PHOTOS

Teeth Care Tips: ಅಪ್ಪಿತಪ್ಪಿಯೂ ಈ ಪಾನೀಯಗಳನ್ನು ಸೇವಿಸಬೇಡಿ, ಹಲ್ಲುಗಳಿಗೆ ಮಾರಕ!

Teeth Care Tips: ಹಲ್ಲುಗಳ ಆರೋಗ್ಯಕ್ಕೆ ಕೆಲವು ಪಾನೀಯಗಳಿಂದ ನೀವು ದೂರವಿರಬೇಕು. ವಿಶೇಷವಾಗಿ ಟೀ-ಕಾಫಿ ಸೇನವೆ, ಹೆಚ್ಚಾಗಿ ತಣ್ಣೀರು ಸ...

Advertisement
1/5
ಡಯಟ್ ಸೋಡಾ
ಡಯಟ್ ಸೋಡಾ

ಡಯಟ್ ಸೋಡಾವು ಆಮ್ಲೀಯ ಗುಣಗಳನ್ನು ಹೊಂದಿದ್ದು, ಅದು ಹಲ್ಲುಗಳ ದಂತಕವಚವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ನೀವು ಆದಷ್ಟು ಡಯಟ್ ಸೋಡಾವನ್ನು ಸೇವಿಸದಿರಲು ಪ್ರಯತ್ನಿಸಿ.

2/5
ಸಕ್ಕರೆ ಮತ್ತು ಆಮ್ಲೀಯ ಪಾನೀಯ
ಸಕ್ಕರೆ ಮತ್ತು ಆಮ್ಲೀಯ ಪಾನೀಯ

ನೀವು ಸಕ್ಕರೆ ಮತ್ತು ಆಮ್ಲೀಯ ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತೀರಾ? ಇದರ ಬಗ್ಗೆ ನೀವು ಜಾಗರೂಕರಾಗಿರಬೇಕು, ಏಕೆಂದರೆ ಅದು ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಹಾಳುಮಾಡುತ್ತದೆ. ಅದಕ್ಕಾಗಿಯೇ ಸಕ್ಕರೆ ಪಾನೀಯಗಳನ್ನು ಸೇವಿಸಬೇಡಿ.

3/5
ಚಹಾ ಸೇವನೆ
ಚಹಾ ಸೇವನೆ

ಚಹಾ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇಡೀ ಪ್ರಪಂಚದಲ್ಲಿಯೇ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಆದರೆ ಚಹಾ ನಿಮ್ಮ ಹಲ್ಲುಗಳಿಗೆ ತುಂಬಾ ಹಾನಿಕಾರಕ. ಹೀಗಾಗಿಯೇ ಆದಷ್ಟು ಚಹಾ ಸೇವಿಸುವುದರಿಂದ ದೂರವಿರುವುದು ಉತ್ತಮ.

4/5
ಕಾಫಿ ಸೇವನೆ
ಕಾಫಿ ಸೇವನೆ

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ತಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಕಾಫಿ ನಿಮ್ಮ ಹಲ್ಲುಗಳನ್ನು ಹಾಳುಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅತಿಯಾಗಿ ಕಾಫಿ ಸೇವಿಸಿದರೆ ನಿಮ್ಮ ಹಲ್ಲುಗಳಿಗೆ ದೊಡ್ಡ ಹಾನಿಯುಂಟಾಗುತ್ತದೆ.

5/5
ತಣ್ಣೀರು ಸೇವನೆ
ತಣ್ಣೀರು ಸೇವನೆ

ಹಲವರಿಗೆ ತುಂಬಾ ತಣ್ಣೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಹೆಚ್ಚು ತಣ್ಣೀರು ಕುಡಿಯುವುದರಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಎಂದಿಗೂ ಹೆಚ್ಚಾಗಿ ತಣ್ಣಗಿರುವ ನೀರನ್ನು ಸೇವಿಸಬಾರದು ಅಂತಾ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.





Read More