PHOTOS

ಟೀಂ ಇಂಡಿಯಾಗೆ ಕೊಹ್ಲಿ ಸೆಲೆಕ್ಟ್ ಆಗಲು ಕಾರಣ ಈ ಇಬ್ಬರು ಸ್ಟಾರ್ ಕ್ರಿಕೆಟಿಗರು! ಅಂದು ಕೊಹ್ಲಿ ಹೆಸರು ಸೂಚಿಸಿದ ಆ ಶಕ್ತಿ ಯಾರು ಗೊತ್ತಾ?

Virat Kohli IPL 2024: ವಿರಾಟ್ ಕೊಹ್ಲಿ ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆಟಗಾರ. ವಿಶ್ವದ ಅಗ್ರ...

Advertisement
1/6
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆಟಗಾರ. ವಿಶ್ವದ ಅಗ್ರ ಆಟಗಾರರ ಪಟ್ಟಿಯಲ್ಲಿ ಇವರೂ ಕೂಡ ಒಬ್ಬರು. ಇತ್ತೀಚೆಗಷ್ಟೇ ಕೊಹ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

2/6
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಆರಂಭದಲ್ಲಿ ಟೀಂ ಇಂಡಿಯಾಗೆ ಎಂಟ್ರಿ ಪಡೆಯಲು ಕಾರಣ ಸುರೇಶ್ ರೈನಾ ಅಂತೆ. ಇವರೇ ತಮ್ಮ ಹೆಸರನ್ನು ಸಮಿತಿ ಮುಂದಿಟ್ಟಿದ್ದು ಎಂದು ಕೊಹ್ಲಿ ಹೇಳಿದ್ದಾರೆ.

3/6
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಟೀಂ ಇಂಡಿಯಾಗೆ ಆರಂಭಿಕರಾಗಿ ಕೊಹ್ಲಿ ಹೊಂದಿಕೊಳ್ಳಲಿಲ್ಲ. ಆದರೆ ರೈನಾ ಕಾರಣ ಅವರಿಗೆ ಅವಕಾಶ ಸಿಕ್ಕಿತು. ಜೊತೆಗೆ ಮಾಜಿ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಅವರು ಸಹ ನನ್ನ ಯಶಸ್ಸಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ.

4/6
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಈ ಬಗ್ಗೆ ಮಾತನಾಡಿದ ಕೊಹ್ಲಿ, "2008 ರಲ್ಲಿ ನಾವು ಆಸ್ಟ್ರೇಲಿಯಾದಲ್ಲಿ ಎಮರ್ಜಿಂಗ್ ಕಪ್ ಆಡುತ್ತಿದ್ದೆವು. ಆ ಸಮಯ ನನಗೆ ಇನ್ನೂ ನೆನಪಿದೆ, ಸುರೇಶ್ ರೈನಾ ನನ್ನ ಬಗ್ಗೆ ಕೇಳಿರಬೇಕು. ಪಂದ್ಯಾವಳಿಯ ಮಧ್ಯದಲ್ಲಿ ಬಂದರು. ಮೊದಲು ಬದರಿನಾಥ್ ನಾಯಕರಾಗಿದ್ದರು ಮತ್ತು ಇದಾದ ನಂತರ ರೈನಾ ನಾಯಕತ್ವವನ್ನು ಪಡೆದರು. ಪ್ರವೀಣ್ ಆಮ್ರೆ ನಮ್ಮ ಕೋಚ್ ಆಗಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಬೆಂಚ್ ಮೇಲೆ ಕೂರಿಸಲಾಯಿತು. ಏಕೆಂದರೆ ಮೊದಲ ಎರಡು-ಮೂರು ಪಂದ್ಯಗಳಲ್ಲಿ ನಾನು ಪ್ರದರ್ಶನ ನೀಡಲಿಲ್ಲ. ಆದರೆ ರೈನಾ ಮತ್ತು ಅಂದು ಮುಖ್ಯ ಆಯ್ಕೆಗಾರರಾಗಿದ್ದ ದಿಲೀಪ್ ವೆಂಗ್ಸಾಕರ್ ಸರ್ ನನಗೆ ಮತ್ತೆ ಅವಕಾಶ ನೀಡಿದರು” ಎಂದಿದ್ದಾರೆ.

5/6
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಎಮರ್ಜಿಂಗ್‌’ಗಾಗಿ ಕೊಹ್ಲಿ 120 ರನ್‌’ಗಳ ಪ್ರಬಲ ಇನ್ನಿಂಗ್ಸ್ ಆಡಿದ್ದಲ್ಲದೆ, ಈ ಪಂದ್ಯದಲ್ಲಿ ಅಜೇಯರಾಗಿ ಮರಳಿದರು. ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ನ್ಯೂಜಿಲೆಂಡ್ ಎಮರ್ಜಿಂಗ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದು ಸ್ವತಃ ತಮ್ಮನ್ನು ಸಾಬೀತುಪಡಿಸಿದರು.

6/6
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಇಂದು ಐಪಿಎಲ್ ತಂಡ ಆರ್‌ ಸಿ ಬಿ ಸಿಎಸ್‌’ಕೆಯನ್ನು ಎದುರಿಸಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಸಿಎಸ್‌ಕೆ ಗೆದ್ದರೆ ಪ್ಲೇಆಫ್‌ ಹಂತ ತಲುಪಲಿದೆ. ಆದರೆ RCB ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ.





Read More