PHOTOS

ಹಣಕಾಸಿನ ತೊಂದರೆಯೇ? ಪೊರಕೆಗೆ ಸಂಬಂಧಿಸಿದ ಈ ಪರಿಹಾರ ಪ್ರಯತ್ನಿಸಿ

ಸನಾತನ ಧರ್ಮದಲ್ಲಿ ಲಕ್ಷ್ಮಿಯು ಪೊರಕೆಯಲ್ಲಿ ವಾಸಿಸುತ್ತಾಳೆ ಎಂದು ನಂಬುತ್ತಾರೆ. ಎಲ್ಲಿ ಪೊರಕೆಯನ್ನು ಗೌರವಿಸುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿಯು ಹೆಚ್...

Advertisement
1/5
ಈ ವಾರದಿಂದ ಹೊಸ ಪೊರಕೆ ಬಳಸಿ
ಈ ವಾರದಿಂದ ಹೊಸ ಪೊರಕೆ ಬಳಸಿ

ನೀವು ಮನೆ-ಕಚೇರಿಗಾಗಿ ಹೊಸ ಪೊರಕೆ ತಂದಿದ್ದರೆ, ಅದರ ಬಳಕೆಯನ್ನು ಶನಿವಾರದಿಂದ ಪ್ರಾರಂಭಿಸಬೇಕು. ಇದನ್ನು ಮಾಡುವುದರಿಂದ ಕುಟುಂಬವು ಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದವನ್ನು ಪಡೆಯುತ್ತದೆ ಮತ್ತು ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

2/5
ಹಳೆಯ ಪೊರಕೆಯನ್ನು ತಕ್ಷಣವೇ ಎಸೆಯಬೇಡಿ
ಹಳೆಯ ಪೊರಕೆಯನ್ನು ತಕ್ಷಣವೇ ಎಸೆಯಬೇಡಿ

ಮನೆಯನ್ನು ಸ್ವಚ್ಛಗೊಳಿಸಲು ನೀವು ಹೊಸ ಪೊರಕೆ ಖರೀದಿಸಿದ್ದರೆ, ಹಳೆಯ ಪೊರಕೆಯನ್ನು ತಕ್ಷಣವೇ ಎಸೆಯಬೇಡಿ. ಈ ರೀತಿ ಮಾಡುವುದನ್ನು ಶಾಸ್ತ್ರಗಳಿಗೆ ವಿರುದ್ಧವಾಗಿ ಪರಿಗಣಿಸಲಾಗಿದೆ ಮತ್ತು ತಾಯಿ ಲಕ್ಷ್ಮಿ ಕೂಡ ಕೋಪಗೊಂಳ್ಳುತ್ತಾಳೆ. ಬದಲಿಗೆ ನೀವು ಹಳೆಯ ಪೊರಕೆಯನ್ನು ಶನಿವಾರ, ಅಮವಾಸ್ಯೆ, ಹೋಳಿ ಹುಣ್ಣಿಮೆ ಅಥವಾ ಗ್ರಹಣ ಮುಗಿದ ನಂತರ ಎಸೆಯಬಹುದು.

3/5
ಈ ಮೂರು ದಿನ ಪೊರಕೆ ಎಸೆಯಬೇಡಿ
ಈ ಮೂರು ದಿನ ಪೊರಕೆ ಎಸೆಯಬೇಡಿ

ಗುರುವಾರ, ಶುಕ್ರವಾರ ಅಥವಾ ಏಕಾದಶಿ ದಿನ ಹಳೆಯ ಪೊರಕೆಯನ್ನು ಎಸೆಯಬಾರದು. ಈ ಮೂರು ದಿನಗಳನ್ನು ಲಕ್ಷ್ಮಿ ದೇವಿಗೆ ಸಮರ್ಪಿತವೆಂದು ಪರಿಗಣಿಸಲಾಗಿದೆ. ಈ ದಿನ ನೀವು ಅವರ ನೆಚ್ಚಿನ ವಸ್ತು ಪೊರಕೆಯನ್ನು ಎಸೆದರೆ, ಅವರು ಕೋಪಗೊಳ್ಳಬಹುದು, ಇದರಿಂದಾಗಿ ಮನೆಯಲ್ಲಿ ಬಡತನವನ್ನು ಯಾರೂ ತಡೆಯಲು ಸಾಧ್ಯವಾಗುವುದಿಲ್ಲ.

4/5
ದೀರ್ಘಕಾಲದ ಕಾಯಿಲೆಗೆ ಪರಿಹಾರ
ದೀರ್ಘಕಾಲದ ಕಾಯಿಲೆಗೆ ಪರಿಹಾರ

ಮನೆಯಲ್ಲಿರುವ ವ್ಯಕ್ತಿಯ ದೀರ್ಘಕಾಲದ ಕಾಯಿಲೆ ವಾಸಿಯಾಗದಿದ್ದರೆ, ಈ ಪೊರಕೆಯ ಉಪಾಯ ಉಪಯುಕ್ತವಾಗಿದೆ. ಗುರುವಾರ ಬೆಳಗ್ಗೆ  ಪೊರಕೆಯಿಂದ ಮನೆ ಗುಡಿಸಿ ಗಂಗಾಜಲದಿಂದ ಸ್ನಾನ ಮಾಡಬೇಕು. ಇದನ್ನು ಮಾಡುವುದರಿಂದ, ರೋಗಿಯ ಆರೋಗ್ಯವು ಸುಧಾರಿಸಲು ಪ್ರಾರಂಭಿಸುತ್ತದೆ.

5/5
ಚಿನ್ನದಿಂದ ಮಾಡಿದ ಚಿಕ್ಕ ಪೊರಕೆ
 ಚಿನ್ನದಿಂದ ಮಾಡಿದ ಚಿಕ್ಕ ಪೊರಕೆ

ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಜನರು ಗುರುವಾರದಂದು ತಮ್ಮ ಮನೆಗೆ ಚಿನ್ನದಿಂದ ಮಾಡಿದ ಚಿಕ್ಕ ಪೊರಕೆಯನ್ನು ತಂದು ಪೂಜಾ ಸ್ಥಳದಲ್ಲಿ ಪೂಜೆ ಮಾಡಿದ ನಂತರ ಅದನ್ನು ಕಮಾನಿನಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ವಾಸಸ್ಥಾನ ಶಾಶ್ವತವಾಗಿ ಉಳಿಯುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.





Read More