PHOTOS

ʻಜೋಗಿʼ ಸಿನಿಮಾದಲ್ಲಿ ಶಿವಣ್ಣ ಅವರನ್ನು ಪೀಡಿಸಿದ್ದ ಈ ನಟಿ ನಿಮಗೆ ನೆನಪಿದ್ದಾರಾ..?

ಸಿಕೊಳ್ಳಬೇಕು ಅಂದ್ರೆ ಅದೆಷ್ಟು ಕಷ್ಟ ಅಲ್ವಾ..?  ಸ್ನೇಹಿತರೆ, ನಿಮಗೆ ಗೊತ್ತಿರುವ ಹಾಗೆ ನಟಿಯರು ಸಿನಿಮಾದಲ್ಲಿ ನಟಿಸೋಕೆ ಅಂತ ವರ್ಷಗಟ್ಟಲೆ ತಪಸ್ಸು  ಮ...

Advertisement
1/5

ಒಂದು ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಅದೆಷ್ಟು ಕಷ್ಟ ಅಲ್ವಾ..?  ಸ್ನೇಹಿತರೆ, ನಿಮಗೆ ಗೊತ್ತಿರುವ ಹಾಗೆ ನಟಿಯರು ಸಿನಿಮಾದಲ್ಲಿ ನಟಿಸೋಕೆ ಅಂತ ವರ್ಷಗಟ್ಟಲೆ ತಪಸ್ಸು  ಮಾಡುತ್ತಾರೆ, ಸಿನಿಮಾ ಚಾನ್ಸ್ ಗಾಗಿ ಕಾಯುವ ಸಾವಿರ  ಜನರಲ್ಲಿ ಕೇವಲ ಒಬ್ಬರಿಗೂ ಇಬ್ಬರಿಗೂ ಅಷ್ಟೇ ಚಾನ್ಸ್ ಸಿಗುತ್ತೆ ಹೀಗೆ ಚಾನ್ಸ್ ಸಿಕ್ಕವರಲ್ಲಿ ಕ್ಲಿಕ್ ಆಗೋದು ಕೂಡ ಬಹಳ ಕಡಿಮೆ ಜನ.  ಅದರಲ್ಲೂ ಸಿನಿಮಾಗೆ ಹೊಸದಾಗಿ ಬರುವ ನಟಿಯರು ತಾವು ಒಳ್ಳೆಯ ಹೆಸರು ಪಡಿಬೇಕಂದ್ರೆ ಅದೆಷ್ಟೋ ಸಿನಿಮಾಗಳನ್ನ ಮಾಡ್ತಾರೆ. ಆದರೂ ಕೂಡ ಇವರು ಕ್ಲಿಕ್ ಆಗೋದಿಲ್ಲ ಇನ್ನು  ಕೆಲವು ನಟಿಯರ ಲಕ್ ಹೇಗಿರುತ್ತೆ ಅಂದ್ರೆ ನಟಿಸಿದ ಮೊದಲ ಚಿತ್ರನೇ ಹಿಟ್ಟಾಗಿ ಬಿಡುತ್ತದೆ ಹಾಗೆ ಹಿಟ್ಟಾದ ನಟಿಯರ ಪಟ್ಟಿಯಲ್ಲಿ ಜನಿಫರ್ ಕೋತ್ವಾಲ್ ಕೂಡ ಒಬ್ಬರು.   

