PHOTOS

Papaya Remedies: ಪಪ್ಪಾಯಿ ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭ

Papaya Health Benefits: ಪಪ್ಪಾಯಿ ಹಣ್ಣು ಮತ್ತು ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಯಮಿತವಾಗಿ ಪಪ್ಪಾಯಿ ಸೇವಿಸುವುದರಿಂದ ನೀವು...

Advertisement
1/5
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವಿಸಿ
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವಿಸಿ

ನೀವು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ತೊಂದರೆಗೀಡಾಗಿದ್ದರೆ, ಪಪ್ಪಾಯಿಯು ತುಂಬಾ ಪ್ರಯೋಜನಕಾರಿ. ತಜ್ಞರ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ ಮತ್ತು ಜೀರ್ಣಕ್ರಿಯೆ ಸಹ ಸರಿಯಾಗುತ್ತದೆ.

2/5
ಮುಟ್ಟಿನ ಸಮಸ್ಯೆಗೆ ರಾಮಬಾಣ
ಮುಟ್ಟಿನ ಸಮಸ್ಯೆಗೆ ರಾಮಬಾಣ

ಮಹಿಳೆಯರು ಮುಟ್ಟಿನ ವೇಳೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಪಪ್ಪಾಯಿ ಸೇವಿಸಬೇಕು. ಪಪ್ಪಾಯಿ ಸೇವಿಸುವ ಮೂಲಕ ಪಿರಿಯಡ್ ಸೈಕಲ್ ನಿಯಮಿತವಾಗಿರುತ್ತದೆ. ನಿಮ್ಮ ಪಿರಿಯಡ್ಸ್ ನಿಯಮಿತವಾಗಿಲ್ಲದಿದ್ದರೆ ನೀವು ಪಪ್ಪಾಯಿಯನ್ನು ಸೇವಿಸಬಹುದು.   

3/5
ತೂಕ ಇಳಿಕೆಗೆ ಸಹಕಾರಿ
ತೂಕ ಇಳಿಕೆಗೆ ಸಹಕಾರಿ

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಪಪ್ಪಾಯಿಯನ್ನು ಸೇರಿಸಿ. ಇದರಲ್ಲಿರುವ ನಾರಿನಂಶವು ತೂಕ ಇಳಿಸುವಲ್ಲಿ ಪ್ರಯೋಜನಕಾರಿಯಾಗಿದೆ.

4/5
ಮೊಡವೆಗಳ ಸಮಸ್ಯೆಗೆ ಪರಿಹಾರ
ಮೊಡವೆಗಳ ಸಮಸ್ಯೆಗೆ ಪರಿಹಾರ

ನಿಮಗೆ ಮೊಡವೆಗಳ ಸಮಸ್ಯೆ ಇದ್ದರೆ ಪಪ್ಪಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಪಪ್ಪಾಯಿಯಲ್ಲಿ ವಿಟಮಿನ್ ಸಿ ಇದ್ದು, ಇದು ಟ್ಯಾನಿಂಗ್ ಅನ್ನು ನಿವಾರಿಸುತ್ತದೆ ಮತ್ತು ಮುಖಕ್ಕೆ ಹೊಳಪನ್ನು ತರುತ್ತದೆ.

5/5
ಪಪ್ಪಾಯಿ ಎಲೆಗಳ ಜ್ಯೂಸ್ ಸೇವಿಸಿ
ಪಪ್ಪಾಯಿ ಎಲೆಗಳ ಜ್ಯೂಸ್ ಸೇವಿಸಿ

ಪಪ್ಪಾಯಿಯ ಜೊತೆಗೆ ಪಪ್ಪಾಯಿ ಎಲೆಗಳು ತುಂಬಾ ಪ್ರಯೋಜನಕಾರಿ. ಅನಾರೋಗ್ಯದ ಸಮಯದಲ್ಲಿ ನಿಮ್ಮ ಪ್ಲೇಟ್ಲೆಟ್ಗಳು ಕಡಿಮೆಯಾಗಿದ್ದರೆ, ನೀವು ಪಪ್ಪಾಯಿ ಎಲೆಗಳ ರಸವನ್ನು ಕುಡಿಯಬಹುದು.





Read More