PHOTOS

ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿಯೇ ತಯಾರಿಸಿ ಆರ್ಗ್ಯಾನಿಕ್ ಹೇರ್ ಡೈ..!

White Hair Remedies: ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ, ಕೂದಲು ದಟ್ಟವಾಗಿ ಬೆಳೆಯುವಂತೆ ಮಾಡಲು ಮನೆಯಲ್ಲಿಯೇ ಕೆಲವು ಹೇರ್ ಡೈ ತಯಾರ...

Advertisement
1/8
ಬಿಳಿ ಕೂದಲಿಗೆ ಹೇರ್ ಡೈ
ಬಿಳಿ ಕೂದಲಿಗೆ ಹೇರ್ ಡೈ

ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಹೇರ್ ಡೈಗಳು ಲಭ್ಯವಿವೆ. ಆದರೆ, ಇವುಗಳಲ್ಲಿ ಅಮೋನಿಯಾ ಬಳಸುವುದರಿಂದ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. 

2/8
ಬಿಳಿ ಕೂದಲಿಗೆ ಮನೆಮದ್ದು
ಬಿಳಿ ಕೂದಲಿಗೆ ಮನೆಮದ್ದು

ಆದರೆ, ನಿಮ್ಮ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ  ಆರ್ಗ್ಯಾನಿಕ್ ಹೇರ್ ಡೈ ತಯಾರಿಸಬಹುದು. 

3/8
ಆರ್ಗ್ಯಾನಿಕ್ ಹೇರ್ ಡೈಗೆ ಬೇಕಾಗುವ ಪದಾರ್ಥಗಳು
ಆರ್ಗ್ಯಾನಿಕ್ ಹೇರ್ ಡೈಗೆ ಬೇಕಾಗುವ ಪದಾರ್ಥಗಳು

 ಆರ್ಗ್ಯಾನಿಕ್ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ:  * ಮೆಂತ್ಯ ಪುಡಿ  * ಕರಿಬೇವಿನ ಪುಡಿ  * ಹರಳೆಣ್ಣೆ  * ತೆಂಗಿನೆಣ್ಣೆ  

4/8
ಆರ್ಗ್ಯಾನಿಕ್ ಹೇರ್ ಡೈ ತಯಾರಿಸುವ ವಿಧಾನ
ಆರ್ಗ್ಯಾನಿಕ್ ಹೇರ್ ಡೈ ತಯಾರಿಸುವ ವಿಧಾನ

ಈ  ಆರ್ಗ್ಯಾನಿಕ್ ಹೇರ್ ಡೈ ತಯಾರಿಸಲು ಮೊದಲಿಗೆ ಒಂದು ಬಟ್ಟಳಿಗೆ 2 ಚಮಚ ಹರಳೆಣ್ಣೆ ಹಾಕಿ, ಬಳಿಕ ಅಷ್ಟೇ ಪ್ರಮಾಣದ ತೆಂಗಿನೆಣ್ಣೆ ಹಾಕಿ ಬಳಿಕ ಒಂದೊಂದು ಚಮಚ ಮೆಂತ್ಯ ಪುಡಿ ಹಾಗೂ ಕರಿಬೇವಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಎರಡು ಗಂಟೆಗಳವರೆಗೆ ಹಾಗೆ ಬಿಡಿ. 

5/8
ಆರ್ಗ್ಯಾನಿಕ್ ಹೇರ್ ಡೈ ಬಳಸುವ ವಿಧಾನ
ಆರ್ಗ್ಯಾನಿಕ್ ಹೇರ್ ಡೈ ಬಳಸುವ ವಿಧಾನ

ಈ ರೀತಿಯಾಗಿ ಮನೆಯಲ್ಲಿಯೇ ತಯಾರಿಸಿರುವ ಆರ್ಗ್ಯಾನಿಕ್ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹೇರ್ ಪ್ಯಾಕ್ ರೀತಿ ಹಚ್ಚಿ, ಲಘುವಾಗಿ ಮಸಾಜ್ ಮಾಡಿ. ಒಂದೆರಡು ಗಂಟೆಗಳ ಕಾಲ ಹೇರ್ ಡೈ ಅನ್ನು ಹಾಗೆ ಬಿಡಿ. 

6/8
ಹೇರ್ ವಾಶ್
ಹೇರ್ ವಾಶ್

ಆರ್ಗ್ಯಾನಿಕ್ ಹೇರ್ ಡೈ ಅನ್ನು ಕೂದಲಿಗೆ ಲೇಪಿಸಿದ ಎರಡು ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ. 

7/8
ಆರ್ಗ್ಯಾನಿಕ್ ಹೇರ್ ಡೈ ಪ್ರಯೋಜನ
ಆರ್ಗ್ಯಾನಿಕ್ ಹೇರ್ ಡೈ ಪ್ರಯೋಜನ

ಹೀಗೆ ಮನೆಯಲ್ಲಿಯೇ ತಯಾರಿಸಿದ  ಆರ್ಗ್ಯಾನಿಕ್ ಹೇರ್ ಡೈ ಅನ್ನು ವಾರದಲ್ಲಿ ಎರಡು ಬಾರಿ ಬಳಸುತ್ತಾ ಬಂದರೆ ಒಂದೂ ಬಿಳಿ ಕೂದಲಿಲ್ಲದಂತೆ ಕೂದಲನ್ನು ಕಪ್ಪಾಗಿಸಬಹುದು. ಜೊತೆಗೆ ಉದ್ದ ದಟ್ಟವಾದ ಕೂದಲನ್ನೂ ನಿಮ್ಮದಾಗಿಸಬಹುದು.   

8/8
ಸೂಚನೆ
ಸೂಚನೆ

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More