PHOTOS

ಡಿಎ ಹೆಚ್ಚಳ, ವೇತನದಲ್ಲಿನ ಕ್ರಮಬದ್ದ ಏರಿಕೆ ಕುರಿತು ಕೇಂದ್ರ ಸರ್ಕಾರದ ಅಧಿಸೂಚನೆ ! ಎಷ್ಟಾಗಿದೆ ನಿಮ್ಮ ವೇತನದಲ್ಲಿನ ಹೆಚ್ಚಳ

ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಳ ಕುರಿತು ಕೆಲವೇ ದ...

Advertisement
1/8
ತುಟ್ಟಿಭತ್ಯೆ
ತುಟ್ಟಿಭತ್ಯೆ

ದಿನದಿಂದ ದಿನಕ್ಕೆ ಆಗುತ್ತಿರುವ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಭಾಯಿಸಲು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ. ಇದನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.   

2/8
ತುಟ್ಟಿಭತ್ಯೆ ಹೆಚ್ಚಳ
ತುಟ್ಟಿಭತ್ಯೆ ಹೆಚ್ಚಳ

ತುಟ್ಟಿಭತ್ಯೆ ಹೆಚ್ಚಳ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಇನ್ನು ಕೆಲವೇ ದಿನಗಳಲ್ಲಿ ಅವರ ಕಾಯುವಿಕೆಗೆ ಉತ್ತರ ಸಿಗಲಿದೆ ಎನ್ನಲಾಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಬಹುದು. 

3/8
ಹುಸಿಯಾದ ನಿರೀಕ್ಷೆ
ಹುಸಿಯಾದ ನಿರೀಕ್ಷೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ  8ನೇ ವೇತನ ಆಯೋಗ, 18 ತಿಂಗಳ ಡಿಎ ಬಾಕಿ,ಹಳೆ ಪಿಂಚಣಿ ಯೋಜನೆ ಬಗ್ಗೆ ಸಿಹಿ ಸುದ್ದಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ. 

4/8
ಹೊರಬೀಳಲಿದೆ ಅಧಿಸೂಚನೆ
ಹೊರಬೀಳಲಿದೆ ಅಧಿಸೂಚನೆ

ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು  ಹೆಚ್ಚಳದ ಕುರಿತು ಅಧಿಸೂಚನೆ ಹೊರಬೀಳಲಿದೆ. ಇದರಿಂದ ಅವರಿಗೆ ಅಲ್ಪ ಪರಿಹಾರ ದೊರೆಯುವ ನಿರೀಕ್ಷೆ ಇದೆ.

5/8
AICPI ಸೂಚ್ಯಂಕ
AICPI ಸೂಚ್ಯಂಕ

 ಡಿಎ ಮತ್ತು ಡಿ ಆರ್ ಅನ್ನು ಕಾರ್ಮಿಕ ಸಚಿವಾಲಯ ಪ್ರಕಟಿಸಿದ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.ಜನವರಿಯ ಡಿಎ ಮತ್ತು ಡಿಆರ್ ಅನ್ನು ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗೆ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅದೇ ರೀತಿ, ಜುಲೈ ತಿಂಗಳಿಗೆ DA ಮತ್ತು DR ಅನ್ನು ಜನವರಿಯಿಂದ ಜೂನ್‌ವರೆಗೆ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.   

6/8
ಯಾವಾಗ ಘೋಷಣೆ
ಯಾವಾಗ ಘೋಷಣೆ

ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕ್ರಮವಾಗಿ 50%  ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.ಜನವರಿ 2024ರಲ್ಲಿ, ತುಟ್ಟಿಭತ್ಯೆಯನ್ನು 4% ಹೆಚ್ಚಿಸಲಾಗಿದೆ. ಜುಲೈ 2024 ರ ಡಿಎ ಹೆಚ್ಚಳವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ

7/8
ಭಾರೀ ಹೆಚ್ಚಳ
ಭಾರೀ ಹೆಚ್ಚಳ

ಇಲ್ಲಿಯವರೆಗೆ ಲಭ್ಯವಿರುವ ಎಐಬಿಸಿಪಿಐ ದತ್ತಾಂಶದ ಆಧಾರದ ಮೇಲೆ, ಜುಲೈ 2024 ರ ವೇಳೆಗೆ ಹಣದುಬ್ಬರವು ಶೇಕಡಾ 4 ಅಥವಾ 5 ರಷ್ಟು ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ಡಿಎ 4% ರಷ್ಟು ಹೆಚ್ಚಾದರೆ, ಒಟ್ಟು ತುಟ್ಟಿಭತ್ಯೆ 55% ಕ್ಕೆ ಹೆಚ್ಚಾಗುತ್ತದೆ. ಇದರಿಂದ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. 

8/8
ಸೂಚನೆ :
 ಸೂಚನೆ :

ಸೂಚನೆ :ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ.ಇದರಿಂದ ತುಟ್ಟಿಭತ್ಯೆ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.





Read More