PHOTOS

ಟೀಂ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅತ್ತಿಗೆ ಯಾರು ಗೊತ್ತಾ? ಪತ್ನಿ ನತಾಶಾಗಿಂತಲೂ ಸಖತ್‌ ಕ್ಯೂಟ್‌ ಈಕೆ!

Hardik Pandya Sister In law: ಭಾರತ ತಂಡದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ 11, 1993 ರಂದು ಭಾರತದ ಗುಜರಾತ್‌ನ ಸೂರತ್‌ನ ಚೋರಿಯಾಸಿಯಲ್ಲಿ ಸಾಧಾರಣ ಹಿನ್ನೆಲೆಯ...

Advertisement
1/5

ಹಾರ್ದಿಕ್ ಪಾಂಡ್ಯಗೆ ಸಹೋದರಿ ಇಲ್ಲ. ಅವರಿಗಿರುವುದು ಒಬ್ಬ ಹಿರಿಯ ಸಹೋದರ ಮಾತ್ರ.. ಅವರೂ ವೃತ್ತಿಪರ ಕ್ರಿಕೆಟರ್..‌ ಪಾಂಡ್ಯ ಸಹೋದರರಿಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಟೀಂ ಇಂಡಿಯಾ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ..   

2/5

ಇನ್ನು ಹಾರ್ದಿಕ್ ಪಾಂಡ್ಯ ಅವರ ಅತ್ತಿಗೆ ಪಂಖೂರಿ ಶರ್ಮಾ.. ಇವರು 27 ಡಿಸೆಂಬರ್ 2017 ರಂದು ಕೃನಾಲ್ ಪಾಂಡ್ಯ ಅವರನ್ನು ಮದುವೆಯಾಗಿ ಪಾಂಡ್ಯ ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.  

3/5

 ಮದುವೆಗೂ ಮುನ್ನ ಪಂಖೂರಿ ಶರ್ಮಾ ಮಾಡೆಲ್‌ ಆಗಿದ್ದರು.. ಕೆಲವು ವರದಿಗಳ ಪ್ರಕಾರ 2016 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಕೃನಾಲ್ ಪಾಂಡ್ಯ ಪಂಖುರಿ ಶರ್ಮಾ ಅವರನ್ನು ಭೇಟಿಯಾದರು. ಅಲ್ಲಿ ಚಿಗುರಿದ ಸ್ನೇಹ ಪ್ರೀತಿಯಾಗಿ ಪರಿವರ್ತನೆ ಹೊಂದಿ ಇಬ್ಬರೂ ಮದುವೆಯಾದರು..   

4/5

ಕೃನಾಲ್ ಪಾಂಡ್ಯ ಡಿಸೆಂಬರ್ 27, 2017 ರಂದು ಮುಂಬೈನ JW ಮ್ಯಾರಿಯಟ್, ಜುಹುದಲ್ಲಿ ಪಂಖೂರಿ ಶರ್ಮಾ ಅವರನ್ನು ವಿವಾಹವಾದರು. ಅಂಬಾನಿ, ಅಮಿತಾಭ್ ಬಚ್ಚನ್, ಇರ್ಫಾನ್ ಪಠಾಣ್ , ರೋಹಿತ್ ಶರ್ಮಾ ಮತ್ತು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ವಿವಾಹದ ಜೊತೆಗೆ ಆರತಕ್ಷತೆಯಲ್ಲಿಯೂ ಭಾಗವಹಿಸಿದ್ದರು..   

5/5

ಕೃನಾಲ್ ಹಾಗೂ ಪಂಖುರಿ ಇಬ್ಬರೂ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.. ಅಲ್ಲದೇ ಪಂಖುರಿ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಅವರೊಂದಿಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ..   





Read More