PHOTOS

ಈ ಅಭ್ಯಾಸಗಳು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು, ಎಚ್ಚರ!

ನಿಮಗೂ ಈ ಅಭ್ಯಾಸಗಳಿದ್ದರೆ ಮೂಳೆಗಳ ಆರೋಗ್ಯಕ್ಕಾಗಿ ಇಂದಿನಿಂದಲೇ ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳಿ.

...
Advertisement
1/5
ಅತಿಯಾದ ಸಿಹಿ ಸೇವನೆ
ಅತಿಯಾದ ಸಿಹಿ ಸೇವನೆ

ಸಿಹಿ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಆದರೆ, ಅತಿಯಾದ ಸಿಹಿ ಸೇವನೆಯಿಂದ ಮಧುಮೇಹದ ಅಪಾಯ ಮಾತ್ರವಲ್ಲ, ಇದು ಮೂಳೆಗಳನ್ನು ಕೂಡ ದುರ್ಬಲಗೊಳಿಸುತ್ತದೆ.

2/5
ಕೂಲ್ ಡ್ರಿಂಕ್ಸ್
ಕೂಲ್ ಡ್ರಿಂಕ್ಸ್

ಕೆಲವರಿಗೆ ಪಂಚಪ್ರಾಣವಾಗಿರುವ ಕೂಲ್ ಡ್ರಿಂಕ್ಸ್/ತಂಪು ಪಾನೀಯ ಕೂಡ ನಿಮ್ಮ ಮೂಳೆಗಳನ್ನು ಹಾನಿಗೊಳಿಸಬಹುದು.

3/5
ಉಪ್ಪು
ಉಪ್ಪು

ಉಪ್ಪಿಲ್ಲದ ಊಟ ರುಚಿ ಎಂದೆನಿಸುವುದಿಲ್ಲ. ಆದರೆ, ಇದರಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ಅತಿಯಾದ ಉಪ್ಪಿನ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸುವುದು ಮಾತ್ರವಲ್ಲ, ಮೂಳೆಗಳನ್ನೂ ಕೂಡ ದುರ್ಬಲಗೊಳಿಸುತ್ತದೆ.

4/5
ಗಂಟೆಗಟ್ಟಲೆ ಕುಳಿತೇ ಇರುವುದು
ಗಂಟೆಗಟ್ಟಲೆ ಕುಳಿತೇ ಇರುವುದು

ಕೆಲವರು ಅದು ವರ್ಕ್ ಫ್ರಮ್ ಹೋಂ ಇರಲಿ ಅಥವಾ ಕಚೇರಿಯಲ್ಲಿ ಕೆಲಸ ಮಾಡುತ್ತಿರಲಿ ಅವರು ಗಂಟೆಗಟ್ಟಲೆ ಏಳುವುದೇ ಇಲ್ಲ. ಆದರೆ, ಇದು ನಿಮ್ಮ ಮೂಳೆಗಳನ್ನು ಹಾನಿಗೊಳಿಸುತ್ತದೆ. ವಾಸ್ತವವಾಗಿ, ಮೂಳೆಗಳು ಆರೋಗ್ಯವಾಗಿರಲು ಚಲನೆ ಅತ್ಯಾವಶ್ಯಕ. ಹಾಗಾಗಿ, ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.

5/5
ಬಿಸಿಲಿಗೆ ಮೈ ಒಡ್ಡದೆ ಇರುವುದು
ಬಿಸಿಲಿಗೆ ಮೈ ಒಡ್ಡದೆ ಇರುವುದು

ಕೆಲವರು ಬಿಸಿಲಿಗೆ ಬರುವುದೇ ಇಲ್ಲ. ಇಲ್ಲವೇ ಸದಾ ಎಸಿ ಕೋಣೆಯಲ್ಲಿ ಕಾಲ ಕಳೆಯುತ್ತಾರೆ. ಇದು ನಿಮ್ಮ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ವಿಟಮಿನ್ ಡಿ ಕೊರತೆಗೂ ಇದು ಕಾರಣವಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More