PHOTOS

Century in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳು

Century in 100th test match: ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಆಟಗಾರ ಇಂಗ್ಲೆಂಡ್‌ನ ಕಾಲಿನ್‌ ಕೌಡ್ರೆ....

Advertisement
1/6
ಕಾಲಿನ್‌ ಕೌಡ್ರೆ
ಕಾಲಿನ್‌ ಕೌಡ್ರೆ

ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಆಟಗಾರ ಇಂಗ್ಲೆಂಡ್‌ನ ಕಾಲಿನ್‌ ಕೌಡ್ರೆ. ಈತ 1968ರಲ್ಲಿ ಈ ವಿಶೇಷ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ. ಆಸ್ಟ್ರೇಲಿಯಾ ವಿರುದ್ಧದ ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಕಾಲಿನ್‌ 104 ರನ್‌ ಗಳಿಸಿ ಶತಕ ಸಿಡಿಸಿ ಮಿಂಚಿದ್ದರು.

2/6
ಜಾವೇದ್‌ ಮಿಯಾಂದಾದ್‌
ಜಾವೇದ್‌ ಮಿಯಾಂದಾದ್‌

1989ರಲ್ಲಿ ಪಾಕಿಸ್ತಾನದ ದಂತಕಥೆ, ಸ್ಟಾರ್‌ ಬ್ಯಾಟ್ಸ್‌ಮನ್‌ ಖ್ಯಾತಿಯ ಜಾವೇದ್‌ ಮಿಯಾಂದಾದ್‌ ಭಾರತದ ವಿರುದ್ಧ ತಮ್ಮ 100ನೇ ಟೆಸ್ಟ್‌ ಪಂದ್ಯ ಆಡುವಾಗ ಈ ವಿಶೇಷ ಸಾಧನೆ ಮಾಡಿದ್ದರು. ಅಂದು ಮಿಯಾಂದಾದ್‌ ಭಾರತದ ವಿರುದ್ಧ 145 ರನ್‌ ಗಳಿಸಿ ಈ ಸಾಧನೆ ಮಾಡಿದ್ದರು. 

3/6
ಗಾರ್ಡನ್‌ ಗ್ರೀನಿಡ್ಜ್‌
ಗಾರ್ಡನ್‌ ಗ್ರೀನಿಡ್ಜ್‌

1990ರಲ್ಲಿ ವೆಸ್ಟ್‌ ಇಂಡೀಸ್‌ನ ಗಾರ್ಡನ್‌ ಗ್ರೀನಿಡ್ಜ್‌ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಅವರು 149 ರನ್‌ ಗಳಿಸಿ ಅದ್ಭುತ ಇನ್ನಿಂಗ್ಸ್‌ ಆಡಿದ್ದರು. 

4/6
ಅಲೆಕ್‌ ಸ್ಟೀವರ್ಟ್‌
ಅಲೆಕ್‌ ಸ್ಟೀವರ್ಟ್‌

ಇಂಗ್ಲೆಂಡ್‌ನ ಅಲೆಕ್‌ ಸ್ಟೀವರ್ಟ್‌ ಅವರು 2000ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಅವರು 105 ರನ್‌ ಗಳಿಸಿ ಶತಕ ಸಿಡಿಸಿದ್ದರು.

5/6
ಇಂಜಮಾಮ್‌ ಉಲ್‌ ಹಕ್‌
ಇಂಜಮಾಮ್‌ ಉಲ್‌ ಹಕ್‌

ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಪಾಕ್‌ ತಂಡದ ಮಾಜಿ ಕ್ಯಾಪ್ಟನ್‌ ಇಂಜಮಾಮ್‌ ಉಲ್‌ ಹಕ್‌ 5ನೇ ಸ್ಥಾನದಲ್ಲಿದ್ದಾರೆ. 2005ರಲ್ಲಿ ಭಾರತದ ವಿರುದ್ಧ ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಅವರು 184 ರನ್‌ಗಳ ಅಮೋಘ ಶತಕ ಸಿಡಿಸಿದ್ದರು.

6/6
ಜೋ ರೂಟ್‌
ಜೋ ರೂಟ್‌

ಹಾಲಿ ಇಂಗ್ಲೆಂಡ್‌ ಕ್ರಿಕೆಟಿಗ ಜೋರೂಟ್‌ ಕೂಡ ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಮುಕ್ತಾಯಗೊಂಡ ಶ್ರೀಲಂಕಾದ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ರೂಟ್‌ 143 ರನ್‌ ಗಳಿಸುವ ಮೂಲಕ ಈ ಸಾಧನೆ ಮಾಡಿದರು. 





Read More