PHOTOS

Blockbuster Movies 2022: 2022ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಟಾಪ್ ಸಿನಿಮಾಗಳಿವು

Blockbuster Movies 2022: ಕಳೆದ ವರ್ಷ ಬಾಲಿವುಡ್‌ ನಲ್ಲಿ ಸದ್ದು ಮಾಡಿರುವ ಸಿನಿಮಾಗಳು ಭಾರೀ ಕಡಿಮೆ ಸಂಖ್ಯೆಯಲ್ಲಿತ್ತು. ಗಲ್ಲಾ ಪೆಟ್ಟಿಗೆಯ...

Advertisement
1/6
ದಿ ಕಾಶ್ಮೀರ್ ಫೈಲ್ಸ್
ದಿ ಕಾಶ್ಮೀರ್ ಫೈಲ್ಸ್

ಈ ಪಟ್ಟಿಯಲ್ಲಿ ಮೊದಲ ಹೆಸರು 'ದಿ ಕಾಶ್ಮೀರ್ ಫೈಲ್ಸ್'. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ಅನುಪಮ್ ಖೇರ್ ಸೇರಿದಂತೆ ಅನೇಕ ಖ್ಯಾತ ನಟರು ನಟಿಸಿದ್ದಾರೆ. 20 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿ ಸುಮಾರು 344.2 ಕೋಟಿ ರೂ. ಗಳಿಸಿತ್ತು. ದೇಶದಲ್ಲಿ 248.2 ಕೋಟಿ ರೂ. ಬಾಚಿದೆ.

2/6
ಆರ್ ಆರ್ ಆರ್
ಆರ್ ಆರ್ ಆರ್

ಎಸ್ ಎಸ್ ರಾಜಮೌಳಿ ಅವರ 'ಆರ್ ಆರ್ ಆರ್' ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಜೂನಿಯರ್ ಎನ್ ಟಿಆರ್ ರಾಮರಾವ್ ಮತ್ತು ರಾಮ್ ಚರಣ್ ತೇಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 425 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ವಿಶ್ವದಾದ್ಯಂತ ಗಳಿಕೆ 1131 ಕೋಟಿ ರೂ. ಆಗಿತ್ತು. ದೇಶದಲ್ಲಿ 784 ಕೋಟಿ ರೂ. ಗಳಿಸಿದೆ.

3/6
ಕೆಜಿಎಫ್ 2
 ಕೆಜಿಎಫ್ 2

ಕೆಜಿಎಫ್ ಅಧ್ಯಾಯ 2 ಕೂಡ ವರ್ಷದ ಅತಿ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ. ಈ ಚಿತ್ರದ ಬಜೆಟ್ ರೂ 150 ಕೋಟಿಗಳು. ಆದರೆ ಇದರ ವಿಶ್ವಾದ್ಯಂತ ಗಳಿಕೆ ರೂ 1,228 ಕೋಟಿಗಳು. ದೇಶೀಯ ನಿವ್ವಳ ರೂ 872 ಕೋಟಿ.

4/6
ಭೂಲ್ ಭುಲೈಯಾ 2
ಭೂಲ್ ಭುಲೈಯಾ 2

ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ 'ಭೂಲ್ ಭುಲೈಯಾ 2' ಕೇವಲ 75 ಕೋಟಿ ರೂಪಾಯಿಗಳ ಬಜೆಟ್ ಹೊಂದಿತ್ತು. ಆದರೆ ವಿಶ್ವಾದ್ಯಂತ ಇದರ ಒಟ್ಟು ಗಳಿಕೆ 264 ಕೋಟಿ ರೂ. ಮತ್ತು ದೇಶೀಯ ನಿವ್ವಳ ಸುಮಾರು 182.5 ಕೋಟಿ ರೂ. ಆಗಿದೆ.

5/6
ಬ್ರಹ್ಮಾಸ್ತ್ರ
ಬ್ರಹ್ಮಾಸ್ತ್ರ

ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್, ಅಮಿತಾಬ್ ಬಚ್ಚನ್ ಮತ್ತು ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಜೆಟ್ 300 ಕೋಟಿಗೂ ಹೆಚ್ಚು. ವಿಶ್ವಾದ್ಯಂತ ಒಟ್ಟು 413 ಕೋಟಿ ಬಾಚಿದೆ. ದೇಶೀಯವಾಗಿ 255 ಕೋಟಿ ಗಳಿಸಿದೆ.

6/6
ಕಾಂತಾರ
ಕಾಂತಾರ

ಸದ್ಯ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಕೂಡ ಈಗಲೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾದಲ್ಲಿ ಬಹುತಾರಾಗಣವಿದ್ದು, ಕೇವಲ 16 ಕೋಟಿ ಬಜೆಟ್ ನಲ್ಲಿ ತೆರೆಗೆ ಅಪ್ಪಳಿಸಿದ ಸಿನಿಮಾ ವಿಶ್ವದಾದ್ಯಂತ ಇಂದು 400 ಕೋಟಿಗೂ ಹೆಚ್ಚು ಹಣ ಗಳಿಸಿದೆ.





Read More