PHOTOS

White Hair Remedy: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ತುಂಬಾ ಲಾಭದಾಯಕ ಈ 4 ಪದಾರ್ಥ

White Hair Remedy: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳ...

Advertisement
1/5
ಬಿಳಿ ಕೂದಲಿಗೆ ಪರಿಹಾರ
ಬಿಳಿ ಕೂದಲಿಗೆ ಪರಿಹಾರ

ಬದಲಾದ ಜೀವನಶೈಲಿಯಲ್ಲಿ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ನಮ್ಮಲ್ಲಿ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಆಗಿದೆ. ಆದರೆ, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವೇ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಈ ಸಮಸ್ಯೆಗೆ ಶಾಶ್ವತವಾಗಿ ಗುಡ್ ಬೈ ಹೇಳಬಹುದು. 

2/5
ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದು
ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದು

ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಿದ ತೈಲವನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಕೂದಲಿಗೆ ಹಚ್ಚುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕೆಲವೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

3/5
ನೈಸರ್ಗಿಕ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳು
ನೈಸರ್ಗಿಕ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳು

ಈ ನೈಸರ್ಗಿಕ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ...  ಒಂದೆರಡು ಬೇ ಎಲೆಗಳು, ಒಂದು ಚಮಚ ಲವಂಗ, ಒಂದು ಚಮಚ ಕಾಫಿ ಪುಡಿ ಹಾಗೂ ಎರಡು ವಿಟಮಿನ್ ಇ ಕ್ಯಾಪ್ಸುಲ್ಸ್ 

4/5
ಮನೆಯಲ್ಲಿಯೇ ನೈಸರ್ಗಿಕ ಹೇರ್ ಡೈ ತಯಾರಿಸುವ ವಿಧಾನ
ಮನೆಯಲ್ಲಿಯೇ ನೈಸರ್ಗಿಕ ಹೇರ್ ಡೈ ತಯಾರಿಸುವ ವಿಧಾನ

ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಳ್ಳಿ, ಎರಡು ಬೇ ಎಲೆಗಳನ್ನು ತೆಗೆದುಕೊಂಡು ಅದನ್ನು ಪುಡಿ ಪುಡಿ ಮಾಡಿ ಅದರಲ್ಲಿ ಹಾಕಿ. ಬಳಿಕ, ಒಂದು ಚಮಚ ಲವಂಗ, ಒಂದು ಚಮಚ ಕಾಫಿ ಪುಡಿಯನ್ನು ಒಂದು ಲೋಟ ನೀರಿನೊಂದಿಗೆ ಬೆರೆಸಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ಈ ಮಿಶ್ರಣ ತಣ್ಣಗಾದ ಬಳಿಕ ಇದನ್ನು ಒಂದು ಸಣ್ಣ ಗಾಜಿನ ಡಬ್ಬಿಯಲ್ಲಿ ಸೋಸಿ, ಇದರಲ್ಲಿ ಎರಡು ವಿಟಮಿನ್ ಇ ಕ್ಯಾಪ್ಸುಲ್ಸ್ ಹಾಕಿ ಮಿಶ್ರಣ ಮಾಡಿ. 

5/5
ನೈಸರ್ಗಿಕ ಹೇರ್ ಡೈ ಬಳಸುವ ವಿಧಾನ
ನೈಸರ್ಗಿಕ ಹೇರ್ ಡೈ ಬಳಸುವ ವಿಧಾನ

ನೀವು ಹೇರ್ ವಾಶ್ ಮಾಡಿ ಕೂದಲನ್ನು ಒಣಗಿಸಿದ ನಂತರ ಈ ತೈಲವನ್ನು ಕೂದಲಿನ ಬುಡದಿಂದ ಹಚ್ಚಿ. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿರೀಕ್ಷಿತ ಫಲವನ್ನು ಕಾಣಬಹುದು. ಈ ತೈಲವು ಶಾಶ್ವತವಾಗಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ತುಂಬಾ ಪ್ರಯೋಯಜನಕಾರಿ ಎಂದು ಸಾಬೀತು ಪಡಿಸಲಿದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More