PHOTOS

The Kapil Sharma Show: ‘ಕಪಿಲ್ ಶರ್ಮಾ ಶೋ’ವನ್ನು ತೊರೆದ 6 ಹಾಸ್ಯ ಕಲಾವಿದರು

‘ಕಪಿಲ್ ಶರ್ಮಾ ಶೋ’ನಲ್ಲಿ ಮಿಂಚಿದ್ದ ಕಲಾವಿದರು ಯಾವುದೋ ಕಾರಣದಿಂದ ಕಾರ್ಯಕ್ರಮಕ್ಕೆ ...

Advertisement
1/6
ಚಂದನ್ ಪ್ರಭಾಕರ್
ಚಂದನ್ ಪ್ರಭಾಕರ್

ಕಪಿಲ್ ಅವರ ಬಾಲ್ಯದ ಗೆಳೆಯ ಚಂದನ್ ಪ್ರಭಾಕರ್ ‘ದಿ ಕಪಿಲ್ ಶರ್ಮಾ ಶೋ’ನ ಹೊಸ ಸೀಸನ್ ಪ್ರೋಮೋದಲ್ಲಿ ಕಾಣಿಸಿಕೊಂಡರು. ಆದರೆ ವರದಿಗಳ ಪ್ರಕಾರ, ಚಂದನ್ ಕಾರ್ಯಕ್ರಮದಿಂದ ಸ್ವಲ್ಪ ಸಮಯ ದೂರ ಉಳಿದಿದ್ದಾರೆ. ಕೆಲವು ದಿನಗಳ ಕಾಲ ಕಾರ್ಯಕ್ರಮದಿಂದ ದೂರ ಉಳಿಯಲು ಅವರು ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ.

2/6
ಕೃಷ್ಣ ಅಭಿಷೇಕ್
ಕೃಷ್ಣ ಅಭಿಷೇಕ್

ಸಪ್ನಾ ಪಾರ್ಲರ್ ಪಾತ್ರದಲ್ಲಿ ನಟಿಸಿದ್ದ ಕೃಷ್ಣ ಅಭಿಷೇಕ್ ಕೂಡ ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ. ಹಲವು ವರದಿಗಳಲ್ಲಿ ಕೃಷ್ಣ ಅವರು ಈ ಕಾರ್ಯಕ್ರಮದಿಂದ ಹಿಂದೆ ಸರಿಯಲು ಸಂಭಾವನೆಯೇ ಕಾರಣವೆಂದು ಹೇಳಲಾಗಿದೆ. ಆದಾಗ್ಯೂ ಕಪಿಲ್ ಮತ್ತು ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮೊದಲು ಕೃಷ್ಣ ಅವರು ಬೇರ್ಪಡುವ ವರದಿಗಳನ್ನು ಆಧಾರರಹಿತ ಎಂದು ಹೇಳಿದ್ದರು.

3/6
ಉಪಾಸನಾ ಸಿಂಗ್
ಉಪಾಸನಾ ಸಿಂಗ್

ಕಪಿಲ್ ಅವರ ಚಿಕ್ಕಮ್ಮನ ಪಾತ್ರದಲ್ಲಿರುವ ಉಪಾಸನಾ ಸಿಂಗ್ ಕೂಡ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ಇವರು ‘ಕಪಿಲ್ ಶರ್ಮಾ ಶೋ’ ತೊರೆಯಲು ಕಾರಣವೆಂದರೆ ಕಾರ್ಯಕ್ರಮವೊಂದರ ಸಣ್ಣ ಪಾತ್ರದ ಭಾಗವಾಗಿದ್ದು. ಈ ಶೋನ ಸೃಜನಶೀಲತೆಯ ಬಗ್ಗೆ ಅವರಿಗೆ ಖುಷಿ ಇರಲಿಲ್ಲವಂತೆ.   

4/6
ಸುನಿಲ್ ಗ್ರೋವರ್
ಸುನಿಲ್ ಗ್ರೋವರ್

ಗುತ್ತಿ ಮತ್ತು ಡಾಕ್ಟರ್ ಗುಲಾಟಿ ಪಾತ್ರದಲ್ಲಿ ನಟಿಸಿರುವ ಸುನಿಲ್ ಗ್ರೋವರ್ ಮತ್ತು ಕಪಿಲ್ ನಡುವಿನ ಜಗಳ ಎಲ್ಲರಿಗೂ ಗೊತ್ತೇ ಇದೆ. ಇದಾದ ನಂತರ ಕಪಿಲ್ ಮನವೊಲಿಸಿ ಸುನೀಲ್ ಮತ್ತೆ ಕಾರ್ಯಕ್ರಮಕ್ಕೆ ಬರುತ್ತಾರೆಂದು ಹಲವು ಬಾರಿ ಅನಿಸಿತ್ತಾದರೂ ಅದು ಆಗಲಿಲ್ಲ.

5/6
ಸುಗಂಧ ಮಿಶ್ರಾ
ಸುಗಂಧ ಮಿಶ್ರಾ

ಕಪಿಲ್ ಶರ್ಮಾ ಅವರ ಶೋನಲ್ಲಿ ವಿಭಿನ್ನ ಹೇರ್ ಸ್ಟೈಲ್ ಹೊಂದಿರುವ ಟೀಚರ್ ಪಾತ್ರವೂ ತುಂಬಾ ಫೇಮಸ್ ಆಯಿತು. ಈ ಪಾತ್ರವನ್ನು ಸುಗಂಧ ಮಿಶ್ರಾ ನಿರ್ವಹಿಸಿದ್ದಾರೆ. ಸುಗಂಧ ಕಾರ್ಯಕ್ರಮವನ್ನು ಮಧ್ಯದಲ್ಲೇ ಬಿಟ್ಟರು. ಏಕೆಂದರೆ ಸುನೀಲ್ ಗ್ರೋವರ್ ಕಾರ್ಯಕ್ರಮದಿಂದ ನಿರ್ಗಮಿಸಿದ ನಂತರ ಕಾರ್ಯಕ್ರಮದ ಸ್ವರೂಪದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ಹೀಗಾಗಿ ಅವರಿಗೆ ಮತ್ತೆ ಕರೆ ಬಂದಿಲ್ಲವೆಂದು ಹೇಳಲಾಗಿದೆ.

6/6
ಅಲಿ ಅಸ್ಗರ್
ಅಲಿ ಅಸ್ಗರ್

ಕಪಿಲ್ ಅಜ್ಜಿಯ ಪಾತ್ರವನ್ನು ಅಲಿ ಅಸ್ಗರ್ ನಿರ್ವಹಿಸಿದ್ದಾರೆ. ಸುನಿಲ್ ಗ್ರೋವರ್ ನಿರ್ಗಮಿಸಿದ ನಂತರ ಅಲಿ ಅಸ್ಗರ್ ಸಹ ಕಾರ್ಯಕ್ರಮದಿಂದ ಹೊರನಡೆದರು.ಇದರ ಹಿಂದಿನ ಕಾರಣ ಕಪಿಲ್ ಮತ್ತು ತಂಡದಿಂದ ಬಂದ ಸೃಜನಶೀಲತೆಯ ಬಗೆಗಿನ ಕೆಲವು ಮಾತುಗಳು ಎನ್ನಲಾಗಿದೆ.   





Read More