PHOTOS

ಈ ರಾಶಿಯವರು ಪಟ್ಟ ಪಾಡುಗಳೆಲ್ಲಾ ಕೊನೆ ! ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆ

ರಾಹುವಿನ ಈ ಸ್ಥಾನ ಬದಲಾವಣೆಯಿಂದ ಮೂರು ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪ್ರಗತಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ.

...
Advertisement
1/4
ರಾಹು ಗೋಚರ 2023
ರಾಹು ಗೋಚರ 2023

ರಾಹು ಗ್ರಹವು ಈಗ 30 ಅಕ್ಟೋಬರ್ 2023 ರಂದು ಮೀನ ರಾಶಿಯನ್ನು ಪ್ರವೇಶಿಸಲಿದೆ. ರಾಹುವಿನ ಈ ಸ್ಥಾನ ಬದಲಾವಣೆಯಿಂದ ಮೂರು ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪ್ರಗತಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ. ಹಾಗಿದ್ದರೆ ಆ ಅದೃಷ್ಟ ರಾಶಿಗಳು ಯಾವುವು  ನೋಡೋಣ. 

2/4
ತುಲಾ ರಾಶಿ
ತುಲಾ ರಾಶಿ

ನಿಮ್ಮ ರಾಶಿಯ ಆರನೇ ಭಾಗದಲ್ಲಿ ರಾಹುವಿನ ಸಂಕ್ರಮಣ ನಡೆಯಲಿದೆ. ರಾಹುವಿನ ಈ ಸಂಕ್ರಮಣ ತುಂಬಾ ಪ್ರಯೋಜನಕಾರಿ ಸಾಬೀತಾಗಲಿದೆ.  ಹಠಾತ್ ಆಗಿ ಕೈ ಸೇರುವ ಹಣದಿಂದ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.  ನಿಮ್ಮ ಎದುರಾಳಿಗಳನ್ನು ಗೆಲ್ಲುವುದು ಸಾಧ್ಯವಾಗುತ್ತದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥವಾಗಬಹುದು. ಉದ್ಯೋಗಿಗಳಿಗೆ ಇನ್‌ಕ್ರಿಮೆಂಟ್ ಜೊತೆಗೆ ಬಡ್ತಿ ಕೂಡಾ ಸಿಗುವುದು.   

3/4
ಕಟಕ ರಾಶಿ
ಕಟಕ ರಾಶಿ

ರಾಹು ಸಂಚಾರದಿಂದ ಈ ರಾಶಿಯವರ ಅದೃಷ್ಟವೇ ಬದಲಾಗುವುದು. ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ವಿದೇಶಕ್ಕೆ ಹೋಗುವ ಆಲೋಚನೆ ಇದ್ದರೆ ನಿಮ್ಮ ಆಸೆ ಈಗ ಈಡೇರುವುದು. ವಾಹನ ಅಥವಾ ಆಸ್ತಿ ಖರೀದಿಸುವ ಯೋಗವಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ವೆಚ್ಚಗಳು ಸ್ಥಿರವಾಗಿರುತ್ತವೆ. 

4/4
ವೃಷಭ ರಾಶಿ
ವೃಷಭ ರಾಶಿ

ರಾಹು ಗ್ರಹದ ಸಂಚಾರದೊಂದಿಗೆ ಹಣದ ಹರಿವು ಕೂಡಾ ಹೆಚ್ಚಾಗುವುದು.  ರಾಹುವಿನ ಸ್ಥಾನ ಬದಲಾವಣೆಯೊಂದಿಗೆ, ಲಾಟರಿ ಅಥವಾ ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More