. 

5/8
ಲಕ್ಷ್ಮಿ ನೆಲೆಸುವುದಿಲ್ಲ
ಲಕ್ಷ್ಮಿ ನೆಲೆಸುವುದಿಲ್ಲ

ಮನೆಯಲ್ಲಿರುವ ತುಳಸಿ ಸಸ್ಯ ಬಾಡುವುದೆಂದರೆ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ ಎನ್ನಲಾಗುತ್ತದೆ. 

6/8
ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ
ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ

ಒಣಗಿದ ತುಳಸಿ ಸಸ್ಯ ಮನೆಯಲ್ಲಿದ್ದರೆ ಅದು ಕುಟುಂಬಸ್ಥರ ನಡುವೆಯೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. 

7/8
ಋಣಾತ್ಮಕ ಶಕ್ತಿ
ಋಣಾತ್ಮಕ ಶಕ್ತಿ

ಮನೆಯಲ್ಲಿ ತುಳಸಿ ಸಸ್ಯ ಒಣಗುವುದರಿಂದ ಅಂತಹ ಮನೆಯಲ್ಲಿ ಋಣಾತ್ಮಕ ಶಕ್ತಿಯ ಪ್ರವೇಶವಾಗಿ, ಮನೆಯ ಶಾಂತಿ, ನೆಮ್ಮದಿ ಹಾಳಾಗಬಹುದು ಎನ್ನಲಾಗುತ್ತದೆ. 

8/8
ಒಣ ತುಳಸಿ ಸಸ್ಯವನ್ನು ಏನು ಮಾಡಬೇಕು?
ಒಣ ತುಳಸಿ ಸಸ್ಯವನ್ನು ಏನು ಮಾಡಬೇಕು?

ಮನೆಯಲ್ಲಿ ತುಳಸಿ ಸಸ್ಯ ಒಣಗಿದ್ದರೆ ಅದನ್ನು ಯಾವುದಾದರೂ ನದಿಯ ನೀರಿನಲ್ಲಿ ಎಸೆಯಬೇಕು. ಬಳಿಕ ಮನೆಗೆ ಇನ್ನೊಂದು ತುಳಸಿ ಸಸ್ಯವನ್ನು ತಂದು ನೆಡಬೇಕು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More