PHOTOS

ಭಾರತೀಯ ಸೇನೆ ಜೊತೆ ಗುರುತಿಸಿಕೊಂಡ ಕ್ರೀಡಾಪಟುಗಳಿವರು

 ಸಚಿನ್ ತೆಂಡೂಲ್ಕರ್‌ನಿಂದ ಹಿಡಿದು ಎಂಎಸ್ ಧೋನಿವರೆಗೆ ನಮ್ಮ ಕ್ರೀಡಾಪಟುಗಳು ಭಾರತೀಯ ಸೇನೆಯೊಂದಿಗೆ  ಗುರುತಿಸಿಕೊಂಡಿದ್ದಾರೆ.

...
Advertisement
1/6
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ ಅವರು ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ. ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ 2010 ರಲ್ಲಿ ಭಾರತೀಯ ವಾಯುಪಡಯಲ್ಲಿ  ಗ್ರೂಪ್ ಕ್ಯಾಪ್ಟನ್ ಆಗಿ ಸೇರ್ಪಡೆಯಾಗಿದ್ದಾರೆ. 

2/6
ಕಪಿಲ್ ದೇವ್
ಕಪಿಲ್ ದೇವ್

ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡ 2008 ರಲ್ಲಿ ಭಾರತೀಯ ಸೇನೆಗೆ ಸೇರಿದರು. ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ.   

3/6
ಲೆಫ್ಟಿನೆಂಟ್ ಕರ್ನಲ್ ಎಂಎಸ್ ಧೋನಿ
ಲೆಫ್ಟಿನೆಂಟ್ ಕರ್ನಲ್ ಎಂಎಸ್ ಧೋನಿ

ಭಾರತದ ಎರಡನೇ ODI ವಿಶ್ವಕಪ್ ವಿಜೇತ ಮತ್ತು T20 ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಕೂಡ 2011 ರಲ್ಲಿ ಸೇನೆಗೆ ಸೇರಿದರು. 2019 ರ ವಿಶ್ವಕಪ್ ನಂತರ ಧೋನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯೊಂದಿಗೆ ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

4/6
ಅಭಿನವ್ ಬಿಂದ್ರಾ ಕೂಡ ಲೆಫ್ಟಿನೆಂಟ್ ಕರ್ನಲ್
ಅಭಿನವ್ ಬಿಂದ್ರಾ ಕೂಡ ಲೆಫ್ಟಿನೆಂಟ್ ಕರ್ನಲ್

2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ ಗೆದ್ದ ಶೂಟರ್ ಅಭಿನವ್ ಬಿಂದ್ರಾ, 2011 ರಲ್ಲಿ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪದವಿಯನ್ನು ಅಲಂಕರಿಸಿದ್ದಾರೆ. 

5/6
ರಾಜ್ಯವರ್ಧನ್ ಸಿಂಗ್ ರಾಥೋಡ್
ರಾಜ್ಯವರ್ಧನ್ ಸಿಂಗ್ ರಾಥೋಡ್

2004 ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಡಬಲ್ ಟ್ರ್ಯಾಪ್ ಈವೆಂಟ್ ಶೂಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ರಾಜ್ಯವರ್ಧನ್ ಸಿಂಗ್ ರಾಥೋಡ್, 90 ರ ದಶಕದಲ್ಲಿ ಎನ್‌ಡಿಎಯಿಂದ ಪದವಿ ಪಡೆದರು. ಅಂದಿನಿಂದ 2013ರವರೆಗೆ ಸೇನೆಯಲ್ಲಿದ್ದ ಅವರು ಕರ್ನಲ್ ಹುದ್ದೆಯಿಂದ ನಿವೃತ್ತರಾದ ಬಳಿಕ ರಾಜಕೀಯ ಪ್ರವೇಶಿಸಿದರು.

6/6
ನೀರಜ್ ಚೋಪ್ರಾ
ನೀರಜ್ ಚೋಪ್ರಾ

ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಈಗಾಗಲೇ ಭಾರತೀಯ ಸೇನೆಯಲ್ಲಿದ್ದಾರೆ. ನೀರಜ್ 2016 ರಲ್ಲಿ ಭಾರತೀಯ ಸೇನೆಗೆ ಸೇರಿದ್ದಾರೆ. 





Read More