PHOTOS

ಒಂದೇ ನಕ್ಷತ್ರದಲ್ಲಿ ಸೂರ್ಯ ಮತ್ತು ಶುಕ್ರನ ಸಂಚಾರ; ಈ 4 ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!

Sun Nakshatra Transit 2024: ಈ ನಕ್ಷತ್ರದ ಅಧಿಪತಿಯಾದ ಶುಕ್ರ ಗ್ರಹವು ಇದೇ ನಕ್ಷತ್ರದಲ್ಲಿರುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ...

Advertisement
1/5
ಯಾವ ರಾಶಿಗಳು ಅದೃಷ್ಟಶಾಲಿ?
ಯಾವ ರಾಶಿಗಳು ಅದೃಷ್ಟಶಾಲಿ?

ಸೂರ್ಯ ಪೂರ್ವ ಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸಿದಾಗ ಕೆಲವು ಸ್ಥಳೀಯರು ವೃತ್ತಿ & ವೈಯಕ್ತಿಕ ಜೀವನದಲ್ಲಿ ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆಯಿದೆ. ಹಾಗಾದ್ರೆ ಸೂರ್ಯನ ಈ ಸಂಕ್ರಮಣದಿಂದ ಯಾವ ರಾಶಿಯ ಜನರು ಅದೃಷ್ಟಶಾಲಿಯಾಗುತ್ತಾರೆ ಎಂಬುದನ್ನು ತಿಳಿಯಿರಿ.

2/5
ಮೇಷ ರಾಶಿ 
ಮೇಷ ರಾಶಿ 

ಮೇಷ ರಾಶಿಯವರು ಸೂರ್ಯನ ನಕ್ಷತ್ರ ಸಂಕ್ರಮಣದಿಂದ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಐಷಾರಾಮಿ ಮತ್ತು ಸಂತೋಷ ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ಉದ್ಯೋಗಾವಕಾಶ ಪಡೆಯುವ ಸಾಧ್ಯತೆಯಿದೆ. ನೀವು ಹೊಸ ಕೆಲಸದ ಜವಾಬ್ದಾರಿ ಪಡೆಯಬಹುದು. ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಅಂದುಕೊಂಡ ಉದ್ಯೋಗಾವಕಾಶ ಸಿಗುತ್ತವೆ. ಈ ಸಂಕ್ರಮಣದಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಈ ಅವಧಿಯಲ್ಲಿ ಪ್ರಗತಿ ಸಾಧಿಸುತ್ತಾರೆ. ವ್ಯವಹಾರ ಮಾಡುವವರು ತಮ್ಮ ವ್ಯಾಪಾರ ವಿಸ್ತರಿಸಲು ಪ್ಲ್ಯಾನ್‌ ಮಾಡಬಹುದು. ನಿಮ್ಮ ಕುಟುಂಬದ ಸಮಸ್ಯೆಗಳು ಇದೀಗ ಕೊನೆಗೊಳ್ಳತ್ತವೆ. ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ.

3/5
ಸಿಂಹ ರಾಶಿ 
ಸಿಂಹ ರಾಶಿ 

ಸೂರ್ಯನು ಪೂರ್ವ ಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ಸಿಂಹ ರಾಶಿಯವರಿಗೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯದಲ್ಲಿ ಅವರ ಜೀವನವು ಉತ್ಸಾಹ ಮತ್ತು ಶಕ್ತಿಯಿಂದ ಕೂಡಿರುತ್ತದೆ. ನೀವು ಸಮಾಜದಲ್ಲಿ ಗೌರವ ಮತ್ತು ಖ್ಯಾತಿಯನ್ನು ಗಳಿಸುತ್ತೀರಿ. ನಿಮ್ಮ ಜೀವನಶೈಲಿಯಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ನಿಮ್ಮ ಮಾತನಾಡುವ ಕೌಶಲ್ಯ ಬಹಳಷ್ಟು ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳು ದೊರೆಯಲಿವೆ. ವ್ಯಾಪಾರದಲ್ಲಿ ಯಶಸ್ಸಿನ ಸಾಧ್ಯತೆ ಹೆಚ್ಚಾಗಿರುತ್ತವೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭ ಗಳಿಸಲು ಅವಕಾಶ ಪಡೆಯುತ್ತೀರಿ. ಹೊಸ ವ್ಯವಹಾರ ಪ್ರಾರಂಭಿಸಲು ಇದು ಸರಿಯಾದ ಸಮಯ. ನೀವು ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತೀರಿ.

4/5
ಕನ್ಯಾ ರಾಶಿ 
ಕನ್ಯಾ ರಾಶಿ 

ಸೂರ್ಯ ಗ್ರಹವು ಪೂರ್ವ ಫಾಲ್ಗುಣಿ ನಕ್ಷತ್ರದಲ್ಲಿ ಸಂಚರಿಸುವುದರಿಂದ ಕನ್ಯಾ ರಾಶಿಯವರ ಜೀವನ ಸುಖಮಯವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಕೆಲಸದಲ್ಲಿ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಮೆಚ್ಚುಗೆ ನಿರೀಕ್ಷಿಸಬಹುದು. ಕನ್ಯಾ ರಾಶಿಯ ಸ್ಥಳೀಯರು ಪ್ರಭಾವಿ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ಇದು ನಿಮ್ಮ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಲಿದೆ. ನಿಮ್ಮ ನೆಚ್ಚಿನ ವಾಹನ ಅಥವಾ ಆಸ್ತಿ ಖರೀದಿಸುವ ಅವಕಾಶ ಪಡೆಯುತ್ತೀರಿ. ಶೀಘ್ರವೇ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗಲಿವೆ. 

5/5
ತುಲಾ ರಾಶಿ 
ತುಲಾ ರಾಶಿ 

ಸೂರ್ಯ ಗ್ರಹವು ಪೂರ್ವ ಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸುವುದರಿಂದ ತುಲಾ ರಾಶಿಗೆ ಅಪಾರ ಲಾಭವಾಗುತ್ತದೆ. ಆಧ್ಯಾತ್ಮದಲ್ಲಿ ನಿಮಗೆ ಆಸಕ್ತಿ ಹೆಚ್ಚುತ್ತದೆ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನೀವು ಭಾಗವಹಿಸಬಹುದು. ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ. ಈ ಅವಧಿಯಲ್ಲಿ ಉತ್ತಮ ಖ್ಯಾತಿ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತೀರಿ. ನೀವು ಹಣ ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಸಂಪೂರ್ಣ ಪ್ರಾಬಲ್ಯ ಹೊಂದಿರುತ್ತೀರಿ. ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಮತ್ತಷ್ಟು ಉತ್ತಮವಾಗಿರುತ್ತದೆ. 





Read More