2/5

ಜೆನಿಫರ್ ಕೊತ್ವಾಲ್ ಈ ಹೆಸರು ನಿಮಗೆ ನೆನಪಿರಲೇಬೇಕು ಅಲ್ವಾ?  ಈ ಸುಂದರಿ ʻಜೋಗಿʼ ́ಸಿನಿಮಾದಲ್ಲಿ ಶಿವಣ್ಣ ಅವರಿಗೆ ನಾಯಕನಟಿಯಾಗಿ ಕಾಣಿಸಿಕೊಂಡಿದ್ದರು ಲಾಂಗ್ ಹಿಡಿದು ರೋಡ್‌ನಲ್ಲಿ ಅಲೆದಿದ್ದ ರೌಡಿಯ ಹಿಂದೆ ಬಿದ್ದು ಪ್ರೀತಿ ಮಾಡಿದ್ದರು, ಸಿನಿಮಾದಲ್ಲಿ ಈ ನಟಿಯ ನಟನೆ ಕಂಡು ಪ್ರೇಕ್ಷಕರು ಹುಚ್ಚೆದ್ದಿದ್ರು. ಈ ಚಿತ್ರ ಮಾಡಿದ ನಂತರ ಜನಿಫರ್ ಕೋತ್ವಾಲ್ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಅಷ್ಟಕ್ಕೂ ಜನಿಫರ್  ಮೂಲತಹ ಮುಂಬೈನವಳು  ನಟಿಸಿದ್ದು ಬೆರಳಣಿಕೆಯಷ್ಟು ಚಿತ್ರಗಳಾಗಿದ್ರು ಒಳ್ಳೆ ಹೆಸರು ಸಂಪಾದಿಸಿಕೊಂಡಿದ್ದರು ಆದ್ರೆ ಸಡನ್ನಾಗಿ ಒಂದು ದಿನ ಚಿತ್ರರಂಗದಿಂದ ಈಕೆ ಕಾಣೆಯಾಗಿಬಿಟ್ಟಿದ್ದರು ತಮ್ಮ ನೆಚ್ಚಿನ ನಟಿ  ಸಿನಿಮಾ ರಂಗದಿಂದ ದೂರ ಉಳಿದಿದ್ದು ಏಕೆ ಎನ್ನುವುದು ಇವತ್ತಿಗೂ ಜನಿಫರ್ ಕೋತ್ವಲ್ ಅವರ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ  

3/5

ಒಬ್ಬಳೇ ಮಗಳು ಚಿಕ್ಕವಯಸಿನಲ್ಲೇ ನಟನೆಯ ಮೇಲೆ ಅಪಾರ ಪ್ರೀತಿ ಈ ನಟನೆಯ ಮೇಲೆ ಪ್ರೀತಿಯಲ್ಲಿನ ಮೇಲೆ ನಟಿ ಜನಿಫರ್ ಮಾಡಲಿಂಗ್ ಕ್ಷೇತ್ರಕ್ಕೆ ಹೆಜ್ಜೆ ಇಡುತ್ತಾರೆ ಹಲವು ಬ್ರಾಂಡ್ಗಳಿಗೆ ಬ್ರಾಂಡ್  ಅಂಬಾಸಿಡರ್ ಆಗಿ ಕೆಲಸ ಕೂಡ ಮಾಡ್ತಾರೆ ಹೀಗೆ ಲ್ಯಾಕ್ಮಿಗೆ ಕೆಲಸ ಮಾಡುತ್ತಿದ್ದಾಗ ನಟಿ ಜನಿಫರ್ ಕೋತ್ವಲ್ ಅವರಿಗೆ ಜೋಗಿ ಸಿನಿಮಾದ ಅವಕಾಶ ಸಿಗುತ್ತೆ.  

4/5

ಶಿವಣ್ಣ ಅವರ ಜೊತೆ ನಟಿಸಿದ ಜೋಗಿ ಸಿನಿಮಾ ಏನೋ ಹಿಟ್ ಆಗುತ್ತೆ ಈ ಸಿನಿಮಾ ಹಿಟ್ ಆದ ನಂತರ ನಟಿಗೆ ಸಾಲು ಸಾಲು ಅವಕಾಶಗಳು ಕೂಡ ಸಿಗುತ್ತೆ ಆದರೆ ನಟಿಗೆ ಇದು ದೊಡ್ಡ ಟೆನ್ಶನ್ ಆಗಿ ಬಿಡುತ್ತೆ ಈ ಸಾಲು ಸಾಲು ಅವಕಾಶಗಳು  ನಟಿಗೆ ತಲೆ ನೋವಾಗಿ ಪರಿಣಮಿಸುತ್ತೆ.   

5/5

ಸಿನಿಮಾಗಳಷ್ಟೇ ಅಲ್ಲದೆ ಐಟಂ ಸಾಂಗ್ ಅಥವಾ ಯಾವುದೇ ಪಾತ್ರಗಳಲ್ಲೂ ನಟಿ ಅಭಿನಯಿಸಲು ಹಿಂಜರಿತರೆ.  ಹೀಗೆ ಸಿನಿಮಾದಿಂದ ಬೇಸತ್ತು ಬೆಂಗಳೂರು ತೊರೆದು ಮುಂಬೈಗೆ ಹಾರಿ ತಮ್ಮ ತಂದೆ ತಾಯಿಯ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾರೆ.  





Read More